ಇಂಡಿ | ಇಂಧನ ಅಭಾವ: ಸಂಕಷ್ಟದಲ್ಲಿ ರೈತರು, ವಾಹನ ಸವಾರರು

Date:

ಮಧ್ಯಪ್ರಾಚ್ಯದ ಯುದ್ಧದ ಪರಿಣಾಮದಿಂದ ತೈಲ ಕೊರತೆ ಎದುರಾಗಿದ್ದು, ತಾಲೂಕಿನಾದ್ಯಂತ ಪೆಟ್ರೋಲ್, ಡೀಸೆಲ್‌ಗಾಗಿ ವಾಹನ ಸವಾರರು ದಿನವಿಡೀ ಸರತಿಯಲ್ಲಿ ನಿಲ್ಲುವಂತಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ನಗರದಲ್ಲಿ 12 ಪೆಟ್ರೋಲ್ ಬಂಕ್ ಸೇರಿದಂತೆ ತಾಲ್ಲೂಕಿನ ಹಲವೆಡೆ ಪೆಟ್ರೋಲ್ ಬಂಕ್‌ಗಳಿವೆ. ಆದರೆ, ನಗರದಲ್ಲಿ ನಿತ್ಯ ಎರಡು ಮೂರು ಬಂಕ್‌ಗಳು ಕಾರ್ಯ ನಿರ್ವಹಿಸಿದರೆ, ಉಳಿದ ಬಂಕ್‌ಗಳು ಬಂದ್ ಆಗಿರುತ್ತದೆ.

- Advertisement -

ರೈತರು ಹೈರಾಣ: ಮುಂಗಾರು ಬಿತ್ತನೆ ಶುರುವಾಗಿದೆ. ಕೃಷಿ ಚಟುವಟಿಕೆ ಯಂತ್ರಾಧಾರಿ0ತವಾಗಿದ್ದರಿಂದ ರೈತರಿಗೆ ಡೀಸೆಲ್ ಅಭಾವ ಎದುರಾಗಿದೆ, ಟ್ರ್ಯಾಕ್ಟರ್‌ನಿಂದ ಭೂಮಿ ಹದಗೊಳಿಸುವ, ಬಿತ್ತನೆ ಮಾಡುವ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ. ತಾಲೂಕಿನಲ್ಲಿ ಹೆಸರು, ಉದ್ದು, ಸೂರ್ಯಕಾಂತಿ, ಶೇಂಗಾ, ಮುಕಣಿ ಮೊದಲಾದ ಬೆಳೆಗಳ ಬಿತ್ತನೆ ಆರಂಭಿಸಲು ರೈತರು ಸಜ್ಜಾಗಿದ್ದಾರೆ. ಇದೀಗ ಬಂಕ್‌ಗಳಲ್ಲಿ ಡೀಸೆಲ್‌ಗಾಗಿ ಕ್ಯಾನ್ ಹಿಡಿದು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಕ್ಯಾನ್‌ ತೆಗೆದುಕೊಂಡು ಹೋದರೆ ಬಂಕ್‌ನವರು ಡೀಸೆಲ್ ನೀಡುತ್ತಿಲ್ಲ. ಡೀಸೆಲ್ ಇಲ್ಲದೆ ರೈತರು ಬಿತ್ತನೆಗೆ ಎದರು ನೋಡುವಂತಾಗಿದೆ. ಅಲ್ಲೆದೆ ಪೆಟ್ರೋಲ್‌ಗಾಗಿ ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಗಗನಕ್ಕೇರಿದ ಅಕ್ಕಿ ಬೆಲೆ: ತತ್ತರಿಸಿದ ಬಡ, ಮಧ್ಯಮ ವರ್ಗದ...

ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಕರಿಛಾಯೆ ಕೃಷಿ ಕ್ಷೇತ್ರವನ್ನು ತತ್ತರಿಸುವಂತೆ ಮಾಡಿದೆ. ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ನೂಕಿದ್ದ ಈ ಬರಗಾಲದ ಬಿಸಿ ಇದೀಗ ನೇರವಾಗಿ ಜನಸಾಮಾನ್ಯರ ತಟ್ಟೆಗೆ ತಟ್ಟಿದ್ದು, ಅಕ್ಕಿಯ...

