ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಹೆಚ್‌ಬಿಆರ್ ಲೇಔಟ್‌ನಲ್ಲಿರುವ ಬ್ಯಾರೀಸ್ ಸೌಹಾರ್ದ ಭವನದಲ್ಲಿ ಶುಕ್ರವಾರ ಸಂಜೆ ಇಫ್ತಾರ್ ಕೂಟ ಹಾಗೂ ಸಾಧಕರಿಬ್ಬರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷರಾಗಿ ಇತ್ತೀಚಿಗೆ ನೇಮಕಗೊಂಡಿದ್ದ ಡಾ.ಯು.ಟಿ.ಇಫ್ತಿಕಾರ್ ಫರೀದ್ ಹಾಗೂ ಕರ್ನಾಟಕ ಮಾಹಿತಿ ಆಯೋಗಕ್ಕೆ ನೂತನವಾಗಿ ಮಾಹಿತಿ ಆಯುಕ್ತರಾಗಿ ನೇಮಕವಾಗಿರುವ ಹಿರಿಯ ಪತ್ರಕರ್ತ ಬದ್ರುದ್ದೀನ್ ಮಾಣಿ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಯು ಟಿ ಇಫ್ತಿಕಾರ್, ‘ಬ್ಯಾರಿ ಸಮುದಾಯದ ಉನ್ನತಿಗಾಗಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ತುಂಬಾ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ. ವೈದ್ಯರು ಸೇರಿದಂತೆ ಉನ್ನತಮಟ್ಟದ ಸ್ಥಾನಕ್ಕೆ ಬ್ಯಾರಿ ಸಮುದಾಯದ ಯುವಕ-ಯುವತಿಯರು ಬರಬೇಕು. ಈ ನಿಟ್ಟಿನಲ್ಲಿ ಸಮುದಾಯದ ಹಿರಿಯ ಮುಖಂಡರು ವೈದ್ಯಕೀಯ ಕಾಲೇಜುಗಳನ್ನು ತೆರೆಯಬೇಕು. ಆ ಮೂಲಕ ಸಮುದಾಯದ ಉನ್ನತಿಗಾಗಿ ಪ್ರಯತ್ನಿಸಬೇಕು. ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದ ಬಿ.ಎಂ. ಫಾರೂಕ್ ಅವರು ಮೈಸೂರಿನಲ್ಲಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ನಿರ್ಧರಿಸಿ, ಕಾರ್ಯಗತಗೊಳಿಸಲು ಪ್ರಯತ್ನಿಸಿರುವುದು ಖುಷಿಯ ವಿಚಾರ’ ಎಂದು ತಿಳಿಸಿದರು.
ಬದ್ರುದ್ದೀನ್ ಮಾಣಿ ಮಾತನಾಡಿ, ‘ಬ್ಯಾರಿ ಸಮುದಾಯದ ಸಂಘಟನೆಯಾದ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲ್ಪಪಟ್ಟದ್ದು ಖುಷಿಕೊಟ್ಟಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವರಾದ ರಹೀಂ ಖಾನ್, ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದ ಬಿ.ಎಂ. ಫಾರೂಕ್, ಬ್ಯಾರೀಸ್ ಗ್ರೂಪ್‌ನ ಸಯ್ಯದ್ ಮೊಹಮ್ಮದ್ ಬ್ಯಾರಿ, ಟೀಕೇಸ್ ಗ್ರೂಪ್‌ನ ಅಧ್ಯಕ್ಷರಾದ ಉಮರ್ ಟಿ.ಕೆ, ಜಿ ಎ ಬಾವಾ, ಇಕ್ಬಾಲ್ ಅಹ್ಮದ್, ಡಾ ಮಕ್ಸೂದ್ ಅಹ್ಮದ್, ಎ ಬಿ ಬಜಾಲ್, ಬ್ಯಾರೀಸ್ ಗ್ರೂಪ್‌ನ ಸಿದ್ದೀಕ್ ಬ್ಯಾರಿ, ಶರೀಫ್ ಟಿ ಕೆ, ತಸ್ಲೀಲ್ ಮೊಹಮ್ಮದ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸನ್ಮಾನಿತರ ಸಾಧನಾ ಪತ್ರವನ್ನು ಆಸಿಫ್ ಅಹ್ಮದ್ ಹಾಗೂ ಅತ್ತೂರು ಚೈಯಬ್ಬ ವಾಚಿಸಿದರು. ಮಸೂದ್ ಕಾರ್ಯಕ್ರಮ ನಿರೂಪಿಸಿದರು. ಮೊಹಮ್ಮದ್ ನವೀದ್ ಕಿರಾಅತ್ ಪಠಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಉಮರ್ ಯು ಹೆಚ್, ಸುಲ್ತಾನ್ ಗೋಲ್ಡ್‌ನ ರಿಯಾಝ್, ಬಿ ಎಂ ಹನೀಫ್, ಬ್ಯಾರಿ ಜಮಾಅತ್ ಅಧ್ಯಕ್ಷ ಡಾ ಹಮೀದ್, ಬೆಂಗಳೂರು ಬ್ಯಾರೀಸ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾದ ಶಬೀರ್ ಬ್ರಿಗೇಡ್ ಸೇರಿದಂತೆ ಪದಾಧಿಕಾರಿಗಳು, ಮಲಬಾರ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಇನ್ನಿತರ ಸಂಘ ಸಂಸ್ಥೆಗಳ ಸದಸ್ಯರು ಮತ್ತು ಸಾವಿರಕ್ಕೂ ಮಿಕ್ಕಿದ ಬ್ಯಾರಿ ಸಮುದಾಯದ ಕುಟುಂಬಸ್ಥರು ಉಪಸ್ಥಿತರಿದ್ದರು.






