ಉತ್ತರ ಪ್ರದೇಶದಲ್ಲಿ 80 ಸ್ಥಾನಗಳನ್ನು ಗೆದ್ದರೂ ಇವಿಎಂ ಬಗ್ಗೆ ಸಂದೇಹವಿದೆ: ಅಖಿಲೇಶ್ ಯಾದವ್

Date:

ವಿದ್ಯುನ್ಮಾನ ಮತಯಂತ್ರದ ಬಗ್ಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ ಹಾಗೂ ಸಮಾಜವಾದಿ ಪಕ್ಷದ ಸಂಸ್ಥಾಪಕ ಪುನಃ ಅನುಮಾನ ವ್ಯಕ್ತಪಡಿಸಿದ್ದು, ಉತ್ತರ ಪ್ರದೇಶದಲ್ಲಿ ನಾವು 80 ಲೋಕಸಭಾ ಸ್ಥಾನಗಳನ್ನು ಗೆದ್ದರೂ ಇವಿಎಂ ಮೇಲೆ ನಮ್ಮ ಅನುಮಾನ ಬದಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

- Advertisement -

“ನಾನು ನಿನ್ನೆಯೂ ಇವಿಎಂಅನ್ನು ನಂಬಲಿಲ್ಲ, ಇವತ್ತು ನಂಬುವುದಿಲ್ಲ. ಉತ್ತರ ಪ್ರದೇಶದಲ್ಲಿ ನಾವು 80 ಸ್ಥಾನಗಳನ್ನು ಗೆದ್ದರೂ ಇವಿಎಂಗಳನ್ನು ನಂಬುವುದಿಲ್ಲ. ಇದು ಯಾವಾಗಲು ಸಮಸ್ಯೆಯಾಗಿರುತ್ತದೆ. ನಾವು ಇದರ ಬಗ್ಗೆ ದೃಢವಾಗಿದ್ದು, ನಾವು ಇವಿಎಂಗಳ ಮೂಲಕ ಗೆದ್ದರೂ ಅಧಿಕಾರಕ್ಕೆ ಬಂದರೆ ನಾವು ಅದನ್ನು ತೆಗೆದುಹಾಕುತ್ತೇವೆ” ಎಂದು ಅಖಿಲೇಶ್ ಯಾದವ್‌ ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಗಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

“ಇವಿಎಂಗಳನ್ನು ಬಳಸುವುದನ್ನು ನಿಲ್ಲಿಸುವವರೆಗೂ ಈ ಸಮಸ್ಯೆ ಬಗೆಹರಿಯುವುದಿಲ್ಲ. ನಾವು ನಿಲ್ಲಿಸಬೇಕೆಂದು ನಿರ್ಧರಿಸಿದ್ದೇವೆ” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಂದನಾ ನಿರ್ಣಯದ ಭಾಷಣದ ನಂತರ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

2024ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ವಿಪಕ್ಷಗಳು ಇವಿಎಂಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದು, ಮತಯಂತ್ರವನ್ನು ಹ್ಯಾಕ್‌ ಮಾಡಬಹುದು ಅಥವಾ ಮತಗಳನ್ನು ತಿರುಚಬಹುದು ಎಂದು ತಿಳಿಸಿದ್ದವು. ಕೋರ್ಟ್‌ನಲ್ಲೂ ಈ ಬಗ್ಗೆ ಅರ್ಜಿ ಸಲ್ಲಿಸಲಾಗಿದ್ದು, ಆದರೆ ಸೂಕ್ತ ಆಧಾರವಿಲ್ಲದ ಕಾರಣ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೊದಲ ಭಾಷಣದಲ್ಲೇ ಬಿಜೆಪಿಗರ ಬೆವರಿಳಿಸಿದ ರಾಹುಲ್ ಮತ್ತು ಮಹುವಾ

ಅಖಿಲೇಶ್ ಯಾದವ್‌ 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೂಡ ಇದೇ ರೀತಿಯ ಪ್ರಶ್ನೆಗಳನ್ನು ಎತ್ತಿದ್ದರು.

ಲೋಕಸಭೆ ಚುನಾವಣೆ ನಡೆಯುವ ಸಂದರ್ಭ ಬಿಜೆಪಿ ವಿರುದ್ಧ ಆರೋಪ ಮಾಡಿದ್ದ ಅಖಿಲೇಶ್ ಯಾದವ್, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸಿದ್ದ ವಾರಣಾಸಿ ಕ್ಷೇತ್ರದಲ್ಲಿ ಕೆಲವು ನಿರ್ದಿಷ್ಟ ಉಲ್ಲೇಖಗಳೊಂದಿಗೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ವಾಗ್ದಾಳಿ ನಡೆಸಿದ್ದರು.

2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ 37 ಸ್ಥಾನ ಗಳಿಸಿ ಉತ್ತಮ ಸಾಧನೆ ಮಾಡಿದ್ದರೆ, ಬಿಜೆಪಿ 32 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಎಸ್‌ಪಿ ಮೈತ್ರಿಕೂಟದ ಮಿತ್ರಪಕ್ಷ ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR ವಿವಾದದ ನಡುವೆ ಒಡಿಶಾ ಮುಖ್ಯ ಚುನಾವಣಾಧಿಕಾರಿ ಸ್ವಯಂ ನಿವೃತ್ತಿಗೆ ಅರ್ಜಿ; ಆರ್ ಎಸ್ ಗೋಪಾಲನ್ ಹೇಳಿದ್ದೇನು?

ಒಡಿಶಾದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡ...

ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಕಾರ ಆರೋಪ; ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ ದಲಿತ ಮಹಿಳೆ

ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ 20 ವರ್ಷದ ಬುಡಕಟ್ಟು (ದಲಿತ) ಮಹಿಳೆಯೊಬ್ಬರು...

ಆರೋಪಿಯನ್ನು ಹಿಡಿದರೂ FIRನಲ್ಲಿ ಹೆಸರಿಲ್ಲ; ಯುಪಿ ಪೊಲೀಸರ ನಡೆಗೆ ಸುಪ್ರೀಂ ಅಸಮಾಧಾನ

ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ತನಿಖೆಯಲ್ಲಿ ಉತ್ತರ ಪ್ರದೇಶ ಪೊಲೀಸರ...

ಇಡಿ ಅಧಿಕಾರಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ಪ್ರಕರಣ: ಪ್ರತಿಕ್ರಿಯಿಸಲು ವಿಳಂಬ ಮಾಡಿದ ಸಿಎಂ ಸೊರೇನ್‌ಗೆ ಜಾರ್ಖಂಡ್ ಹೈಕೋರ್ಟ್ ದಂಡ

ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ...