ಬಾಗೇಪಲ್ಲಿ:-ನಾನು ಜಿಪಂ ಅಧ್ಯಕ್ಷರಾದ ಸಂದರ್ಭದಲ್ಲಿ ನನ್ನಆಯ್ಕೆಯನ್ನು ಸಚಿವ ಕೆ.ಎಚ್.ಮುನಿಯಪ್ಪ ಪ್ರಬಲವಾಗಿ
ವಿರೋಧಿಸಿದ್ದರು. ಆದರೆ ಸತ್ಯಾಂಶ ಗೊತ್ತಿಲ್ಲದ ಮಾದಾರ ಮಹಾಸಭ ಅಧ್ಯಕ್ಷ ಆ.ನ.ಮೂರ್ತಿಯವರು ಕೆ.ಎಚ್.ಮುನಿಯಪ್ಪನವರಿಂದಲೇ ನಾನು ಜಿಪಂ ಅಧ್ಯಕ್ಷನಾಗಿದ್ದೆ ಎಂದು ಸುಳ್ಳು ಹೇಳುವ ಮೂಲಕ
ಸತ್ಯವನ್ನು ಮರೆಮಾಚಿದ್ದಾರೆ ಎಂದು ಜಿಪಂ ಮಾಜಿ ಅಧ್ಯಕ್ಷ ಹಾಗು ಭೋವಿ ಸಮಾಜದ ಮುಖಂಡ ಎಂ.ವಿ.ಕೃಷ್ಣಪ್ಪ
ತಿರುಗೇಟು ನೀಡಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಸಚಿವರಾಗಿದ್ದ ವೀರಪ್ಪಮೊಯಿಲಿ, ಶಾಸಕರಾಗಿದ್ದ ಎನ್.ಸಂಪಂಗಿ, ಎಂ.ಸಿ.ಸುಧಾಕರ್, ಶಿವಶಂಕರರೆಡ್ಡಿ ಸೇರಿ ಎಲ್ಲಾ ಶಾಸಕರೂ, ಸದಸ್ಯರು ನನ್ನನ್ನು ಜಿಪಂ ಅಧ್ಯಕ್ಷನನ್ನಾಗಿ ಮಾಡಲು ತೀರ್ಮಾನ ತೆಗೆದುಕೊಂಡಿದ್ದರೂ ನನ್ನನ್ನು ಆ ಸ್ಥಾನದಿಂದ ತಪ್ಪಿಸಲು ಕೆ.ಎಚ್.ಮುನಿಯಪ್ಪನವರು ದೆಹಲಿಯಿಂದ ಆಸ್ಕರ್ ಫರ್ನಾಂಡಿಸ್ ರನ್ನು ಇಲ್ಲಿಗೆ ಕಳುಹಿಸಿದ್ದರು. ಅವರ ಪ್ರಯತ್ನ ಸಫಲವಾಗಲಿಲ್ಲ ಎಲ್ಲರ ಇಚ್ಛೆಯಂತೆ ನಾನು ಜಿಪಂ ಅಧ್ಯಕ್ಷನಾದೆ. ಆದರೆ ಕೆ.ಎಚ್.ಮುನಿಯಪ್ಪನವರ ಶಿಪಾರಸ್ಸಿನಿಂದಲೇ ನಾನು ಜಿಪಂ ಅಧ್ಯಕ್ಷನಾದೆ ಎಂಬ ಆ.ನ.ಮೂರ್ತಿಯವರ ಹೇಳಿಕೆ ಸತ್ಯಕ್ಕೆ ದೂರವಾದದ್ದು. ನಮ್ಮ ಒಳಮೀಸಲಾತಿ ವಿರುದ್ದದ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ.
ಕೇಂದ್ರ ಸರ್ಕಾರದ ಸೂಚನೆಯಂತೆ ಮೀಸಲಾತಿ ಪ್ರಮಾಣ ಶೇ.50 ರಷ್ಟು ಮೀರಬಾರದು ಎಂಬ
ನಿಯಮದಂತೆ ಈಗಿನ ಸರ್ಕಾರದ ತೀರ್ಮಾನದಂತೆ ಒಳಮೀಸಲಾತಿ ನೀಡಲು ಸಾಧ್ಯವಿಲ್ಲ. ಸರ್ಕಾರಿ ನೌಕರಿ
ಪಡೆಯುವ ಕನಸನ್ನ ಹೊತ್ತಿರುವ ನಿರುದ್ಯೋಗಿಗಳಿಗೆ ನಿರುತ್ಸಾಹವನ್ನು ಮಾಡಲಾಗುತ್ತಿದೆ. 65 ಸಾವಿರ
ಉದ್ಯೋಗಿಗಳಿಗೆ ಇದರಿಂದ ತೊಂದರೆಯಾಗುತ್ತಿದೆ. ಈ ಹಿಂದಿನ ಮೀಸಲಾತಿಯಡಿಯಲ್ಲಿಯೇ ನೇಮಕಾತಿಯನ್ನು
ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ..?ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ
ಎಲ್ಲರ ಸಹಕಾರದಿಂದ ಪ್ರತಿಭಟನೆ ಯಶಸ್ವಿಯಾಗಿ ನಡೆಯಿತು. ಭೋವಿ, ಛಲವಾಗಿ, ಲಂಬಾಣಿ ಮತ್ತಿತರ
ಸಮುದಾಯಗಳ ಒತ್ತಾಯದ ಮೇರೆಗೆ ಸಚಿವ ಸಂಪುಟ ಸಭೆ ಮುಂದೂಡಲಾಗಿದೆ. 101 ಜಾತಿಗಳಿಗೆ
ಅನುಕೂಲವಾಗುವಂತೆ ಮೀಸಲಾತಿ ಜಾರಿಯಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ., ನಮ್ಮ ಸೋದರ
ಸಮುದಾಯವೂ ಒಳಮೀಸಲಾತಿಗಾಗಿ ಒತ್ತಾಯಿಸುತ್ತಿದ್ದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ ಎಂದರು. ಇಂತಹ
ಸಂದರ್ಭದಲ್ಲಿ ರಾಜ್ಯ ಸರ್ಕಾರದ ಸಚಿವರಾದ ಕೆ.ಎಚ್.ಮುನಿಯಪ್ಪ, ಜಿ.ಎಂಪರಮೇಶ್ವರ, ಹೆಚ್,ಸಿ.ಮಹದೇವಪ್ಪ ಪ್ರಯಾಂಕ್ ಖರ್ಗೆ, ಶಿವರಾಜ ತಂಗಡಗಿ,ಆರ್.ಬಿ,ತಿಮ್ಮಾಪುರ ಮತ್ತಿತರರು ಸೇರಿ
ಒಮ್ಮತದ ತೀರ್ಮಾನ ತೆಗೆದುಕೊಂಡರೆ ಸರ್ಕಾರಕ್ಕೆ ಅನುಕೂಲವಾಗುತ್ತದೆ.
ನಾನು ಜಿಪಂ ಅಧ್ಯಕ್ಷರಾಗಲುಕೆ.ಎಚ್.ಮುನಿಯಪ್ಪ ಕಾರಣ ಅಲ್ಲ-ಎಂ.ವಿ.ಕೃಷ್ಣಪ್ಪಸ್ಪಷ್ಟನೆ
ಪೋಸ್ಟ್ ಹಂಚಿಕೊಳ್ಳಿ:




