ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ 371ನೇ (ಜೆ) ಕಲಂ ಜಾರಿಯಾಗಿರುವ ದಿನವು ಐತಿಹಾಸಿಕ ದಿನವಾಗಿದೆ. ವರ್ಷಾಚರಣೆ ಮೂಲಕ ಪ್ರಗತಿಯ ಅವಲೋಕನ ಮಾಡುವ ಅಗತ್ಯವಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಬಸವರಾಜ ದೇಶಮುಖ ಹಾಗೂ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದರು.
ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯು 371ನೇ(ಜೆ) ಕಲಂ ದಶಮಾನೋತ್ಸವ ಆಚರಣೆಗೆ ಸಂಬಂಧಿಸಿ ಗುರುವಾರ ಆಯೋಜಿಸಿದ್ದ 7 ಜಿಲ್ಲೆಗಳ ಮುಖಂಡರ ಸಭೆಯಲ್ಲಿ ಅವರು ಹೇಳಿದರು.
ಬಸವರಾಜ ದೇಶಮುಖ ಮಾತನಾಡಿ, ‘371(ಜೆ) ಕಲಂ ಜಾರಿಗಾಗಿ ಸುದೀರ್ಘ ಚಳವಳಿ ನಡೆದಿದ್ದು, ಎಲ್ಲರೂ ಸ್ಮರಿಸುವ ಅಗತ್ಯವಿದೆ. ಕೇಂದ್ರ ಸರ್ಕಾರ ಮತ್ತು ನಮ್ಮ ನಾಯಕರ ರಾಜಕೀಯ ಇಚ್ಛಾಶಕ್ತಿಯಿಂದ ಸಂವಿಧಾನಬದ್ಧ ಸ್ಥಾನಮಾನ ದೊರಕಿದೆ’ ಎಂದರು.
ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, ‘ಸಮಿತಿ ಈಗಾಗಲೇ ಹಮ್ಮಿಕೊಂಡಿರುವ ರೂಪುರೇಷೆಗಳಂತೆ ಬರುವ ದಿನಗಳಲ್ಲಿ ಕಲಬುರಗಿಯ ಖವಾಜಾ ಬಂದೇನವಾಜ್ ಸಜ್ಜಾದೆ ನೇತೃತ್ವದಲ್ಲಿ ಸಭೆ ನಡೆಸಿ, ಕಲ್ಯಾಣದ ಜಿಲ್ಲೆಗಳಲ್ಲಿ ಸಭೆ ಆಯೋಜಿಸಿ, ಶೀಘ್ರ ವಿಚಾರ ಸಂಕಿರಣ ಏರ್ಪಡಿಸುವ ಕುರಿತು ಜಿಲ್ಲೆಗಳ ಮುಖಂಡರೊಂದಿಗೆ ಚರ್ಚಿಸಲಾಗುವುದು’ ಎಂದು ಹೇಳಿದರು.

ಸಮಿತಿಯ ಬಳ್ಳಾರಿ ಜಿಲ್ಲೆ ಅಧ್ಯಕ್ಷ ಪನ್ನಾ ರಾಜು ಮಾತನಾಡಿ, ‘371ನೇ(ಜೆ) ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರದಿಂದ ಇನ್ನೂ ಬಹಳಷ್ಟು ಕೆಲಸಗಳು ಆಗಬೇಕು. ಹೋರಾಟ ಸಮಿತಿ ಸರ್ಕಾರದ ಮೇಲೆ ಬಲವಾದ ಒತ್ತಡ ತರಬೇಕು’ ಎಂದು ಆಗ್ರಹಿಸಿದರು.
