ನಲವತ್ತು ನಾಲ್ಕು ವರ್ಷಗಳ ಹಿಂದೆ ರೈತರ ಮೇಲೆ ನಡೆದ ದೌರ್ಜನ್ಯ ಹಿನ್ನೆಲೆಯಿಂದ ಈ ರೈತ ಸಂಘಟನೆ ಹುಟ್ಟಿಕೊಂಡಿತು. ರೈತ ಸಂಘಟಕರೆಲ್ಲ ನಾನು ಎಂಬ ಅಹಂಕಾರ ಬಿಟ್ಟು ನಾವು ಎಂಬ ಭಾವನೆ ಎಲ್ಲ ಧರ್ಮದ ಜಾತಿಗಳನ್ನು ದೂರವಿಟ್ಟು ನೊಂದ ರೈತರ ಅನ್ನದಾತರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸಬೇಕು ಎಂದು ರೈತ ಮುಖಂಡ ಬೈರೇಗೌಡ ಅಭಿಪ್ರಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುರಣಗಿ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ರೈತರು ಬಹಳ ಕಷ್ಟದಲ್ಲಿ ಜೀವನ ಸಾಗಿಸಸುತ್ತಿದ್ದಾರೆ. ರೈತ ಸಂಘಟನೆಗಳು ನಿರಂತರ ಹೋರಾಟದಿಂದ ನ್ಯಾಯ ದೊರಕಿಸಿಕೊಡಬೇಕು. ಕೊಳವೆ ಬಾವಿಗೆ ನೀರಾವರಿ ಇರುವಂತ ರೈತರಿಗೆ ಆಧಾರ್ ಲಿಂಕ್ ಮಾಡುವಂತೆ ಸರಕಾರದ ನಿರ್ಧಾರ ಮಾಡಿದೆ. ಇದನ್ನು ನಾವು ವಿರೋಧಿಸಬೇಕು ಎಂದರು.

ಹಾವೇರಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣವರ್ ಮಾತನಾಡಿ, “ರೈತರು ಈ ವರ್ಷ ಸ್ಪಿಂಕ್ಲರ್ ಗೆ ಅರ್ಜಿ ಹಾಕಿದ್ರೆ ಒಂದು ವರ್ಷದ ನಂತರ ಅಥವಾ ಎರಡು ವರ್ಷದ ನಂತರ ಕೃಷಿ ಇಲಾಖೆ ರೈತರಿಗೆ ಒದಗಿಸುತ್ತಿದೆ. ಗದಗ ಜಿಲ್ಲಾ ರೈತರಿಗೆ ಎಷ್ಟು ಅನ್ಯಾಯ ಆಗುತ್ತಿದೆ ಎಂಬುದನ್ನು ಕಾಣುವಾಗ ಕಂಡು ಬೇಸರವಾಗುತ್ತಿದೆ. ಹಾವೇರಿ ಜಿಲ್ಲೆಯ ರೈತರಿಗೆ ತ್ವರಿತವಾಗಿ ಎಲ್ಲಾ ಇಲಾಖೆಯಿಂದ ನೆರವು ಸಿಗುತ್ತದೆ. ಗದಗ ಜಿಲ್ಲೆಯ ರೈತರಿಗೆ ಬಹಳ ಅನ್ಯಾಯ ಆಗುತ್ತಿದೆ. ನೊಂದಿರುವ ರೈತರಿಗೆ ನ್ಯಾಯ ದೊರಕಿಸಿಕೊಡೋಣ” ಎಂದರು.
ರಾಜ್ಯ ಹಸಿರು ಸೇನೆ ರಾಜ್ಯ ಅಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಮಾತನಾಡಿದರು. ಹೂವಿನ ಶಿಗ್ಲಿಯ ವಿರಕ್ತಮಠದ ಶ್ರೀ ಮನಿಪ್ರ ಚನ್ನವೀರಮಹಾಸ್ವಾಮಿಗಳು ಉದ್ಘಾಟಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ ಡಿ ಬಸವರಾಜ ಮತ್ತು ಸೂರಣಗಿ ಗ್ರಾಮ ಘಟಕ ಅಧ್ಯಕ್ಷ ಬಸವ ವಿ ಮಾದಾಪೂರಮಠ, ಗ್ರಾಮ ಘಟಕ ಉಪಾಧ್ಯಕ್ಷ ಚಂದ್ರಶೇಖರ್ ಚ ಶಿರನಹಳ್ಳಿ ಸೂರಣಗಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ವರದಿ: ಕೇಶವ ಕಟ್ಟಿಮನಿ. ಸಿಟಿಝನ್ ಜರ್ನಲಿಸ್ಟ್, ಲಕ್ಷ್ಮೇಶ್ವರ
