ಮೈಸೂರು ಜಿಲ್ಲೆ ಹುಣಸೂರಿನ ನಗರಸಭೆ ಸಭಾಂಗಣದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಮಾಲತೀಶ್ ನೇತೃತ್ವದಲ್ಲಿ ಕುಂದು ಕೊರತೆ ಸಭೆ ನಡೆಯಿತು.
ಪರಿಶಿಷ್ಟ ಜಾತಿಗೆ ಸೇರಿದ ಸಾಗುವಳಿ ಭೂಮಿ ಸರ್ವೇ ನಂಬರ್ 47, 60, 61 ರಲ್ಲಿ ಬಿಳಿಕೆರೆ ಕ್ಷೇತ್ರ ವ್ಯಾಪ್ತಿಯ ಕಂದಾಯ ಇಲಾಖೆ ನಿರೀಕ್ಷಕ ಮಂಜುನಾಥ್, ಬಂಡವಾಳ ಶಾಹಿ ವ್ಯಕ್ತಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿ ದಾಖಲೆ ಸಮೇತ ದೂರು ನೀಡಿದರು.
ರೈತ ಸಂಘ ಹಾಗೂ ದಸಂಸ ಮುಖಂಡರ ಮನವಿ ಅನುಸಾರ ಲೋಕಾಯುಕ್ತ ಡಿವೈಎಸ್‌ಪಿ ಮಾಲತೀಶ್ ಹುಣಸೂರು ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರರಿಗೆ ಪತ್ರ ಬರೆದು ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸಭೆಗೆ ಗೈರಾಗಿದ್ದ ಮಂಜುನಾಥ್ ವಿರುದ್ಧ ತನಿಖೆಗೆ ಆದೇಶ ನೀಡಿದರು.
ಹುಣಸೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಕಟ್ಟೆಮಳಲವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಸತಿ, ನಿವೇಶನ ಕುರಿತಾದ ಅರ್ಜಿಗಳು, ಫಲಾನುಭವಿಗಳಿಗೆ ಮಂಜೂರಾಗದೆ ಇರುವುದು, ಆಜಾದ್ ನಗರದ ಸರ್ಕಾರಿ ಶಾಲೆಗೆ ನಿವೇಶನ ಕೋರಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ದಸಂಸ ಹಿರಿಯ ಮುಖಂಡ ನಿಂಗರಾಜ್ ಮಲ್ಲಾಡಿ ಮನವಿ ಸಲ್ಲಿಸಿದರು.
ಹುಣಸೂರು ತಾಲೂಕಿನಲ್ಲಿರುವ ಪ್ರಮುಖ ಸಮಸ್ಯೆಗಳನ್ನು ಹೊತ್ತು ತಂದಿದ್ದ ಸಾರ್ವಜನಿಕರ ಅಹವಾಲನ್ನು ಲೋಕಾಯುಕ್ತ ಅಧಿಕಾರಿಗಳು ಆಲಿಸಿದರು. ಸಭೆಯಲ್ಲಿನ ದೂರುಗಳ ಮಹಾಪೂರಕ್ಕೆ ಸೂಕ್ತ ಕ್ರಮವಹಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರು.
ಇದನ್ನು ಓದಿದ್ದೀರಾ? ಮಂಡ್ಯ | ಯುವಜನತೆಯ ಒಲವು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆ ಇರಲಿ: ಜಿಲ್ಲಾಧಿಕಾರಿ ಡಾ. ಕುಮಾರ್
ಸಭೆಯಲ್ಲಿ ನಗರಸಭೆ ಆಯುಕ್ತೆ ಮಾನಸ, ಲೋಕಾಯುಕ್ತ ವೃತ್ತ ನಿರಕ್ಷಕಿ ರೂಪಶ್ರೀ, ಮಾನಸ, ನಗರ ಸಭೆ ಸದಸ್ಯರುಗಳು,
ಅಧಿಕಾರಿಗಳು ಇದ್ದರು.