ಉಡುಪಿ | ವಿಶೇಷ ಮಕ್ಕಳ ಪ್ರತಿಭೆ ಅನಾವರಣಕ್ಕೆ ‘ಕಲಾಸೌರಭ-2’ ಕಾರ್ಯಕ್ರಮ

Date:

Advertisements

ಇತ್ತೀಚಿನ ದಿನಗಳಲ್ಲಿ ನಾವು ಆಟಿಸಂಗೆ ಒಳಗಾಗಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಅಂತಹ ಮಕ್ಕಳನ್ನು ಬೆಳೆಸಲು ಅಗತ್ಯವಿರುವ ವಿವಿಧ ಚಿಕಿತ್ಸೆಗಳ ಕುರಿತು ಆರಿವು ಸೀಮಿತವಾಗಿದೆ. ಆಟಿಸಂ ಪೀಡಿತ ಮಕ್ಕಳ ಪ್ರತಿಭೆಯನ್ನು ಅನಾವರಣ ಮಾಡಲು ಶನಿವಾರ (ಡಿ.15) ‘ಕಲಾಸೌರಭ-2’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಟಿಸಂ ಸೊಸೈಟಿ ಆಫ್‌ ಉಡುಪಿಯ ಸಂಚಾಲಕಿ ಅಮಿತಾ ಪೈ ಹೇಳಿದ್ದಾರೆ.

ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. “ಆಟಿಸಂ ಸ್ಪೆಕ್ರೈಮ್ ಡಿಸಾರ್ಡರ್ – ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಗೆ ಸಂಬಂಧಿಸಿದ ನರವೈಜ್ಞಾನಿಕ ಪರಿಸ್ಥಿತಿಗಳಿಗೆ ಸಂಭಂದಿಸಿದ ಸಮಸ್ಯೆಯಾಗಿದೆ. ಆಟಿಸಂಗೆ ತುತ್ತಾದ ಮಕ್ಕಳಲ್ಲಿ ಸಾಮಾಜಿಕ ಕೌಶಲ್ಯಗಳು, ಸಂವಹನ ಮತ್ತು ಪುನರಾವರ್ತಿತ ನಡವಳಿಕೆಗಳಲ್ಲಿ ತೊಂದರೆಗಳಾಗುತ್ತವೆ. ಅಂತಹ ಪ್ರತಿ ಮಗು ವಿಶಿಷ್ಟವಾಗಿದ್ದು, ಅವರು ತಮ್ಮದೇ ಆದ ಸವಾಲುಗಳನ್ನು ಮತ್ತು ಸಾಮರ್ಥ್ಯಗಳನ್ನು ಹೊಂದಿರುತ್ತಾರೆ. ಈ ಸ್ಥಿತಿಯನ್ನು ಆರಂಭದಲ್ಲಿಯೇ (2-5 ವರ್ಷಗಳು) ಗುರುತಿಸಿ ಸೂಕ್ತವಾದ ಚಿಕಿತ್ಸೆ ಮತ್ತು ತರಬೇತಿ ನೀಡಿದರೆ, ಅವರಲ್ಲಿ ಗಮನಾರ್ಹ ಬದಲಾವಣೆ ಕಾಣಬಹುದು. ಅವರಿಗೆ ಜೀವನ ಕೌಶಲಗಳನ್ನು ಕಲಿಸಬಹುದು ಮತ್ತು ಅವರಲ್ಲಿರುವ ನಿರ್ದಿಷ್ಟ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು” ಎಂದು ಹೇಳಿದರು.

“ಆಟಿಸಂ ಸೊಸೈಟಿ ಆಫ್ ಉಡುಪಿ ಸಂಸ್ಥೆಯು ಪೋಷಕರು, ವಿಶೇಷ ಶಾಲಾ ಶಿಕ್ಷಕರು, ದಾದಿಯರು ಮತ್ತು ಇತರ ವೈದ್ಯಕೀಯ ವೃತ್ತಿಪರರಲ್ಲಿ ಆಟಿಸಂ ಬಗ್ಗೆ, ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ. ಅವರ ಆರೈಕೆಯಲ್ಲಿ ತೊಡಗಿಕೊಂಡಿರುವವರಿಗೆ ಮತ್ತು ಮಕ್ಕಳ ಅಭಿವೃದ್ಧಿ ತಂತ್ರಗಳಲ್ಲಿ ತರಬೇತಿ ನೀಡುವವರಿಗೆ ನಾವು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತೇವೆ. ಬೆಂಬಲ ಗುಂಪುಗಳ ಮೂಲಕ ಸ್ವಲೀನತೆ ಹೊಂದಿರುವ ತಮ್ಮ ಮಗುವನ್ನು ಸ್ವೀಕರಿಸುವ ಮತ್ತು ಕಾಳಜಿ ವಹಿಸುವ ಪೋಷಕರ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಲು ನಾವು ಅವರಿಗೆ ಸೂಕ್ತ ಮಾರ್ಗದರ್ಶನವನ್ನು ಒದಗಿಸುತ್ತಿದ್ದೇವೆ” ಎಂದು ಹೇಳಿದರು.

