ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ಹುಬ್ಬಳ್ಳಿ ಎಪಿಎಂಸಿ’ಯ ‘ಸಂಡೇ ಬಜಾರ್’ಅನ್ನು ಅಧಿಕಾರಿಗಳು ಸ್ವಚ್ಛಗೊಳಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ರೈತರ ಅನುಕೂಲಕ್ಕಾಗಿ 2015ನೇ ಸಾಲಿನ ಅನುದಾನದ ಅಡಿಯಲ್ಲಿ ನಿರ್ಮಾಣವಾದ ಹುಬ್ಬಳ್ಳಿ ಎಪಿಎಂಸಿ’ಯ ‘ಸಂಡೇ ಬಜಾರ್’ ಮಾರುಕಟ್ಟೆಯು ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿತ್ತು. ಈ ಕುರಿತು ಈದಿನ.ಕಾಮ್ ವಿಡಿಯೋ ಸುದ್ಧಿ ಪ್ರಕಟಿಸಿದ ಹಿನ್ನೆಲೆಯಲ್ಲಿ ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಕೂಡಲೇ ಸಂಡೇ ಬಜಾರ್ ಸಂಪೂರ್ಣ ಸ್ವಚ್ಛಗೊಳಿಸಿದ್ದಾರೆ.
ಈ ಹಿಂದೆ ಈದಿನ ವರದಿ ಮಾಡಿದ್ದಾಗ; ರೈತಪರ ಹೋರಾಟಗಾರರು, ದಲಿತ ಸಂಘಟಕರು, ಹಮಾಲಿ ಸಂಘದ ಪದಾಧಿಕಾರಿಗಳು ಈದಿನ.ಕಾಮ್ ಜೊತೆಗೆ ಮಾತನಾಡಿ ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಸ್ತುತ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಭಾನುವಾರ ಸಂತೆ ಮಾರುಕಟ್ಟೆಯಲ್ಲಿ ಬೆಳೆದ ಕಸ ತೆಗೆಯಿಸಿ, ಸ್ವಚ್ಛಗೊಳಿಸಿದೆ.
ಈ ಮಾರುಕಟ್ಟೆಯಲ್ಲಿ ಒಟ್ಟು 14 ಅಂಗಡಿಗಳಿದ್ದು, ಇನ್ನಾದರೂ ಟೆಂಡರ್ ಕರೆದು ರೈತರ ವ್ಯಾಪಾರಕ್ಕೆ ಮತ್ತು ಕಾರ್ಮಿಕರಿಗೆ ಅನುಕೂಲ ಮಾಡಿಕೊಡುತ್ತಾರೆಯೆ? ಎಂದು ಕಾದುನೋಡಬೇಕಿದೆ.