ಕಲಬುರಗಿ | ಕ್ರಾಂತಿಕಾರಿ ಭಗತಸಿಂಗ್‌ರವರ 94ನೇ ಹುತಾತ್ಮ ದಿನಾಚರಣೆ

Date:

Advertisements

ದೇಶದ ಪ್ರತಿಯೊಬ್ಬ ಪ್ರಜೆಯ ಮೂಲ ಹಕ್ಕುಗಳಾದ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕದಂತಹ ಸಮಸ್ಯೆಗಳ ಪರಿಹಾರಕ್ಕೆ ಭಗತಸಿಂಗ್‌ರಂತಹ ಕ್ರಾಂತಿಕಾರಿಗಳ ವಿಚಾರಗಳ ಅನುಷ್ಠಾನದಿಂದ ಮಾತ್ರ ಸಾಧ್ಯ ಎಂದು ಎಐಡಿವೈಒ ಕಲಬುರಗಿ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್ ಎಚ್ ಅಭಿಪ್ರಾಯಪಟ್ಟರು.

ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿನ ರಾಜಿರಹಿತ (ಸಂಧಾನತೀತ) ಪಂಥದ ನಾಯಕ ಶಹೀದ್ ಭಗತಸಿಂಗ್‌ರವರ 94ನೇ ಹುತಾತ್ಮ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ ಸಂಘಟನೆಗಳಾದ ಎಐಡಿಎಸ್‌ಒ, ಯುವಜನ ಸಂಘಟನೆ ಎಐಡಿವೈಒ ಹಾಗೂ ಮಹಿಳಾ ಸಂಘಟನೆ ಎಐಎಂಎಸ್ಎ‌ಸ್‌ ಒಗ್ಗೂಡಿ ಕಲಬುರಗಿಯ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣಾಕಾರರಾಗಿ ಮಾತನಾಡಿದರು.

“ದೇಶವು ಸ್ವಾತಂತ್ರ್ಯಗೊಂಡು 76 ವರ್ಷಗಳು ಗತಿಸಿದರೂ ಕೂಡಾ ಇಲ್ಲಿ ಆಳ್ವಿಕೆ ಮಾಡಿರುವ ಎಲ್ಲ ಪಕ್ಷಗಳು ಜನಸಾಮಾನ್ಯರ ಮೂಲ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ದೇಶವನ್ನು ಕಿತ್ತುತಿನ್ನುತ್ತಿರುವಂತಹ ಸಮಸ್ಯೆಗಳ ಪರಿಹಾರಕ್ಕೆ ಭಗತಸಿಂಗ್‌ರಂತಹ ಕ್ರಾಂತಿಕಾರಿಗಳ ವಿಚಾರಗಳ ಅನುಷ್ಠಾನದಿಂದ ಮಾತ್ರ ಸಾಧ್ಯ. ಆದಕಾರಣ ಅವರ ಸಮಾಜವಾದಿ ಚಿಂತನೆಗಳನ್ನು ವಿದ್ಯಾರ್ಥಿ-ಯುವಜನರು ಮೈಗೂಡಿಸಿಕೊಂಡು ಹೋರಾಟಕ್ಕೆ ಧುಮಕಬೇಕು” ಎಂದು ಕರೆ ನೀಡಿದರು.

Advertisements

“ಭಗತ್‌ಸಿಂಗ್ ಅವರು ಬ್ರಿಟಿಷರನ್ನು ದೇಶದಿಂದ ಹೊರದೂಡುವುದರಿಂದ ನಮ್ಮ ಕರ್ತವ್ಯ ಕೊನೆಗೊಳ್ಳುವುದಿಲ್ಲ. ನವಸಮಾಜದ ಸೃಷ್ಟಿಗೆ ಇನ್ನೊಂದು ಕ್ರಾಂತಿಯನ್ನು ಸಂಘಟಿಸಬೇಕೆಂದು ಭಗತಸಿಂಗ್ ನುಡಿದಿದ್ದರು. ಅವರು ಹಂಬಲಿಸಿದ ಆ ಇನ್ನೊಂದು ಕ್ರಾಂತಿ ಯಾವುದು? ಬಡತನ, ಅನಕ್ಷರತೆ, ಜಾತಿವಾದ, ಕೋಮುವಾದಗಳಿಂದ ಜರ್ಜರಿತವಾಗಿರುವ ನಮ್ಮ ಸಮಾಜದಲ್ಲಿ ಮೂಲಭೂತ ಬದಲಾವಣೆಯಾಗಬೇಕು. ಈ ಸಾಮಾಜಿಕ ಪಿಡುಗುಗಳನ್ನು ನಿವಾರಿಸಿ, ಸಮೃದ್ಧ ಸ್ವಾಸ್ತ್ಯ ಸಮಾಜ ನಿರ್ಮಾಣವಾಗಬೇಕು. ಮಾನವನಿಂದ ಮಾನವನ ಶೋಷಣೆಯಿಲ್ಲದ ಸಮಾಜ ಅವತರಿಸಬೇಕೆಂಬುದು ಭಗತ್‌ಸಿಂಗ್‌ ಅವರ ಕನಸಾಗಿತ್ತು. ಹಾಗಾಗಿ ಇನ್ನೊಂದು ಕ್ರಾಂತಿಯ ಅಗತ್ಯತೆಯನ್ನು ಪ್ರತಿಪಾದಿಸಿದ್ದರು. ಆ ನಿಟ್ಟಿನಲ್ಲಿ ನಾವುಗಳು ಕಾರ್ಯಪ್ರವೃತ್ತರಾಗಬೇಕು” ಎಂದು ಹೇಳಿದರು.

