ತಮ್ನಾರ್ ಯೋಜನೆ ಮಧ್ಯದಲ್ಲಿ ಅರಣ್ಯವಿದೆ. ಕಾಡು ಪ್ರಾಣಿಗಳಿರುವ ಅಭಿಯಾರಣ್ಯ ಮಧ್ಯದಲ್ಲಿ ಈ ಯೋಜನೆ ಪ್ರಾರಂಭಿಸಬೇಕೆಂದು ಪ್ರಧಾನಿ ಮೋದಿ ಹೇಳುತ್ತಾರೆ. ಜನಪರ ಸಂಘಟನೆಗಳು ಸಾಕಷ್ಟು ಹೋರಾಟ ಮಾಡಿದರೂ ಪ್ರಧಾನಿಗಳು ಮಹದಾಯಿ ಬಗ್ಗೆ ಯಾಕೆ ಮೌನಿಯಾಗಿದ್ದಾರೆ ಎಂದು ರೈತ ಹೋರಾಟಗಾರ ಸಿದ್ದಣ್ಣ ತೇಜಿ ಪ್ರಶ್ನಿಸಿದರು.
ಹುಬ್ಬಳ್ಳಿಯ ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ವತಿಯಿಂದ ಕಳಸಾ ಬಂಡೂರಿ ಯೋಜನೆ ಜಾರಿಯಾಗದ ಹಿನ್ನೆಲೆಯಲ್ಲಿ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ರೈತ ಹೋರಾಟಗಾರ ಸಿದ್ದಣ್ಣ ತೇಜಿ, ಕಳೆದ 40 ವರ್ಷಗಳಿಂದ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರು, ವ್ಯವಸಾಯಕ್ಕೆ ಹಾಗೂ ಕಾರ್ಖಾನೆಗಳಿಗೆ ನೀರು ಬೇಕೆಂದು ನಿರಂತರ ಹೋರಾಟ ನಡೆಯುತ್ತಾ ಬಂದಿದೆ. ತಾರತಮ್ಯ ಇರುವುದರಿಂದ ಯೋಜನೆ ಪರಿಪೂರ್ಣಗೊಂಡಿಲ್ಲ. ಪ್ರಧಾನಿ ಮೋದಿಯವರು ಗೋವಾ ಮತ್ತು ತಮ್ನಾರ್ 400 ಕೆ ವಿ ವೈರ್‌ನ ಟವರ್ ಕೂಡಿಸುವ ಮೂಲಕ ಯೋಜನೆ ಪ್ರಾರಂಭಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ರೈತ, ಕಾರ್ಮಿಕ, ಕನ್ನಡ, ದಲಿತ, ಜನಪರ ಸಂಘಟನೆಗಳು ಸಾಕಷ್ಟು ಹೋರಾಟ ಮಾಡಿದರೂ ಪ್ರಧಾನಿಗಳು ಮಹದಾಯಿ ಬಗ್ಗೆ ಮೌನಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ನಾರ್ ಯೋಜನೆ ಮಧ್ಯದಲ್ಲಿ ಅರಣ್ಯವಿದೆ. ಕಾಡು ಪ್ರಾಣಿಗಳಿರುವ ಅಭಿಯಾರಣ್ಯ ಮಧ್ಯದಲ್ಲಿ ಈ ಯೋಜನೆ ಪ್ರಾರಂಭಿಸಬೇಕೆಂದು ಪ್ರಧಾನಿ ಹೇಳುತ್ತಾರೆ. ಕಾಡಿನ ಮಧ್ಯದಲ್ಲಿ ಸರಿಸುಮಾರು ಒಂದು ಲಕ್ಷ ಮರಗಳು ಕಟಾವು ಆಗುತ್ತವೆ. ಕಾಡು ಪ್ರಾಣಿಗಳಿವೆ. ತಮ್ನಾರ್ ಯೋಜನೆಯಲ್ಲಿರುವ ಪ್ರಧಾನಿಗಳಿಗೆ ಏಕೀಕರಣದಲ್ಲಿ ಕರ್ನಾಟಕ ರಾಜ್ಯ ಇರುವುದು ಗೊತ್ತಾಗಿಲ್ಲ ಅನಿಸುತ್ತದೆ. ಮಹದಾಯಿ ವಿಚಾರದಲ್ಲಿ ವನ್ಯಜೀವಿಗಳ ರಾಷ್ಟ್ರೀಯ ಸಮಿತಿ ಮಾಡುವ ‘ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ’ ಎಂಬ ತಾರತಮ್ಯವನ್ನು ಉತ್ತರ ಕರ್ನಾಟಕ ಖಂಡಿಸುತ್ತದೆ ಎಂದು ಗುಡುಗಿದರು.
ಇದನ್ನು ಓದಿದ್ದೀರಾ? ಧಾರವಾಡ | ವಕ್ಫ್ ಆಸ್ತಿ ಪ್ರಕರಣಗಳನ್ನು ಒಂದು ತಿಂಗಳಲ್ಲಿ ಪರಿಹರಿಸಬೇಕು: ಸಚಿವ ಜಮೀರ್ ಅಹ್ಮದ್ ಸೂಚನೆ
ರಾಜ್ಯ ಸರ್ಕಾರ ಕಳಸಾ ಬಂಡೂರಿ ವಿಚಾರದಲ್ಲಿ ರಾಜಕಾರಣ ಮಾಡುವುದು ಬೇಡ. ಮತ್ತು ಒಬ್ಬರ ಮೇಲೆ ಮತ್ತೊಬ್ಬರು ಆಪಾದನೆ ಮಾಡದೆ ಬಹಿರಂಗ ಚರ್ಚೆಗೆ ಬಂದು ಮಹದಾಯಿ ಸಮಸ್ಯೆಗೆ ಇತ್ಯರ್ಥಗೊಳಿಸಲು ಹುಬ್ಬಳ್ಳಿಯಲ್ಲಿ ವೇದಿಕೆ ಕಲ್ಪಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳು ಆ ವೇದಿಕೆಗೆ ಬಂದು ಮಹದಾಯಿ ಸಮಸ್ಯೆಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲು ಕರೆಕೊಟ್ಟರು.