ಬಾಬಾ ಸಿದ್ದೀಕಿ ಸತ್ತಿದ್ದಾರೆಂದು ದೃಢಪಡಿಸಿಕೊಳ್ಳಲು ಆಸ್ಪತ್ರೆ ಬಳಿಯೇ 30 ನಿಮಿಷ ಕಾದುಕುಳಿತಿದ್ದ ಶೂಟರ್

Date:

ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್ ಗೌತಮ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಸಿದ್ದೀಕಿ ಅವರನ್ನು ಹತ್ಯೆಗೈದ ಬಳಿಕ, ಅವರು ಸತ್ತಿದ್ದಾರೆ ಎಂಬುದನ್ನು ದೃಢಪಡಿಸಿಕೊಳ್ಳಲು ಲೀಲಾವತಿ ಆಸ್ಪತ್ರೆಯ ಹೊರಗೆಯೇ ಸುಮಾರು 30 ನಿಮಿಷಗಳ ಕಾಲ ಕಾದುಕುಳಿತಿದ್ದ ಎಂಬುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

- Advertisement -

ಸಿದ್ದೀಕಿ ಅವರ ಮೆಲೆ ಗುಂಡಿನ ದಾಳಿ ನಡೆಸಿದ ಶೂಟರ್, ತಕ್ಷಣವೇ ತನ್ನ ಅಂಗಿಯನ್ನು ಬದಲಾಯಿಸಿದ್ದಾನೆ. ಆಸ್ಪತ್ರೆಯ ಹೊರಗೆ 30 ನಿಮಿಷಗಳ ಕಾಲ ಜನರ ಗುಂಪಿನ ನಡುವೆ ನಿಂತಿದ್ದಾಗಿಯೂ, ಅವರು ಬದುಕುಳಿಯುವುದಿಲ್ಲ ಎಂಬುದು ಖಚಿತವಾದ ಬಳಿಕ, ಅಲ್ಲಿಂದ ತೆರಳಿದ್ದಾಗಿಯೂ ತಿಳಿಸಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಅಕ್ಟೋಬರ್ 12ರಂದು ರಾತ್ರಿ 9:11ರಲ್ಲಿ ಮುಂಬೈನ ಬಾಂದ್ರಾದಲ್ಲಿ ಸಿದ್ದೀಕಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಎದೆಗೆ ಎರಡು ಗುಂಡುಗಳು ತಗುಲಿದ್ದ ಅವರನ್ನು, ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಸ್ಪಂದಿಸದೆ ಅವರು ಸಾವನ್ನಪ್ಪಿದರು.

ಆರೋಪಿಗಳು ಹೇಳುವಂತೆ, ಅವರ ಆರಂಭಿಕ ಯೋಜನೆಯಂತೆ ಆರೋಪಿಗಳು ತಮ್ಮ ಸಹಚರರಾದ ಧರ್ಮರಾಜ್ ಕಶ್ಯಪ್ ಮತ್ತು ಗುರ್ಮೈಲ್ ಸಿಂಗ್ ಅವರನ್ನು ಉಜ್ಜಯಿನಿ ರೈಲು ನಿಲ್ದಾಣದಲ್ಲಿ ಭೇಟಿಯಾಗಬೇಕಿತ್ತು. ಅಲ್ಲಿಂದ ಅವರನ್ನು ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರೊಬ್ಬರು ವೈಷ್ಣೋ ದೇವಿಗೆ ಕರೆದೊಯ್ಯಬೇಕಿತ್ತು. ಆದರೆ, ಕಶ್ಯಪ್ ಮತ್ತು ಸಿಂಗ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದರಿಂದ ಅವರ ಯೋಜನೆ ವಿಫಲವಾಗಿದೆ.

ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿದ್ದು ಹೇಗೆ?

ಸಿದ್ದೀಕಿ ಮೇಲೆ ದುಂಡಿನ ದಾಳಿ ನಡೆಸಿದ ಗೌತಮ್, ಬಳಿಕ ಕುರ್ಲಾಗೆ ತೆರಳಿದ್ದಾನೆ. ಅಲ್ಲಿಂದ, ಥಾಣೆಗೆ ರೈಲಿನಲ್ಲಿ ತೆರಳಿದ್ದಾನೆ. ಬಳಿಕ, ಪುಣೆಗೆ ಹೋಗಿದ್ದಾನೆ. ಅಲ್ಲಿ ಆತ ತನ್ನ ಬಳಿಯಿದ್ದ ಫೋನ್‌ಅನ್ನು ಬಿಸಾಡಿದ್ದಾನೆ. ಏಳು ದಿನಗಳ ಕಾಲ ಪುಣೆಯಲ್ಲಿಯೇ ಉಳಿದಿದ್ದ ಗೌತಮ್, ನಂತರ ಉತ್ತರ ಪ್ರದೇಶದ ಝಾನ್ಸಿ ಮತ್ತು ಲಕ್ನೋಗೆ ಹೋಗಿದ್ದಾನೆ. ಭಾನುವಾರ, ಉತ್ತರ ಪ್ರದೇಶದ ನನ್ಪಾರಾ ಪಟ್ಟಣದಿಂದ ಸುಮಾರು 10 ಕಿಮೀ ದೂರದಲ್ಲಿರುವ ತೀರಾ ಹಿಂದುಳಿದ ಕುಗ್ರಾಮದಲ್ಲಿ ಆತ ಬಚ್ಚಿಟ್ಟುಕೊಂಡಿದ್ದ. ಆತನನ್ನು ಅಲ್ಲಿ ಪೊಲೀಸರು ಬಂಧಿಸಿದ್ದಾರೆ.