ಹಿರಿಯ ಪತ್ರಕರ್ತ ಪ್ರಭಾಕರ್ ಜೋಷಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಇಂದಿನ ವಿದ್ಯಾರ್ಥಿಗಳು ಸಿನಿಮಾ ಹಾಗೂ ಕ್ರಿಕೆಟ್ ತಾರೆಗಳನ್ನು ತಮ್ಮ ಆದರ್ಶವನ್ನಾಗಿ ಮಾಡಿಕೊಳ್ಳದೇ ಭಗತಸಿಂಗ್‌ರಂತಹ ಕ್ರಾಂತಿಕಾರಿಗಳನ್ನು ಆದರ್ಶವನ್ನಾಗಿ ತೆಗೆದುಕೊಂಡು ಸಾಮಾಜಿಕ ಹೋರಾಟಕ್ಕೆ ಕಾಣಿಕೆಯನ್ನು ನೀಡಬೇಕು” ಎಂದು ನುಡಿದರು.

ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಶಿವಗಂಗಾ ರುಮ್ಮಾ ಅತಿಥಿ ಭಾಷಣ ಮಾಡಿದ್ದು, “ಸಮೂಹ ಮಾಧ್ಯಮಗಳಲ್ಲಿ ತಡೆರಹಿತವಾಗಿ ಬಿತ್ತರಿಸಲಾಗುತ್ತಿರುವ ಅಶ್ಲೀಲ ಸಿನಿಮಾ, ಸಾಹಿತ್ಯಗಳಿಂದಾಗಿ ಇಂದು ಮಹಿಳೆಯರ ಮೇಲಿನ ಅತ್ಯಾಚಾರ-ದೌರ್ಜನ್ಯಗಳು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಗೌರವದ ಬದುಕು ಎಂಬುದು ಮಹಿಳೆಗೆ ಕೇವಲ ವೇದಿಕೆಯ ಭಾಷಣವಾಗುತ್ತಿದೆ. ಭಗತಸಿಂಗ್‌ರಂತಹ ಕ್ರಾಂತಿಕಾರಿಗಳ ವೈಚಾರಿಕತೆಯನ್ನು ಅರಿತುಕೊಂಡು ಉನ್ನತ ನೀತಿ ಸಂಸ್ಕೃತಿಯನ್ನು ಬೆಳೆಸಿಕೊಂಡಾಗ ಮಾತ್ರ ಇದನ್ನು ತೊಲಗಿಸಬಹುದು” ಎಂದು ಹೇಳಿದರು.

ಎಐಡಿಎಸ್‌ಒ ಕಲಬುರಗಿ ಜಿಲ್ಲಾಧ್ಯಕ್ಷ ತುಳಜಾರಾಮ ಎನ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿ, “ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳು ತಮ್ಮ ಕ್ಷುಲ್ಲಕ ರಾಜಕೀಯ ಹಿತಾಸಕ್ತಿಗಾಗಿ ಹಾಗೂ ಬಂಡವಾಳಶಾಹಿಗಳ ಹಿತಕಾಯಲು ಧರ್ಮ, ಜಾತಿ, ಪ್ರಾಂತೀಯ, ಭಾಷಾಂಧ ಮನೋಭಾವನೆಗಳನ್ನು ಕೆರಳಿಸಿ ಗಲಬೆ ಸೃಷ್ಟಿಸುತ್ತಿದ್ದಾರೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್.ಇ.ಪಿ-2020)ಯ ಮೂಲಕ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣ ಹಾಗೂ ಕೋಮುವಾದೀಕರಣ ಮಾಡಲು ತುದಿಗಾಲಿನ ಮೇಲೆ ನಿಂತಿದೆ. ಇದರ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿ-ಯುವಜನ ಹಾಗೂ ಜನಸಾಮಾನ್ಯರ ಧ್ವನಿಯನ್ನು ಪೊಲೀಸರ ಲಾಠಿ ಮತ್ತು ಗುಂಡೇಟಿನಿಂದ ಅಡಗಿಸಲು ಪ್ರಯತ್ನಿಸುತ್ತಿದೆ. ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ಜನಸಾಮಾನ್ಯರನ್ನು ದೇಶದ್ರೋಹಿಗಳೆಂದು ಜೈಲಿಗೆ ಹಾಕುತ್ತಿರುವ ಸರ್ಕಾರದ ಕ್ರಮವನ್ನು ನೋಡಿದರೆ ಜರ್ಮನಿಯ ಮಹಾಕ್ರೂರಿ ಹಿಟ್ಲರ್‌ನ ಫ್ಯಾಸಿಸಂ ನೆನಪಾಗುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ? ಗದಗ | ಪೊಲೀಸ್ ಧ್ವಜ ದಿನಾಚರಣೆ; ನಿವೃತ್ತರ ಸೇವಾ ಸಂಸ್ಮರಣೆ ಮತ್ತು ಗೌರವ ಸಮರ್ಪಣಾ ಸಮಾರಂಭ

ಕಾರ್ಯಕ್ರಮದಲ್ಲಿ ಮಹಿಳಾ ಸಂಘಟನೆ ಎಐಎಂಎಸ್‌ಎಸ್‌ ಕಲಬುರಗಿ ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ, ಸರ್ಕಾರಿ ಪ್ರಥಮ ದರ್ಜೆ(ಸ್ವಾಯತ್ತ) ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲೆ ಸವಿತಾ ತಿವಾರಿ, ಎಐಡಿವೈಒ ಜಿಲ್ಲಾ ಸಮಿತಿ ಸದಸ್ಯ ಪುಟ್ಟರಾಜ, ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಸ್ನೇಹಾ
ಕಟ್ಟೀಮನಿ ಸೇರಿದಂತೆ ಬಹುತೇಕರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X