ದಿನದ ದುಡಿಮೆಗೆ ಪೆಟ್ಟು: ವಾಹನಗಳನ್ನೇ ನಂಬಿ ತಾಲ್ಲೂಕಿನಾದ್ಯಂತ ಸಾವಿರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಈಗ ಡೀಸೆಲ್ ಕೊರತೆಯಿಂಬ ದಿನದ ದುಡಿಮೆಗೆ ಕೊಕ್ಕೆ ಬೀಳುತ್ತಿದೆ. ತಾಲ್ಲೂಕಿನಲ್ಲಿ ಸಾವಿರಾರು ಟ್ಯಾಕ್ಟರ್‌ಗಳು, ಇಂಡಿಯಿಂದ ಸೊಲ್ಲಾಪುರಕ್ಕೆ ಪ್ರತಿದಿನ 200 ಜೀಪು, ಸಿಂದಗಿಗೆ 50 ಸೇರಿದಂತೆ ಒಟ್ಟು 400 ಜೀಪುಗಳು ಸಾರ್ವಜನಿಕರ ಸಂಚಾರಕ್ಕೆ ಬಳಕೆಯಾಗುತ್ತಿವೆ. 50ಕ್ಕೂ ಹೆಚ್ಚು ಮಿನಿ ಬಸ್‌ಗಳು, 100ಕ್ಕೂ ಹೆಚ್ಚು ಆಟೋ, 200 ಟಂಟಂ, 200 ಗೂಡ್ಸ್, ಸಾವಿರಕ್ಕೂ ಹೆಚ್ಚು ಕಾರುಗಳು ಮತ್ತು 50ಕ್ಕೂ ಹೆಚ್ಚು ಸರ್ಕಾರಿ ಇಲಾಖೆ ವಾಹನಗಳು, 50 ಟ್ರಕ್‌ಗಳು ಓಡಾಡುತ್ತಿವೆ.

ಕೆಲವರು ಕ್ಯಾನ್ ಮೂಲಕ ದುಪ್ಪಟ್ಟು ದರಕ್ಕೆ ಕಾಳಸಂತೆಯಲ್ಲಿ ಡೀಸೆಲ್ ಮಾರುತ್ತಿದ್ದಾರೆ. ಡೀಸೆಲ್‌, ಪೆಟ್ರೋಲ್‌ಗಳ ಬೆಲೆ ಏರಿಕೆ ಯಿಂದ ಸಾರ್ವಜನಿಕ ವಾಹನಗಳ ಚಾಲಕರು ಬಾಡಿಗೆ, ಕಿ.ಮೀ ದರ ಹೆಚ್ಚಿಸಿದ್ದಾರೆ . ಪ್ರಯಾಣ ದರದ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬಸವೇಶ್ವರ ಬ್ಯಾಂಕ್ ರಾಜ್ಯದ ಆರ್ಥಿಕ ಭೂಪಟದಲ್ಲಿ ಗುರುತಿಸಿಕೊಂಡಿದೆ: ಪ್ರಕಾಶ ತಪಶೆಟ್ಟಿ

ವರ್ತಕರ ಹಿತಾಸಕ್ತಿಗಾಗಿ ಸ್ಥಾಪನೆಯಾದ ಬಸವೇಶ್ವರ ಸಹಕಾರಿ ಬ್ಯಾಂಕ್, ಶೇರುದಾರರು, ವರ್ತಕರು ಹಾಗೂ...

ಬಾದಾಮಿ | ಆಸ್ಪತ್ರೆ, ಶಾಲೆಗೆ ಸಿಇಒ ದಿಢೀರ್ ಭೇಟಿ: ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ನೋಟಿಸ್

ಸರ್ಕಾರಿ ಸಂಸ್ಥೆಗಳಲ್ಲಿ ಶಿಸ್ತು, ಜವಾಬ್ದಾರಿ ಹಾಗೂ ಸಾರ್ವಜನಿಕ ಸೇವೆಯ ಗುಣಮಟ್ಟ ಕಾಪಾಡುವ...

ರಾಯಚೂರು | ಬಿಸಿಎಂ-ಬಿ ವರ್ಗಕ್ಕೆ ಒಂದು ಸ್ಥಾನವೂ ಮೀಸಲಿಲ್ಲ, ಕರಡು ಅಧಿಸೂಚನೆ ತಿದ್ದುಪಡಿಗೆ ಆಗ್ರಹ: ಚಂದ್ರಶೇಖರ ಪಾಟೀಲ್

ರಾಯಚೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿ ಕರಡು ಅಧಿಸೂಚನೆಯಲ್ಲಿ ಬಿಸಿಎಂ-ಬಿ (...

‘ಲೆಹರಾ ದೋ ತಿರಂಗಾ’ ಮಾರ್ಚ್‌ಗೆ ಮುನ್ನ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ದೆಹಲಿ ಪೊಲೀಸರಿಂದ ವಶಕ್ಕೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ಶುಕ್ರವಾರ...