ಗೌತಮ್‌ನ ನಾಲ್ವರು ಸ್ನೇಹಿತರ ಮೊಬೈಲ್ ಫೋನ್‌ಗಳಲ್ಲಿ ನಡೆದಿದ್ದ ತಡರಾತ್ರಿಯ ಸಂಭಾಷಣೆಗಳು ಅನುಮಾನ ಹುಟ್ಟುಹಾಕಿದ್ದವು. ಲಕ್ನೋದಲ್ಲಿ ಖರೀದಿಸಿದ ಮೊಬೈಲ್ ಫೋನ್‌ಗಳಲ್ಲಿ ಇಂಟರ್ನೆಟ್ ಕರೆಗಳ ಮೂಲಕ ಗೌತಮ್‌ನೊಂದಿಗೆ ಅವರು ನಿರಂತರ ಸಂಪರ್ಕದಲ್ಲಿದ್ದರು. ಮುಂಬೈ ಕ್ರೈಂ ಬ್ರಾಂಚ್ ಮತ್ತು ಉತ್ತರ ಪ್ರದೇಶ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಪ್ರಮುಖ ಆರೋಪಿ ಗೌತಮ್‌ನನ್ನು ಬಂಧಿಸುವಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದವು. ಗೌತಮ್‌ನ ಸಹಚರ ಅನುರಾಗ್ ಕಶ್ಯಪ್, ಜ್ಞಾನ್ ಪ್ರಕಾಶ್ ತ್ರಿಪಾಠಿ, ಆಕಾಶ್ ಶ್ರೀವಾಸ್ತವ ಹಾಗೂ ಅಖಿಲೇಂದ್ರ ಪ್ರತಾಪ್ ಸಿಂಗ್ ಎಂಬ ಆರೋಪಿಗಳನ್ನು ನೇಪಾಳ ಗಡಿಯ ಬಳಿ ಬಂಧಿಸಿದ್ದಾರೆ.

ಈ ನಾಲ್ವರು ಸಹಚರರು ಪ್ರಮುಖ ಆರೋಪಿ ಗೌತಮ್‌ ದೇಶದಿಂದ ಪರಾರಿಯಾಗಲು ಸಹಾಯ ಮಾಡಲು ಯೋಜಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಿರುಪತಿ ಬಳಿ ಭೀಕರ ಬಾಯ್ಲರ್ ಸ್ಫೋಟ: ಐವರು ಕಾರ್ಮಿಕರ ಸಾವು, 10 ಮಂದಿಗೆ ಗಂಭೀರ ಗಾಯ

ಟಿಐಎಲ್ ಹೆಲ್ತ್‌‌ಕೇರ್ ಫಾರ್ಮಾಸ್ಯುಟಿಕಲ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಕನಿಷ್ಠ ಐವರು ಕಾರ್ಮಿಕರು...

‘ದಿಮಾಗಿ ನಕ್ಸಲ್’ ಟೀಕೆಗಳಿಗೆ ಬಗ್ಗದಿರಿ, ಹೋರಾಟ ಮುಂದುವರಿಸಿ: ಪರಿಸರವಾದಿಗಳಿಗೆ ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಓಕಾ ಕರೆ

ಪರಿಸರ ರಕ್ಷಣೆ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತುವ ಹೋರಾಟಗಾರರನ್ನು ‘ದಿಮಾಗಿ...

ಮುಂಬೈ ಪ್ರತಿಭಟನೆ: ಸಿಜೆಪಿ ಆಯೋಜಕರು, 500ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲು

ಮುಂಬೈನ ಪ್ರಸಿದ್ಧ ಶಿವಾಜಿ ಪಾರ್ಕ್‌ನಲ್ಲಿ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ ಆರೋಪದ ಮೇಲೆ...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್ ದೀಪ್ಕೆ ಕುರಿತು ನಡೆದಿದೆ ಚರ್ಚೆ!

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ...