ಕಲಬುರಗಿ | 371ನೇ (ಜೆ) ಕಲಂ ಜಾರಿ ದಿನ; ಕಲ್ಯಾಣ ಕರ್ನಾಟಕ ಐತಿಹಾಸಿಕ ದಿನ

Date:

ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ 371ನೇ (ಜೆ) ಕಲಂ ಜಾರಿಯಾಗಿರುವ ದಿನವು ಐತಿಹಾಸಿಕ ದಿನವಾಗಿದೆ. ವರ್ಷಾಚರಣೆ ಮೂಲಕ ಪ್ರಗತಿಯ ಅವಲೋಕನ ಮಾಡುವ ಅಗತ್ಯವಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಬಸವರಾಜ ದೇಶಮುಖ ಹಾಗೂ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದರು.

- Advertisement -

ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯು 371ನೇ(ಜೆ) ಕಲಂ ದಶಮಾನೋತ್ಸವ ಆಚರಣೆಗೆ ಸಂಬಂಧಿಸಿ ಗುರುವಾರ ಆಯೋಜಿಸಿದ್ದ 7 ಜಿಲ್ಲೆಗಳ ಮುಖಂಡರ ಸಭೆಯಲ್ಲಿ ಅವರು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಬಸವರಾಜ ದೇಶಮುಖ ಮಾತನಾಡಿ, ‘371(ಜೆ) ಕಲಂ ಜಾರಿಗಾಗಿ ಸುದೀರ್ಘ ಚಳವಳಿ ನಡೆದಿದ್ದು, ಎಲ್ಲರೂ ಸ್ಮರಿಸುವ ಅಗತ್ಯವಿದೆ. ಕೇಂದ್ರ ಸರ್ಕಾರ ಮತ್ತು ನಮ್ಮ ನಾಯಕರ ರಾಜಕೀಯ ಇಚ್ಛಾಶಕ್ತಿಯಿಂದ ಸಂವಿಧಾನಬದ್ಧ ಸ್ಥಾನಮಾನ ದೊರಕಿದೆ’ ಎಂದರು.

ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, ‘ಸಮಿತಿ ಈಗಾಗಲೇ ಹಮ್ಮಿಕೊಂಡಿರುವ ರೂಪುರೇಷೆಗಳಂತೆ ಬರುವ ದಿನಗಳಲ್ಲಿ ಕಲಬುರಗಿಯ ಖವಾಜಾ ಬಂದೇನವಾಜ್‌ ಸಜ್ಜಾದೆ ನೇತೃತ್ವದಲ್ಲಿ ಸಭೆ ನಡೆಸಿ, ಕಲ್ಯಾಣದ ಜಿಲ್ಲೆಗಳಲ್ಲಿ ಸಭೆ ಆಯೋಜಿಸಿ, ಶೀಘ್ರ ವಿಚಾರ ಸಂಕಿರಣ ಏರ್ಪಡಿಸುವ ಕುರಿತು ಜಿಲ್ಲೆಗಳ ಮುಖಂಡರೊಂದಿಗೆ ಚರ್ಚಿಸಲಾಗುವುದು’ ಎಂದು ಹೇಳಿದರು.

1003863047
ಸಭೆಯಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಮುಖಂಡರು ಮಾತನಾಡಿದರು.

ಸಮಿತಿಯ ಬಳ್ಳಾರಿ ಜಿಲ್ಲೆ ಅಧ್ಯಕ್ಷ ಪನ್ನಾ ರಾಜು ಮಾತನಾಡಿ, ‘371ನೇ(ಜೆ) ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರದಿಂದ ಇನ್ನೂ ಬಹಳಷ್ಟು ಕೆಲಸಗಳು ಆಗಬೇಕು. ಹೋರಾಟ ಸಮಿತಿ ಸರ್ಕಾರದ ಮೇಲೆ ಬಲವಾದ ಒತ್ತಡ ತರಬೇಕು’ ಎಂದು ಆಗ್ರಹಿಸಿದರು.

