ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಲೇಡಿಹಿಲ್ ಸುತ್ತಲೂ ಸಂಜೆ ಹೊತ್ತು ಟೀ, ಕಾಫಿ, ಚುರುಮುರಿ, ಆಮ್ಲೆಟ್, ಫ್ರುಟ್ ಸಲಾಡ್ ವ್ಯಾಪಾರ ಮಾಡುತ್ತಿದ್ದ ಬಿಜೆಪಿ ಆಡಳಿತರನ್ನು ಬಿಜೆಪಿ ಆಡಳಿತದ ಮಂಗಳೂರು ನಗರ ಪಾಲಿಕೆ ‘ಟೈಗರ್ ಕಾರ್ಯಾಚರಣೆ’ ಅಂತ ಹೆಸರಿಟ್ಟು ಬುಲ್ಡೋಜರ್ ಬಳಸಿ ಕಿತ್ತು ಬಿಸಾಕಿತ್ತು. ಇದಕ್ಕೆ ಟ್ರಾಫಿಕ್ ಕಿರಿಕಿರಿ, ಪಾರ್ಕಿಂಗ್ ಸಮಸ್ಯೆ, ಫುಟ್ ಪಾತ್ ಅತಿಕ್ರಮಣ ತೆರವು ಅಂತ ಕುಂಟು ನೆಪಗಳನ್ನು ಬಿಜೆಪಿ ಮೇಯರ್, ಶಾಸಕರು ನೀಡಿದ್ದರು.
ಈ ನಡುವೆಯೇ ಇತ್ತೀಚೆಗೆ ಅದೇ ಲೇಡಿಹಿಲ್ ಸರ್ಕಲ್ ಸುತ್ತಲೂ ಬಿಜೆಪಿ ಶಾಸಕರ ನೇತೃತ್ವದಲ್ಲಿ ಐದು ದಿನಗಳ ಅದ್ದೂರಿ ಫುಡ್ ಫೆಸ್ಟಿವಲ್ ನಡೆಯುತ್ತಿದೆ. ಅಂದರೆ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಜನವರಿ 18 ರಿಂದ 22ರ ವರೆಗೆ ಐದು ದಿನಗಳ ಕಾಲ ನಗರದಲ್ಲಿ ‘ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ’ ಹಮ್ಮಿಕೊಂಡಿದೆ. ಇದಕ್ಕೆ ಮಂಗಳೂರು ಭಾಗದ ಪ್ರಗತಿಪರ ಹೋರಾಟಗಾರರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಬೀದಿ ಬದಿ ವ್ಯಾಪಾರಸ್ಥರನ್ನು ಬುಲ್ಡೋಜರ್ ಬಳಸಿ ಓಡಿಸಿದ ಅದೇ ಸ್ಥಳಗಳಲ್ಲಿ ನೂರಾರು ಸ್ಟಾಲ್‌ಗಳನ್ನು ಹಾಕಲಾಗಿದೆ.
ಈ ಫುಡ್ ಫೆಸ್ಟಿವಲ್‌ಗೆ ಮೊದಲ ದಿನದಂದು ಮುಂಬೈಯ ಡಾಲಿ ಚಾಯ್‌ವಾಲ ಅವರು ಭಾಗವಹಿಸಿದ್ದರು. ಡಾಲಿ ಚಾಯ್‌ವಾಲ ಭಾಗವಹಿಸಿದ ಬೆನ್ನಲ್ಲೇ ಭಾರೀ ಚರ್ಚೆಗೂ ಇದು ಕಾರಣವಾಗಿದೆ.
ಈ ಎಲ್ಲ ಚರ್ಚೆಯ ನಡುವೆಯೇ ಮಂಗಳೂರಿನ ಬೀದಿಬದಿ ವ್ಯಾಪಾರಸ್ಥರ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿರುವ ಕರಾವಳಿಯ ನಿವಾಸಿ, ಕನ್ನಡ ಸಿನಿಮಾ ರಂಗದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ,”ಡಾಲಿ ಚಾಯ್ ವಾಲ ಮಂಗಳೂರಿನ ಬೀದಿ ಬದಿ ವ್ಯಾಪಾರಸ್ಥನಾಗಿರುತ್ತಿದ್ದರೆ ಆತನ ಸ್ಟಾಲ್ ಕೂಡ ಬುಲ್ಡೋಜ್ ಆಗುತ್ತಿತ್ತು” ಎಂದು ಪೋಸ್ಟ್ ಹಾಕುವ ಮೂಲಕ ಬಿಜೆಪಿ ಆಡಳಿತದ ಮಂಗಳೂರು ನಗರ ಪಾಲಿಕೆಗೆ ಟಾಂಗ್ ನೀಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಇಂಗ್ಲಿಷ್‌ನಲ್ಲಿ ಪೋಸ್ಟ್ ಹಾಕಿರುವ ‘ಒಂದು ಮೊಟ್ಟೆಯ ಕಥೆ’ ಸಿನಿಮಾದ ನಿರ್ದೇಶಕ, “ಮಂಗಳೂರಿನಲ್ಲಿ ಬೀದಿಬದಿಯ ಚಹಾ ಮಾರಾಟಗಾರ ಡಾಲಿ ಚಾಯ್‌ವಾಲಾ ಅವರನ್ನು ಕರೆಸಿ ಸಂಭ್ರಮಿಸಲಾಯಿತು. ಕೆಲವು ತಿಂಗಳುಗಳ ಹಿಂದೆ ಇದೇ ನಗರವು ಬೀದಿ ಬದಿ ಆಹಾರ ಮಾರಾಟಗಾರರನ್ನು ಬುಲ್ಡೋಜರ್ ಕಾರ್ಯಾಚರಣೆ ನಡೆಸಿ, ಓಡಿಸಿತ್ತು. ಡಾಲಿ ಚಾಯ್‌ವಾಲ ಮಂಗಳೂರಿನವನಲ್ಲ ಎಂಬುದು ಸಂತೋಷದ ವಿಷಯ. ಒಂದು ವೇಳೆ, ಡಾಲಿ ಚಾಯ್‌ವಾಲ ಮಂಗಳೂರಿನವನಾಗಿರುತ್ತಿದ್ದರೆ ಆತನ ಸ್ಟಾಲ್ ಕೂಡ ಬುಲ್ಡೋಜ್ ಆಗುತ್ತಿತ್ತು” ಎನ್ನುವ ಮೂಲಕ ಬೀದಿ ಬದಿ ವ್ಯಾಪಾರಸ್ಥರ ಮೇಲೆ ಬಿಜೆಪಿ ಆಡಳಿತದ ಮಂಗಳೂರು ನಗರ ಪಾಲಿಕೆ ‘ಟೈಗರ್ ಕಾರ್ಯಾಚರಣೆ’ಯ ವಿರುದ್ಧ ಧ್ವನಿ ಎತ್ತುವ ಮೂಲಕ ಸುದ್ದಿಯಾಗಿದ್ದಾರೆ.