ಚಿಂತಕ ಪ್ರೊ.ಆರ್.ಕೆ.ಹುಡಗಿ, ನಿವೃತ್ತ ಕುಲಪತಿ ಪ್ರೊ. ಪ್ರತಾಪಸಿಂಗ್ ತಿವಾರಿ, ಯಾದಗಿರಿ ಜಿಲ್ಲೆಯ ಮುಖಂಡ ಭೀಮಾ ನಾಯಕ, ಕೊಪ್ಪಳ ಜಿಲ್ಲೆಯ ಪ್ರೊ.ಎಸ್.ಎಸ್. ಪಾಟೀಲ, ಬೀದರ್ ಜಿಲ್ಲೆಯ ಮುಖಂಡರಾದ ಪಂಡಿತರಾವ ಚಿದ್ರಿ, ವಿನಯ ಮಾಳಗೆ ಸೇರಿದಂತೆ ಮತ್ತಿತರರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಕ್ರಿಯಾ ಸಮಿತಿ ರಚಿಸಲು ಸಮಿತಿ ಗೌರವ ಅಧ್ಯಕ್ಷರು ಮತ್ತು ಸಂಸ್ಥಾಪಕ ಅಧ್ಯಕ್ಷರಿಗೆ ಸಂಪೂರ್ಣ ಅಧಿಕಾರ ನೀಡಬೇಕು ಎಂದು ಬೀದರ್ ಜಿಲ್ಲೆ ಮುಖಂಡ ಅಬ್ದುಲ್ ಮನ್ನನ್ ಸೇಠ ಮಂಡಿಸಿದರು. ಇದನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು. ಎಲ್ಲರ ಸಹಮತಿಯಂತೆ ಖವಾಜಾ ಬಂದೇನವಾಜ ವಿಶ್ವವಿದ್ಯಾಲಯದಲ್ಲಿ ಜರುಗುವ ಸಭೆಯಲ್ಲಿ ವಿಚಾರ ಸಂಕಿರಣಗಳ ದಿನಾಂಕ ನಿಗದಿಗೆ ನಿರ್ಧರಿಸಲಾಯಿತು.
ಇದನ್ನೂ ಓದಿ : ಕಲಬುರಗಿ | ಕುರಿ ಮೇಯಿಸಲು ಹೋದ ಬಾಲಕರಿಬ್ಬರು ಬಾವಿಯಲ್ಲಿ ಬಿದ್ದು ಸಾವು
ಮುಖಂಡ ಬಸವರಾಜ ಕುಮನೂರ, ಲಿಂಗರಾಜ ಸಿರಗಾಪೂರ, ಸೈಯದ ಸನಾವುಲ್ಲ, ಬಿ.ಎಸ್. ಗುಲಶೆಟ್ಟಿ, ವೀರಶೆಟ್ಟಿ, ಕೈಲಾಸನಾಥ ದೀಕ್ಷಿತ, ಎಂ.ಬಿ. ನಿಂಗಪ್ಪ, ಕಲ್ಯಾಣರಾವ, ಅಸ್ಲಂ ಚೌಂಗೆ, ಭೀಮಶೆಟ್ಟಿ ಮುಕ್ಕಾ, ಸಂಧ್ಯಾರಾಜ, ವಿಷ್ಣು ಜೈನ್, ಮೋಹನ ಎಂ., ರಾಜಪ್ಪ ಬೀದರ್, ಮಾದಪ್ಪ ಬೀದರ, ಚಂದ್ರಶೇಖರ ಪಾಟೀಲ ಬೀದರ್, ಹಾಜಿ ರಿಜ್ವಾನ ಸಿದ್ದೀಖಿ, ನಾಗೇಂದ್ರ ಗೌಡ, ರೋಹನಕುಮಾರ ಬೀದರ್, ಮಹೇಶ, ರಾಜು ಜೈನ್, ಮುತ್ತಣ್ಣ ಎಸ್. ನಾಡಗೇರಿ, ಶರಣಪ್ಪ ಕುರಿಕೋಟಿ, ಬಾಬಾ ಫಕ್ರುದ್ದೀನ್, ಮಹೇಶ ದೇಶಪಾಂಡೆ, ರಾಘವೇಂದ್ರ ಜೆ. ಕುಲಕರ್ಣಿ, ಧರ್ಮರಾಜ ಪಾಟೀಲ, ಗೋವಿಂದ ಚೌವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.