ಚಿಂತಕ ಪ್ರೊ.ಆರ್.ಕೆ.ಹುಡಗಿ, ನಿವೃತ್ತ ಕುಲಪತಿ ಪ್ರೊ. ಪ್ರತಾಪಸಿಂಗ್ ತಿವಾರಿ, ಯಾದಗಿರಿ ಜಿಲ್ಲೆಯ ಮುಖಂಡ ಭೀಮಾ ನಾಯಕ, ಕೊಪ್ಪಳ ಜಿಲ್ಲೆಯ ಪ್ರೊ.ಎಸ್.ಎಸ್. ಪಾಟೀಲ, ಬೀದರ್‌ ಜಿಲ್ಲೆಯ ಮುಖಂಡರಾದ ಪಂಡಿತರಾವ ಚಿದ್ರಿ, ವಿನಯ ಮಾಳಗೆ ಸೇರಿದಂತೆ ಮತ್ತಿತರರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಕ್ರಿಯಾ ಸಮಿತಿ ರಚಿಸಲು ಸಮಿತಿ ಗೌರವ ಅಧ್ಯಕ್ಷರು ಮತ್ತು ಸಂಸ್ಥಾಪಕ ಅಧ್ಯಕ್ಷರಿಗೆ ಸಂಪೂರ್ಣ ಅಧಿಕಾರ ನೀಡಬೇಕು ಎಂದು ಬೀದರ್‌ ಜಿಲ್ಲೆ ಮುಖಂಡ ಅಬ್ದುಲ್‌ ಮನ್ನನ್ ಸೇಠ ಮಂಡಿಸಿದರು. ಇದನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು. ಎಲ್ಲರ ಸಹಮತಿಯಂತೆ ಖವಾಜಾ ಬಂದೇನವಾಜ ವಿಶ್ವವಿದ್ಯಾಲಯದಲ್ಲಿ ಜರುಗುವ ಸಭೆಯಲ್ಲಿ ವಿಚಾರ ಸಂಕಿರಣಗಳ ದಿನಾಂಕ ನಿಗದಿಗೆ ನಿರ್ಧರಿಸಲಾಯಿತು.

ಇದನ್ನೂ ಓದಿ : ಕಲಬುರಗಿ | ಕುರಿ ಮೇಯಿಸಲು ಹೋದ ಬಾಲಕರಿಬ್ಬರು ಬಾವಿಯಲ್ಲಿ ಬಿದ್ದು ಸಾವು

ಮುಖಂಡ ಬಸವರಾಜ ಕುಮನೂರ, ಲಿಂಗರಾಜ ಸಿರಗಾಪೂರ, ಸೈಯದ ಸನಾವುಲ್ಲ, ಬಿ.ಎಸ್. ಗುಲಶೆಟ್ಟಿ, ವೀರಶೆಟ್ಟಿ, ಕೈಲಾಸನಾಥ ದೀಕ್ಷಿತ, ಎಂ.ಬಿ. ನಿಂಗಪ್ಪ, ಕಲ್ಯಾಣರಾವ, ಅಸ್ಲಂ ಚೌಂಗೆ, ಭೀಮಶೆಟ್ಟಿ ಮುಕ್ಕಾ, ಸಂಧ್ಯಾರಾಜ, ವಿಷ್ಣು ಜೈನ್, ಮೋಹನ ಎಂ., ರಾಜಪ್ಪ ಬೀದರ್‌, ಮಾದಪ್ಪ ಬೀದರ, ಚಂದ್ರಶೇಖರ ಪಾಟೀಲ ಬೀದರ್‌, ಹಾಜಿ ರಿಜ್ವಾನ ಸಿದ್ದೀಖಿ, ನಾಗೇಂದ್ರ ಗೌಡ, ರೋಹನಕುಮಾರ ಬೀದರ್‌, ಮಹೇಶ, ರಾಜು ಜೈನ್, ಮುತ್ತಣ್ಣ ಎಸ್. ನಾಡಗೇರಿ, ಶರಣಪ್ಪ ಕುರಿಕೋಟಿ, ಬಾಬಾ ಫಕ್ರುದ್ದೀನ್‌, ಮಹೇಶ ದೇಶಪಾಂಡೆ, ರಾಘವೇಂದ್ರ ಜೆ. ಕುಲಕರ್ಣಿ, ಧರ್ಮರಾಜ ಪಾಟೀಲ, ಗೋವಿಂದ ಚೌವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ವಸತಿ ನಿಲಯದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಆಳಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ...

ಕಲಬುರಗಿ | ತಾಂತ್ರಿಕ ದೋಷಕ್ಕೆ ತುರ್ತು ಲ್ಯಾಂಡಿಂಗ್; ತೊಗರಿ ಜಮೀನಿನಲ್ಲಿ ಲಘು ವಿಮಾನದ ತುರ್ತು ಭೂಸ್ಪರ್ಶ

ಹಾರಾಟದ ವೇಳೆ ದಿಢೀರ್‌ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತರಬೇತಿ ಲಘು...

ರಾಯಚೂರು | ಸರ್ಕಾರಿ ಶಾಲೆಗಳ ವಿವಿಧ ಬೇಡಿಕೆ ಈಡೇರಿಕೆಗೆ ನ.26ರಿಂದ ಅಹೋರಾತ್ರಿ ಧರಣಿ

ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು, ಸರ್ಕಾರಿ ಶಾಲೆಗಳಿಗೆ ಪೂರ್ಣ...

ರಾಯಚೂರು | ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ ರಥಕ್ಕೆ ದೇವದುರ್ಗದಲ್ಲಿ ಅದ್ಧೂರಿ ಸ್ವಾಗತ

ಸಂವಿಧಾನ ಆಧಾರಿತ ಪ್ರಬುದ್ಧ ಭಾರತ ನಿರ್ಮಾಣ ಹಾಗೂ ಬೌದ್ಧ ಧಮ್ಮದ ಮಾನವೀಯ...