ನಿರ್ದೇಶಕ ರಾಜ್ ಬಿ ಶೆಟ್ಟಿ ಹಾಕಿರುವ ಈ ಪೋಸ್ಟ್ ಬಿಜೆಪಿ ಹಾಗೂ ಮಂಗಳೂರು ನಗರ ಪಾಲಿಕೆಯ ನಿದ್ದೆಗೆಡಿಸುತ್ತಾ ಅನ್ನುವುದನ್ನು ಕಾದುನೋಡಬೇಕಿದೆ.
ಅಸಹ್ಯ ಚಾಯ್‌ವಾಲನನ್ನು ಕರೆಸಿ ಮಂಗಳೂರಿನ ಮಾನ ಹರಾಜಿಗಿಟ್ಟ ಬಿಜೆಪಿ: ಬಿಕೆ ಇಮ್ತಿಯಾಜ್
ಮಂಗಳೂರಿನ ಲೇಡಿಹಿಲ್, ಮಣ್ಣಗುಡ್ಡೆ ಪರಿಸರದ ಬೀದಿ ಆಹಾರ ಮಾರಾಟಗಾರರ ಗೂಡಂಗಡಿಗಳ ಮೇಲೆ ಬುಲ್ಡೋಝರ್ ಹಾಯಿಸಿ ಅವರ ಬದುಕನ್ನು ನಾಶ ಮಾಡಿದವರು, ಇಂದು ಅಸಹ್ಯವಾಗಿ ಟೀ ಮಾಡಿಕೊಡುವ ಡಾಲಿ ಚಾಯ್‌ವಾಲಾನನ್ನು ಮಂಗಳೂರಿಗೆ ಕರೆಸಿಕೊಂಡಿದ್ದರು. ಶುಚಿತ್ವ ಮತ್ತು ಗುಣಮಟ್ಟಕ್ಕೆ ಒತ್ತು ಕೊಡುವ ಮಂಗಳೂರಿಗರ ಪ್ರಜ್ಞಾವಂತಿಕೆಯನ್ನು ಶಾಸಕ ವೇದವ್ಯಾಸ ಕಾಮತ್ ಮತ್ತು ಬಿಜೆಪಿ ಮುಖಂಡರು ಹರಾಜಿಗಿಟ್ಟರು ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಧ್ಯಕ್ಷ ಬಿಕೆ ಇಮ್ತಿಯಾಜ್ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ನೂರಾರು ಬಡ ಚಾಯಿವಾಲಗಳ ಬದುಕು ನಾಶ ಮಾಡಿ ವಾರಗಟ್ಟಲೆ ರಸ್ತೆಗಳನ್ನು ಮುಚ್ಚಿ ಸಾರ್ವಜನಿಕರಿಗೆ ತೊಂದರೆ ನೀಡಿ ಕಾನೂನು ಉಲ್ಲಂಘನೆ ಆಗುತ್ತಿದ್ದರೂ ಕಾನೂನು ಪರಿಪಾಲಕರೇ ಆಯೋಜಕರ ಪರ ನಿಂತಿರುವುದು ದುರದೃಷ್ಟ ಎಂದು ಮನಪಾ ಆಡಳಿತ ಹಾಗೂ ಮಂಗಳೂರು ನಗರ ಪೊಲೀಸರ ವಿರುದ್ಧ ಬೀದಿಬದಿ ವ್ಯಾಪಾರಸ್ಥರ ಸಂಘ ಗುಡುಗಿದೆ.

ರಿಷಬ್ ಶೆಟ್ಟರೇ, ನಿಮ್ಮ ಕಾಂತರ ಚಿತ್ರದಲ್ಲಿ ನಟಿಸಿದ ನಂತರ ಕೆಲವು ನಟರು ಮೆಂಟಲ್ ಆಗುತ್ತಿದ್ದರೆ ಅಂತ ಅನ್ನಿಸುತ್ತಿದೆ
ಯಾವ ರಿಷಬ್ ಶೆಟ್ಟರು ಮಾರಾಯ. ? ಅರಳು ಮರಳು ಅವರಿಗೋ ನಿನಗೊ….ಕಂಕನಾಡಿ ಅಲ್ಲಿ ಜನ ಇಲ್ಲ ಅಂತೆ ಒಂದು ಸಲ ಹೋಗಿ ಬನ್ನಿ…