ಜ್ಞಾನ ಪ್ರಾಪ್ತಿಗಾಗಿ ವಿದ್ಯಾರ್ಥಿಗಳು ದೇಶ ಸುತ್ತಬೇಕು ಅಥವಾ ಕೋಶ ಓದಿ ಜ್ಞಾನ ಗಳಿಸಬೇಕು ಎಂದು ಐ.ಕ್ಯೂ. ಎ.ಸಿ ಸಂಯೋಜಕರು ಹಾಗೂ ಭೂಗೋಳಶಾಸ್ತ್ರದ ಪ್ರಾಧ್ಯಾಪಕ ಡಾ. ಎನ್.ಬಿ.ನಾಲತವಾಡ ಹೇಳಿದರು.
ಹುಬ್ಬಳ್ಳಿಯ ಉಣಕಲ್ ಕ್ರಾಸ್ ನ ಹತ್ತಿರವಿರುವ ಚಂದ್ರಮೌಳೇಶ್ವರ ದೇವಾಲಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರವಾಸ ಕೈಗೊಳ್ಳುವುದು, ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಗಳಿಸಿದ ಜ್ಞಾನ ಶಾಶ್ವತವಾಗಿ ಉಳಿಯುತ್ತದೆ. ಜ್ಞಾನ ಪ್ರಾಪ್ತಿಗಾಗಿ ವಿದ್ಯಾರ್ಥಿಗಳು ದೇಶ ಸುತ್ತಬೇಕು ಅಥವಾ ಕೋಶ ಓದಿ ಜ್ಞಾನ ಗಳಿಸಬೇಕು. ಮತ್ತು ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಸರಳವಾಗಿ ಅರಿಯಲು ಸಹಾಯವಾಗುತ್ತದೆ ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸಯ್ಯದ್ ತಾಜುನ್ನಿಸಾ ಮಾತನಾಡಿ, ಚಂದ್ರಮೌಳೇಶ್ವರ ದೇವಸ್ಥಾನದ ಐತಿಹಾಸಿಕ ಹಿನ್ನೆಲೆ ಹಾಗೂ 11, 12ನೇ ಶತಮಾನಕ್ಕೆ ಸೇರಿದ ಕಲ್ಯಾಣಿ ಚಾಲುಕ್ಯರ ವಾಸ್ತುಶಿಲ್ಪ ಶೈಲಿಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಇದನ್ನೂ ಓದಿ ಹುಬ್ಬಳ್ಳಿ | ಮಗುವನ್ನಿಟ್ಟುಕೊಂಡು ಬೈಕ್ ಕಳ್ಳತನ: ಇಬ್ಬರು ಮಹಿಳೆಯರು ಸೇರಿ ಐವರ ಬಂಧನ
ಎನ್.ಎಸ್.ಎಸ್ ಅಧಿಕಾರಿಗಳು ಹಾಗೂ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎನ್.ವಿ.ಗುದಗನ್ನವರ್ ಸ್ವಾಗತಿಸಿದರು. ಪ್ರೊ.ಮುಬಾರಕ್ ಮುಲ್ಲಾ ವಂದನಾರ್ಪಣೆ ಮಾಡಿದರು. ಡಾ.ಸೌಭಾಗ್ಯ ಜಾದವ್ ಕಾರ್ಯಕ್ರಮ ನಿರೂಪಿಸಿದರು. ಅಂಜುಮನ್ ಕಲಾ, ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಇದನ್ನು