ನಮ್ಮ ಕುಟುಂಬದಲ್ಲಿ ಯಾರೂ ಭ್ರಷ್ಟಾಚಾರ ಮಾಡಿಲ್ಲ, ಲಂಚ ಪಡೆದಿಲ್ಲ. ನಾನೂ ಯಾರಿಂದಲೂ ಲಂಚ ತೆಗೆದುಕೊಂಡಿಲ್ಲ. ನಾನು ಭ್ರಷ್ಟಾಚಾರ ಮಾಡಿದ್ದೇನೆಂದು ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಸಾಬೀತು ಮಾಡಿದರೆ, ನನ್ನ ಇಡೀ ಆಸ್ತಿಯನ್ನು ಅವರಿಗೆ ಬರೆದು ಕೊಡುತ್ತೇನೆ ಎಂದು ದಾವಣಗೆರೆಯ ಬಿಜೆಪಿ ಸಂಸದ ಜಿ.ಎಂ ಸಿದ್ದೇಶ್ವರ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, “ನಮ್ಮ ಆಸ್ತಿ ಬಗ್ಗೆ ಸಚಿವ ಮಲ್ಲಿಕಾರ್ಜುನ ಮಾತನಾಡಿದ್ದಾರೆ. ನಾವೇನು ಕಳ್ಳತನ ಮಾಡಿ, ಭ್ರಷ್ಟಾಚಾರ ಮಾಡಿ ಆಸ್ತಿ ಸಂಪಾದಿಸಿಲ್ಲ. ನಮ್ಮ ಮನೆಯಲ್ಲಿ ಆರು ಮಂದಿ ದುಡಿಯುತ್ತೇವೆ. 1993ಕ್ಕೂ ಇಂದಿಗೂ ನಮ್ಮ ಆಸ್ತಿ ಹೆಚ್ಚಳವಾಗಿದೆ. ನಮ್ಮ ಅಪ್ಪನ ಕಾಲದಿಂದಲೂ ನಾವು ಶ್ರೀಮಂತರು. ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೂ ನಾವು ಸಾಲ ಕೊಟ್ಟಿದ್ದೆವು” ಎಂದು ಹೇಳಿದ್ದಾರೆ.
“1997ರಲ್ಲಿಯೇ ನಮ್ಮ ಆದಾಯ 6 ಕೋಟಿ ರೂ. ಇದೆಯೆಂದು ಘೋಷಿಸಿದ್ದೆ. ಆ ವರ್ಷ 1.85 ಕೋಟಿ ರೂ. ತೆರಿಗೆ ಕಟ್ಟಿದ್ದೆ. ನಾನು ಅಕ್ರಮ ನಡೆಸಿದ್ದೇನೆ ಎನ್ನುವವರು ತನಿಖೆ ನಡೆಸಲು, ನನ್ನದೇನೂ ಅಭ್ಯಂತರವಿಲ್ಲ. ಬಿಜೆಪಿ ಸರ್ಕಾರದಲ್ಲಿ ಮಾತ್ರವಲ್ಲ, ಮಲ್ಲಿಕಾರ್ಜುನ ಅವರು ಸಚಿವರಾಗಿದ್ದ ಅವಧಿಯಿಂದ ಈಚೆಗೆ ನಡೆದಿರುವ ಕಾಮಗಾರಿಗಳ ಬಗ್ಗೆಯೂ ತನಿಖೆಯಾಗಲಿ. ನಾನು ಭ್ರಷ್ಟಾಚಾರ ಮಾಡಿದ್ದೇನೆಂದು ಸಾಬೀತು ಮಾಡಿದರೆ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ಹೇಳಿದ್ದಾರೆ.
ಅದು ಅವರಿಗೆ ಫ್ರೀ ಆಗಿ ಸಿಕ್ಕಿದ್ದು, ಕೊಡ ಲೂಬಹುದು.