ಮಂಗಳೂರು ಬಳಿಯ ಮುಲ್ಕಿಯಲ್ಲಿ ಭಾರತದ ಮೊದಲ ವೃತ್ತಿಪರ ಸ್ಟ್ಯಾಂಡ್-ಅಪ್ ಪ್ಯಾಡಲ್ಬೋರ್ಡಿಂಗ್ (ಎಸ್‌ಯುಪಿ) ರೇಸ್ ಕ್ಲಿನಿಕ್ಅನ್ನು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜಿಸುತ್ತಿದೆ. ನವೆಂಬರ್ 29 ರಿಂದ ಡಿಸೆಂಬರ್ 3 ರವರೆಗೆ ರೇಸ್ ಕ್ಲಿನಿಕ್ ನಡೆಯಲಿದೆ ಎಂದು ಫೌಂಡೇಶನ್ ತಿಳಿಸಿದೆ.
ಸರ್ಫಿಂಗ್ ಸ್ವಾಮಿ ಫೌಂಡೇಶನ್‌ನ ನಿರ್ದೇಶಕ ರಾಮಮೋಹನ್ ಪರಾಂಜಪೆ ಮಾತನಾಡಿ, “ರೇಸ್ ಕ್ಲಿನಿಕ್ ಆಯೋಜನೆಯ ಉದ್ದೇಶವು ಭಾರತದಲ್ಲಿ ಹರ್ಷದಾಯಕ ಮತ್ತು ಸುಲಭದ ಜಲ ಕ್ರೀಡೆಯಾಗಿ ಎಸ್‌ಯುಪಿಯ ಸಾಮರ್ಥ್ಯವನ್ನು ಅನ್ವೇಷಿಸುವುದಾಗಿದೆ” ಎಂದು ತಿಳಿಸಿದ್ದಾರೆ.
“ಸರ್ಫಿಂಗ್‌ನಿಂದ ಹುಟ್ಟಿಕೊಂಡ ಎಸ್‌ಯುಪಿ, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಲ ಕ್ರೀಡೆಗಳಲ್ಲಿ ಒಂದಾಗಿದೆ. ಅಲೆಗಳ ಮೇಲೆ ಅವಲಂಬಿತವಾಗಿರುವ ಸಾಂಪ್ರದಾಯಿಕ ಸರ್ಫಿಂಗ್‌ಗಿಂತ ಭಿನ್ನವಾಗಿ, ವಿವಿಧ ಜಲಮೂಲಗಳ ಮೇಲೆ ಪ್ಯಾಡಲ್ ಮಾಡಲು ಎಸ್‌ಯುಪಿ ಉತ್ಸಾಹಿಗಳಿಗೆ ಇದು ಅವಕಾಶ ಮಾಡಿಕೊಡುತ್ತದೆ. ಎಸ್‌ಯುಪಿ ಮುಂದಿನ 8-10 ವರ್ಷಗಳಲ್ಲಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಸೇರುವ ಸಾಧ್ಯತೆ ಇದೆ” ಎಂದು ಅವರು ಹೇಳಿದ್ದಾರೆ.
“ಭಾರತದಲ್ಲಿ, ವಿಶೇಷವಾಗಿ ಕೇರಳ, ಕರ್ನಾಟಕ, ಗೋವಾ ಮತ್ತು ಪೂರ್ವ ಕರಾವಳಿಯಂತಹ ಪ್ರದೇಶಗಳಲ್ಲಿ ಕ್ರೀಡೆಯು ವೇಗವನ್ನು ಪಡೆಯುತ್ತಿದೆ. ಭಾರತವು ಸ್ಪರ್ಧಾತ್ಮಕ ಎಸ್‌ಯುಪಿ ರೇಸರ್‌ಗಳ ಸಮೂಹವನ್ನು ಹೊಂದಿದೆ”ಎಂದು ಅವರು ಹೇಳಿದ್ದಾರೆ.
“ಎಸ್‌ಯುಪಿ ರೇಸ್ ಕ್ಲಿನಿಕ್ ಕೇವಲ 12 ಸ್ಲಾಟ್‌ಗಳನ್ನು ಹೊಂದಿರಲಿದೆ. ಮಧ್ಯಂತರ ಮತ್ತು ಮುಂದುವರಿದ ಪ್ಯಾಡ್ಲರ್‌ಗಳು ಮತ್ತು ಕ್ರೀಡಾಪಟುಗಳಿಗೆ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ಭಾಗವಹಿಸುವವರಿಗೆ ತಜ್ಞರ ಮಾರ್ಗದರ್ಶನ, ಪರಿಸರ ಪ್ರಜ್ಞೆಗೆ ಬದ್ಧತೆ ಮತ್ತು ಇತ್ತೀಚಿನ ಅತ್ಯಾಧುನಿಕ ಉಪಕರಣಗಳೊಂದಿಗೆ ಅಲೆಗಳನ್ನು ನ್ಯಾವಿಗೇಟ್ ಮಾಡುವ ಅನುಭವ ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.