ಸಾಮಾಜಿಕ ಜಾಲತಾಣ ಬಳಕೆಯಿಂದ ಮಾಧ್ಯಮಗಳ ಪ್ರಭಾವ ತಗ್ಗುತ್ತಿದೆ: ಪ್ರಾ. ರಮೇಶ ಅರೋಲಿ

Date:

Advertisements

ಸಾಮಾಜಿಕ ಮಾಧ್ಯಮಗಳ ಹೆಚ್ಚು ಬಳಕೆಯಿಂದ ಮಾಧ್ಯಮಗಳ ಪ್ರಭಾವ ತಗ್ಗುತ್ತಿದೆ ಎಂದು ದೆಹಲಿಯ ಕಮಲಾ‌ ನೆಹರು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರಮೇಶ ಅರೋಲಿ ಅಭಿಪ್ರಾಯಪಟ್ಟರು.

ಧಾರವಾಡದ ಕರ್ನಾಟಕ ಕಲಾ‌ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಪತ್ರಿಕೋದ್ಯಮದಲ್ಲಿ ಮನೋವಿಜ್ಞಾನ ಪಾತ್ರ’ ಉಪನ್ಯಾಸ ಕಾರ್ಯಕ್ರದಲ್ಲಿ ಅವರು ಮಾತನಾಡಿದರು. “ವಾಸ್ತವದಲ್ಲಿ ತಾರುಣ್ಯದಲ್ಲಿ ಭಾವನೆಗಳು ಹೆಚ್ಚಾಗಿ ಯುವ ಸಮುದಾಯವನ್ನು ವಿಚಲಿತಗೊಳಿಸುತ್ತದೆ ಎಂದ ಅವರು ಮಾಧ್ಯಮಗಳ ನಿರ್ಮಿತ ಸರಕು ಬೇಗನೇ ಜನಪ್ರಿಯತೆ ಆಗುತ್ತಿದೆ. ಜಾಹಿರಾತುಗಳ ಜನರನ್ನು ಮಾನಸಿಕವಾಗಿ ನಿಯಂತ್ರಿಸುತ್ತಿವೆ. ಮಾಧ್ಯಮಗಳು ಜನರ ಮಾನಸಿಕತೆಗೆ ಅನುಗುಣವಾಗಿ ಸುದ್ದಿಯನ್ನು ಪ್ರಕಟಿಸುತ್ತಿವೆ ಮತ್ತು ಪ್ರಸಾರ ಮಾಡುತ್ತಿವೆ. ಪ್ರಸ್ತುತ ವಾಸ್ತವಕ್ಕೆ ದೂರ ಇರುವ ಮಾಹಿತಿ ಹೆಚ್ಚು ಆಕರ್ಷಿಕವಾಗಿವೆ. ಸಾಮಾಜಿಕ ಮಾಧ್ಯಮಗಳು ಜನರನ್ನು ಮಾನಸಿಕವಾಗಿ ಹತ್ತಿರವಾಗಿ ಜನರನ್ನು ಆಕರ್ಷಿಸುತ್ತಿವೆ” ಎಂದರು.

ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಸತೀಶ್ ಜಾಧವ್ ಮಾತನಾಡಿ, “ಮಾದ್ಯಮ ಕ್ಷೇತ್ರ ಅಗಾಧವಾಗಿ ಬೆಳೆಯುತ್ತಿದೆ. ಇಂದು ಮಾಧ್ಯಮಗಳು ಜನರನ್ನು ಮಾನಸಿಕವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ಅವರು ಸಾಮಾಜಿಕ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳತ್ತ ಜನರು ಹೆಚ್ಚು ಆಕರ್ಷಿತರಾದರೂ ಪತ್ರಿಕೆಗಳು ಜನರ ಭಾವನಾತ್ಮಕ ಸಂಬಂಧವನ್ನು ಹೊಂದಿವೆ” ಎಂದರು.

Advertisements

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಹಿರಿಯ ‌ಪ್ರಾಧ್ಯಾಪಕ ಪ್ರೊ. ಅಶೋಕ ಐನಾಪೂರ ಮಾತನಾಡಿ, “ಆಧುನಿಕ ತಂತ್ರಜ್ಞಾನ ಮತ್ತು ಅದರ ಪರಿಕರಗಳು ಯುವ ಸಮುದಾಯವನ್ನು ಮಾನಸಿಕವಾಗಿ ತೀವ್ರವಾಗಿ ಆಕ್ರಮಿಸಿವೆ. ತಂತ್ರಜ್ಞಾನ ಆಧಾರಿತ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದ ಅವರು ಮಾಧ್ಯಮಕ್ಕೆ ಬಹಳಷ್ಟು ಸವಾಲುಗಳು ಮುಂದಿವೆ. ಪ್ರಸ್ತುತ ಸುದ್ದಿ, ಮಾಹಿತಿಯನ್ನು ಸತ್ಯಾ ಸತ್ಯತ್ತೆಯನ್ನು ಅರಿತುಕೊಳ್ಳುವದು ಅವಶ್ಯಕತೆ ಇದೆ ಎಂದರು. ಮಾಧ್ಯಮಕ್ಕಿಂತ ಸಾಮಾಜಿಕ ಮಾಧ್ಯಮ ತೀವ್ರವಾಗಿ ಜನರ ಮೇಲೆ ಭಾದಿಸಿದೆ” ಎಂದರು.

ಕಾರ್ಯಕ್ರಮದಲ್ಲಿ ಡಾ.ಪ್ರಭಾಕರ್ ಕಾಂಬಳೆ, ಡಾ.ಗೀತಾ ಪಾಸ್ತೆ, ಪ್ರೊ.ಗುರು ಹೆಗಡೆ, ಡಾ. ಸಿ.ಬಿ.ಐನಳ್ಳಿ, ಸೇರಿದಂತೆ ಮನೋವಿಜ್ಞಾನ ಮತ್ತು ‌ಪತ್ರಿಕೊದ್ಯಮ ವಿಷಯದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X