ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿರುವ ಪ್ರಸಿದ್ಧ ಹಜರತ್ ಸೈಯದ್ ಶಾ ಮುರ್ತಜಾ ಖಾದ್ರಿ ದರ್ಗಾಕ್ಕೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಶನಿವಾರ ಸಾಯಂಕಾಲ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಇಳಕಲ್ ನಗರದ ಮುಸ್ಲಿಂ ಮುಖಂಡರಾದ ಮುಝಾಮಿಲ್ ಹಕ್ಕಿ, ಮುಹಮ್ಮದ್ ಸಿರಾಜ್ ಹುಣಚಗಿ, ಲಾಲ್ ಸಾಹಿಬ್ ಭಂಡಾರಿ, ನೌಶಾದ್ ಬಾಗಲಕೋಟೆ, ಇರ್ಷಾದ್ ಮುಲ್ಲಾ, ಸಿರಾಜ್ ಖಾಝಿ, ಮುರ್ತಝಾ ಕರ್ಮುಡಿ, ಮೆಹಬೂಬ್ ಕಂದಗಲ್ ವಿಧಾನ ಸಭಾಧ್ಯಕ್ಷರನ್ನು ಸತ್ಕರಿಸಿ, ಅಭಿನಂದಿಸಿ ಗೌರವಿಸಿದರು.
ಇದೇ ವೇಳೆ ಸ್ಪೀಕರ್ ಜೊತೆಗಿದ್ದ ಕೆಪಿಸಿಸಿ ವಕ್ತಾರರಾದ ನಿಕೇತ್ ರಾಜ್ ಮೌರ್ಯ ಅವರನ್ನೂ ಸನ್ಮಾನಿಸಿ, ಗೌರವಿಸಲಾಯಿತು. ದರ್ಗಾಕ್ಕೆ ಭೇಟಿ ನೀಡಿದ ಬಳಿಕ ಬಸವನ ಬಾಗೇವಾಡಿಯ ಕಡೆಗೆ ಸ್ಪೀಕರ್ ಯು.ಟಿ.ಖಾದರ್ ಪ್ರಯಾಣ ಬೆಳೆಸಿದರು.


