ಬಸವ ಜಯಂತಿ ಪ್ರಯುಕ್ತ ಜಿಲ್ಲೆಯಾದ್ಯಂತ ಅರ್ಥಪೂರ್ಣವಾಗಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಆಚರಣೆ ಮಾಡಿದ್ದು, ಹುಬ್ಬಳ್ಳಿ ಬಸವ ಮಂಟಪದಿಂದ ನಡೆದ ಮೆರವಣಿಗೆಯಲ್ಲಿ ಮಹಿಳೆಯರು ಬಸವಣ್ಣನ ಹಾಡುಗಳಿಗೆ ಹೆಜ್ಜೆ ಹಾಕಿದರು. ಮತ್ತು ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
ಬಸವಬಸವಣ್ಣನವರ ಷಟಸ್ಥಳ ಧ್ವಜವನ್ನಿಡಿದು ನಗರದ ಮುಖ್ಯ ರಸ್ತೆಗಳ ಮೂಲಕ ಮೆರವಣಿಗೆ ಹೊರಟ ಬಸವಾಭಿಮಾನಿಗಳು ಬಸವ ಜೈಕಾರ ಕೂಗುತ್ತ, ಎಲ್ಲ ಸಮುದಾಯದವರು ಸೇರಿಕೊಂಡು ಆಚರಿಸಿದರು. ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಮನೆಬಿಟ್ಟು ಬಂದ ಬಸವಣ್ಣನವರನ್ನು ನೆನಯುತ್ತ, ಅವರ ಹೆಸರು ಕೂಗಿ ಕೊಂಡಾಡುತ್ತಾ, ಮಹಿಳೆಯರು ಹೆಜ್ಜೆ ಹಾಕಿದರು. ಇನ್ನು ಪಕ್ಷಭೇದ ಮರೆತು ಎಲ್ಕ ಜಾತಿ, ಸಮುದಾಯ, ಪಕ್ಷದವರೂ ಬಸವ ಸಂಸ್ಕೃತಿಯ ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಇದನ್ನು ಓದಿದ್ದೀರಾ? ಧಾರವಾಡ | ಕೊಲೆ ಪ್ರಕರಣದಲ್ಲಿ ಬಂಧನವಾಗಿ ಹೊರಗೆ ಬಂದಿದ್ದ ವ್ಯಕ್ತಿಯ ಭೀಕರ ಹತ್ಯೆ
ಈ ಕುರಿತು ಹುಬ್ಬಳ್ಳಿಯಲ್ಲಿ ಕುಮಾರಣ್ಣ ಪಾಟೀಲ ಮಾತನಾಡಿ, ಬಸವಣ್ಣ ಸರ್ವ ಸಮಾನತೆ ಸಾರಿದ ಮಹಾ ಮಾನವತಾವಾದಿ ಆಗಿದ್ದಾರೆ. ಅವರು ಒಂದು ಜಾತಿಯ ಸ್ವತ್ತಲ್ಲ. ಧಾರ್ಮಿಕ ಮತ್ತು ಸಾಮಾಜಿಕವಾಗಿ ತುಳಿತಕ್ಕೊಳಗಗಾಗಿದ್ದ ತಳಸಮುದಾಯಗಳನ್ನು ಮೇಲೆತ್ತುವ ಕಾರ್ಯವನ್ನು ಮಾಡಿದ್ದಾರೆ. ಹೀಗಾಗಿ ಅವರ ಜಯಂತೋತ್ಸವದಲ್ಲಿ ಎಲ್ಲರೂ ಭೇದ ಮರೆತು, ಒಂದಾಗಿ ಬೆರೆತು ಬಸವ ಸಂಸ್ಕೃತಿ ಉಳಿವಿಗಾಗಿ ಪಾಲ್ಗೊಂಡಿದ್ದಾರೆ ಎಂದರು.