ಇಂಡಿ-ವಿಜಯಪುರ ಮಾರ್ಗವಾಗಿ ತೆರಳುತ್ತಿದ್ದ ಬಸ್‌ನಲ್ಲಿ ನಿರ್ವಾಹಕ ಮಹಿಳಾ ಪ್ರಯಾಣಿಕರಿಗೆ ಏಕಚವನದಲ್ಲಿ ನಿಂದಿಸಿದ್ದು, ಇತರೆ ಪ್ರಯಾಣಿಕರಿಗೂ ಕಿರಿಕಿರಿ ಉಂಟು ಮಾಡಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
KA-28 F-2351 ಸಂಖ್ಯೆಯ ಬಸ್ ಸಂಜೆ 4-30ಕ್ಕೆ ಇಂಡಿಯಿಂದ ವಿಜಯಪುರಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರು ತಮ್ಮ ಪಾಡಿಗೆ ತಾವು ಪರಸ್ಪರ ಮಾತನಾಡಿಕೊಂಡು ಕುಳಿತಿದ್ದರು. ಏಕಾಏಕಿ ಬಂದ ನಿರ್ವಾಹಕ ಗಟ್ಟಿ ಧ್ವನಿಯಲ್ಲಿ ಟಿಕೆಟ್ ತಗೊಳ್ಳುವಂತೆ ಗದರಿದ್ದಾರೆ. ಆದರೂ ಮಹಿಳಾ ಒರಯಾಣಿಕರು ಏನೂ ಮಾತನಾಡದೆ ತಪ್ಪೊಪ್ಪಿಕೊಂಡು ಸುಮ್ಮನಾದರೂ ಕೂಡಾ ಇದಕ್ಕೆ ಅಸಮ್ಮತಿ ತೋರಿದ್ದು, ಮಾತನಾಡುವುದನ್ನು ನಿಲ್ಲಿಸುವಂತೆ ಧಮ್ಕಿ ಹಾಕಿದ್ದು, ಮಹಿಳೆಯರೊಟ್ಟಿಗೆ ಅಗೌರವದಿಂದ ವರ್ತಿಸಿದ್ದಾರೆ. ಪ್ರಶ್ನೆ ಮಾಡಿದ ಪ್ರಯಾಣಿಕರ ಮೇಲೂ ನಿರ್ವಾಹಕ ಕುಪಿತಗೊಂಡಿದ್ದು, ಕಿರಿ ಉಂಟು ಮಾಡಿದ್ದಾರೆ ಎನ್ನಲಾಗಿದೆ.
“ನಮ್ಮ ತೆರಿಗೆಯಲ್ಲಿ ನಾವು ಪ್ರಯಾಣ ಮಾಡುವುದು ನಿರ್ವಾಹಕರಿಗೆ ಅಪರಾಧಿಗಳಂತೆ ಕಾಣಿಸುತ್ತಿರುವುದು ದುರಂತವೇ ಸರಿ” ಎಂದು ಪ್ರಯಾಣಿಕರು ನಿರ್ವಾಹಕನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮನರೇಗಾದಡಿ ಮಹಿಳೆಯರಿಗೆ ಉದ್ಯೋಗ ನೀಡುವಂತೆ ಗ್ರಾ.ಪಂಚಾಯಿಗೆ ಮುತ್ತಿಗೆ
ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ಮಾತಿಗೆ ಮಾತು ಬೆಳೆದು ಬಸ್ಸನ್ನು ರಸ್ತೆಯಲ್ಲಿ ನಿಲ್ಲಿಸಿ ಪ್ರಯಾಣಿಕರಿಗೆ ಕಿರಿಕಿರಿ ಮಾಡಿದ್ದಾರೆ ಎನ್ನಲಾಗಿದೆ.
“ಪ್ರಯಾಣಿಕರ ಜತೆಗೆ ಹೇಗೆ ವರ್ತಿಸಬೇಕು ಎಂಬುದರ ಕುರಿತು ನಿರ್ವಾಹಕರಿಗೆ ತರಬೇತಿ ಕೊಡುವುದು ಅವಶ್ಯಕವಾಗಿದೆ” ಎಂದು ಹಿರಿಯ ನಾಗರಿಕ ಪ್ರಯಾಣಿಕರು ಹಿಡಿ ಶಾಪ ಹಾಕಿದ್ದಾರೆ.