Advertisements

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಖ್ಯಾತ ಮನೋ ವೈದ್ಯ ಪಿ.ವಿ ಭಂಡಾರಿ, “ವೈದ್ಯಕೀಯ ಮತ್ತು ಮಾನಸಿಕ ತಜ್ಞರ ಮಾರ್ಗದರ್ಶನದಲ್ಲಿ ಉತ್ತಮ ಗುಣಮಟ್ಟದ ಸ್ವಲೀನತೆಯ ಆರೈಕೆ ಅಭ್ಯಾಸಗಳ ಆಧಾರದ ಮೇಲೆ ಸ್ವಲೀನತೆ ಹೊಂದಿರುವ ಮಕ್ಕಳಿಗೆ ಮೀಸಲಾದ ವೈಯಕ್ತಿಕ ಅಭಿವೃದ್ಧಿ ಶಿಕ್ಷಣವನ್ನು ಒದಗಿಸಲು ಉಡುಪಿಯಲ್ಲಿ ಸುಧಾರಿತ ಆಟಿಸಂ ಕೇಂದ್ರವನ್ನು ರಚಿಸುವುದು ನಮ್ಮ ಮುಂದಿನ ಪ್ರಯತ್ನವಾಗಿದೆ” ಎಂದರು.

“ವಿಶೇಷ ಮಕ್ಕಳ ವಿಶೇಷ ಪ್ರತಿಭೆಗಳನ್ನು ಅನಾವರಣಗೊಳಿಸುವ ಮತ್ತು ವಿಶೇಷ ಮಕ್ಕಳಿಗೂ ಅವಕಾಶ ಕಲ್ಪಿಸಿ ಕೊಡಬೇಕು ಎಂಬ ನಿಟ್ಟಿನಲ್ಲಿ ‘ಕಲಾಸೌರಭ-2’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬನ್ನಂಜೆಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಕಾರ್ಯಕ್ರಮವು ಶನಿವಾರ ಬೆಳಿಗ್ಗೆ 9 ರಿಂದ 4 30 ರವರೆಗೆ ನಡೆಯಲಿದೆ” ಎಂದು ತಿಳಿಸಿದ್ದಾರೆ.

“ವಿಶೇಷ ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸಲು ಉಡುಪಿಯ ವಿಶೇಷ ಶಾಲೆಗಳಿಗೆ ವೇದಿಕೆ ಕಲ್ಪಿಸಲು ಮೀಸಲಾಗಿರುವ ಏಕೈಕ ಕಾರ್ಯಕ್ರಮ ಇದಾಗಿದೆ. ಈ ವರ್ಷ ಜಿಲ್ಲೆಯಾದ್ಯಂತ 15 ವಿಶೇಷ ಶಾಲೆಗಳ 225 ವಿಶೇಷ ಮಕ್ಕಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಲ್ಲಾ ಆಡಳಿತ ಉಡುಪಿ, ಡಿಸೆಬಿಲಿಟಿ ಎನ್fಜಿಒ ಎಲೈಸ್, ಡಾ. ಜಿಲ್. ಶಂಕರ ಮಹಿಳಾ ಪ್ರಥಮ ದರ್ಜೆ ಹಾಗೂ ಉನ್ನತ ವ್ಯಾಸಂಗ ಕೇಂದ್ರ ಅಜ್ಜರಕಾಡು, ಉಡುಪಿ, ಜಿ.ಸಿ.ಐ ಉಡುಪಿ ಇಂದ್ರಾಳಿ ಇವರು ತಮ್ಮ ಸಹಾಕರವನ್ನು ನೀಡಿದ್ದಾರೆ” ಎಂದು ವಿವರಿಸಿದ್ದಾರೆ.

“ಜೊತೆಗೆ, ವಿವಿಧ ಆಫ್ ಸ್ಟೇಜ್ ಆಕರ್ಷಣೆಗಳಾದ ಸ್ಟಾಲ್‌ಗಳು ಇನ್ನು ಖ್ಯಾತ ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ಅವರು ಭಾಗವಹಿಸಲಿದ್ದು ವಿಶೇಷ ಮಕ್ಕಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹದ ಉದ್ದೇಶದಿಂದ ಸ್ಥಳದಲ್ಲೇ ನಿಮ್ಮ ಕಾರ್ಟೂನ್ ಗಳನ್ನು ಬರೆದು ಕೊಡಲಿದ್ದಾರೆ ನೀವು ನೀಡುವ ಹಣವನ್ನು ವಿಶೇಷ ಮಕ್ಕಳ ನಿಧಿಗೆ ನೀಡಲಿದ್ದಾರೆ. ಇದರೊಂದಿಗೆ ಇನ್ನೂ ಅನೇಕ ಚಟುವಟಿಕೆಗಳು ಸಹ ಸ್ಥಳದಲ್ಲಿ ಇರುತ್ತವೆ” ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

Download Eedina App Android / iOS

X