ಹೆಂಡತಿಗೆ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನಲೆ ಆಕೆಯ ಪತಿಗೆ ಬೀದರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಮಹಾರಾಷ್ಟ್ರದ ಕೋತಳಿ ಗ್ರಾಮದ ಶ್ರೀಹರಿ ಜಂಪಾವಾಡ ಅವರ ಮಗಳಾದ ಸುನೀತಾ ಅಲಿಯಾಸ್ ಚಿತ್ರಕಲಾ ಇವರಿಗೆ ಸೋನಾಳವಾಡಿ ಗ್ರಾಮದ ರಮೇಶ ಆನಂದರಾವ ಇವರೊಂದಿಗೆ 9 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಎರಡು ಮಕ್ಕಳಾಗಿದ್ದರು, ಆರೋಪಿಯು ಪತ್ನಿಗೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ, 2018ರ ಡಿಸೆಂಬರ್ 28ರಂದು ರಾತ್ರಿ ಹೆಂಡತಿಯೊಂದಿಗೆ ಜಗಳ ತೆಗೆದು ಅವಳನ್ನು ಹೊಡೆದು, ಕುತ್ತಿಗೆ ಒತ್ತಿ ಕೊಲೆ ಮಾಡಿದ ಬಗ್ಗೆ ಆರೋಪಿ ರಮೇಶ ವಿರುದ್ಧ ಕಮಲನಗರ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಅಧಿಕಾರಿ ದಿಲೀಪ್‌ಕುಮಾರ ಬಿ.ಸಾಗರ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಲಿದ್ದರು.
ಈ ಸುದ್ದಿ ಓದಿದ್ದೀರಾ? ಮೋದಿಯವರ ‘ಚಾರ್ ಸೋ ಪಾರ್’ ಘೋಷಣೆ ಹಿಂದಿನ ಉದ್ದೇಶವೇನು? ಅರಿತಿದ್ದಾರೆಯೇ ‘ಒಬಿಸಿ’ಗಳು!
ಬೀದರನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಕುಮಾರ ಎಂ. ಆನಂದಶೆಟ್ಟಿ ಅವರು ಅಭಿಯೋಜನೆ ಹಾಜರುಪಡಿಸಿದ ಸಾಕ್ಷಿಗಳನ್ನು ಪರಿಗಣಿಸಿ ಸೋನಾಳವಾಡಿ ಗ್ರಾಮದ ರಮೇಶ ಆನಂದರಾವ ಅವರಿಗೆ ಕಠಿಣ ಕಾರಾಗೃಹ ವಾಸದ ಜೀವಾವಧಿ ಶಿಕ್ಷೆ ಹಾಗೂ 5,000 ರೂ.ಗಳ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಅಭಿಯೋಜನಾ ಪರವಾಗಿ ಸರ್ಕಾರಿ ಅಭಿಯೋಜಕ ನಾಗಪ್ಪ ಸಿ.ನಾಕಮನ್ ಅವರು ವಾದ ಮಂಡಿಸಿದರು.