ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕು ಪಂಚಾಯತಿಯ ಟೆಕ್ನಿಕಲ್ ಅಸಿಸ್ಟಂಟ್ (ಟಿ.ಎ) ಆಗಿ ಕಾರ್ಯನಿರ್ವಾಹಿಸುತ್ತಿರುವ ವಿಕಾಸ ಸವದಿ ಅವರ ವರ್ಗಾವಣೆಯನ್ನು ರದ್ದುಗೊಳಿಸಿ, ಅವರು ಶಹಾಬಾದ ತಾಲೂಕಿನಲ್ಲೇ ಕೆಲಸ ಮುಂದುವರೆಸುವಂತೆ ಮಾಡಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (AIAWU) ಒತ್ತಾಯಿಸಿದೆ.
ಕಲಬುರಗಿ ಜಿಲ್ಲಾ ಪಂಚಾಯತಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ಕಾರ್ಯನಿರ್ವಾಕ ಅಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಶಹಾಬಾದ ತಾಲೂಕಿನಲ್ಲಿ ಒಟ್ಟು ಏಳು ಗ್ರಾಮ ಪಂಚಾಯತಿಗಳಲ್ಲಿ ಮನರೇಗಾ ಯೋಜನೆ ಸಮರ್ಪಕವಾಗಿ ಜಾರಿ ಮಾಡುವಲ್ಲಿ ಟಿ.ಎ ವಿಕಾಸ ಸದವಿ ಅವರು ಶ್ರಮಿಸಿದ್ದಾರೆ. ಗುಣಮಟ್ಟದ ಕಾಮಗಾರಿಗಳನ್ನು ಮಾಡಿಸುವಲ್ಲಿ ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಾಸಿದ್ದಾರೆ. ಬಡ ಕೂಲಿ ಕಾರ್ಮಿಕರ ಪರವಾಗಿ ಕೆಲಸ ಮಾಡಿದ್ದಾರೆ. ಅವರನ್ನು ವರ್ಗಾವಣೆ ಮಾಡಬಾರದು” ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
“ಕೆಲ ಚುನಾಯಿತ ಪ್ರತಿನಿಧಿಗಳು ಹಾಗೂ ರಾಜಕಾರಣಿಗಳು ಅವರನ್ನು ಉದೇಶ ಪೂರ್ವಕಾವಾಗಿ ವರ್ಗಾವಣೆ ಮಾಡಿಸಲು ಮುಂದಾಗಿದ್ದಾರೆ. ವಿಕಾಸ್ ಅವರು ಮನರೇಗಾ ಯೋಜನೆಯ ಹಣ ಲೂಟಿ ಮಾಡಲು, ಬೇನಾಮಿ ಹೆಸರಿನಲ್ಲಿ ಹಣ ಪಾವತಿ ಮಾಡಲು ನಿರಾಕರಿಸಿದ ಕಾರಣಕ್ಕೆ ಅವರ ವಿರುದ್ಧ ಸುಳ್ಳು ಆರೋಪ ಮಾಡಿ, ರಾಜಕೀಯ ಒತ್ತಡ ತಂದು ವರ್ಗಾವಣೆ ಮಾಡಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಚಂದ್ರಪ್ಪ ಹೊಸ್ಕರ್, ಶೇಖಮ ಕುರಿ, ಮಲಮ್ಮ ಕೂಡ್ಲಿ, ಕಾಶಿನಾಥ ಬಂಡಿ, ಸುನಿತಾ ರಂಗ, ಶ್ರೀದೇವಿ ಬಟಗೇರ ಬಿ, ಗುರುನಂದೇಶ್, ಸಂತೋಷ ಕುಮಾರ್, ಹಣಮಂತ ಕೂಟರಕಿ, ಕವಿತಾ ಬಟಗೇರ.ಕೆ, ಪಾರ್ವತಿ ತರನಳಿ, ಸುನಂದಾ ತರನಳಿ, ಶಿಲ್ಪಾ ಮಲ್ಲು ಮುಗಳನಾಗವ್ ಇನ್ನಿತರರು ಇದ್ದರು.