ಹಲವಾರು ವರ್ಷಗಳಿಂದ ಅಕ್ಷರ ದಾಸೋಹ ನೌಕರರು ಕಡಿಮೆ ಸಂಭಳದಲ್ಲಿ ದುಡಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಈ ಹಿಂದೆ ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದರೂ ಯಾವ ಬೇಡಿಕೆಗಳನ್ನು ಕೂಡ ಸರ್ಕಾರ ಈಡೇರಿಸಿಲ್ಲ. ಹೀಗಾಗಿ, ಸೆ.20ರಂದು ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ತಿಳಿಸಿದ್ದಾರೆ.
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಅಕ್ಷರ ದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆ ಅಡಿಯಲ್ಲಿ ನಡೆಯಬೇಕು, ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡಿಗೆ ನೌಕರರಿಂದ ಎಸ್.ಡಿ.ಎಮ್.ಸಿ.ಗೆ ವರ್ಗಾವಣೆ ಮಾಡಿರುವ ಕ್ರಮ ವಾಪಸ್ಸು ಅಗಬೇಕು. ಅಂದರೆ ಸಾದಿಲ್ವಾರು ಖಾತೆ ಮೊದಲಿನಂತೆ ಮುಂದುವರೆಯಬೇಕು ಎಂದು ಆಗ್ರಹಿಸಿದರು.
“2022 ರಿಂದ 60 ವರ್ಷ ಮುಗಿದ ನೌಕರುದಾರರಿಗೆ ಕೆಲಸದಿಂದ ತೆಗೆದಿರುವ ಎಲ್ಲರಿಗೂ ಒಂದು ಲಕ್ಷದಿಂದ ಎರಡು ಲಕ್ಷದವರೆಗೂ ಇಡಿಗಂಟು ಕೊಡುವ ಯೋಜನೆಗೆ ಹಣಕಾಸು ಇಲಾಖೆಯಿಂದ ಜಾರಿಯಾಗಬೇಕು, ಕೆಲಸದ ಸ್ಥಳದಲ್ಲಿ ಮರಣ ಹೊಂದಿದ ಬಿಸಿ ಊಟ ನೌಕರರಿಗೆ 25 ಲಕ್ಷ ರೂಪಾಯಿ ಪರಿಹಾರ ಕೊಡಬೇಕು. ಅಪಘಾತದಲ್ಲಿ ಮರಣ ಹೊಂದಿದ ಅಡಿಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು” ಎಂದು ಒತ್ತಾಯಿಸಿದರು.

“ಹಲವಾರು ವರ್ಷಗಳಿಂದ ಅಕ್ಷರ ದಾಸೋಹ ನೌಕರರು ಕಡಿಮೆ ಸಂಭಳದಲ್ಲಿ ದುಡಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಈ ಹಿಂದೆ ಅನೇಕ ಹೋರಾಟಗಳನ್ನು ಮಾಡಿಕೊಂಡು ಆಯುಕ್ತರು ಶಾಲಾ ಶಿಕ್ಷಣ ಇಲಾಖೆ, ಮಧ್ಯಾಹ್ನ ಬಿಸಿಯೂಟದ ನಿರ್ದೇಶಕರು ಮುಖಂಡರೊಂದಿಗೆ ನವೆಂಬರ್ 04 2023ರಂದು ಆಯುಕ್ತರ ಕಛೇರಿಯಲ್ಲಿ ಸಭೆ ನಡೆಸಿದ್ದು, ಮತ್ತು ನವೆಂಬರ್ 15, 2023ರಂದು ಶಿಕ್ಷಣ ಸಚಿವರು ನಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಕ್ರಮಕೈಗೊಳ್ಳುವ ಕುರಿತು ಲಿಖಿತವಾಗಿ ಪತ್ರ ಕಳುಹಿಸಿದ್ದರು. ಆದರೆ ಇಲ್ಲಿಯವರೆಗೂ ಇತ್ಯಾರ್ಥವಾಗಿರುವುದಿಲ್ಲ. ನಮ್ಮ ಬೇಡಿಕೆಗಳು ಕೂಡಲೇ ಬಗೆಹರಿಸಲು ಮತ್ತೊಮ್ಮೆ ಸರ್ಕಾರದ ಗಮನಕ್ಕೆ ಮೂಲಕ ತರಬಯಸುತ್ತಿದ್ದೇವೆ” ಎಂದರು.
ಇದನ್ನು ಓದಿದ್ದೀರಾ? ದಾವಣಗೆರೆ | ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪ: ಮುಖ್ಯ ಶಿಕ್ಷಕಿ ಸೇರಿ ಇಬ್ಬರ ಅಮಾನತು
ಆದ್ದರಿಂದ ಅಖಿಲ ಕರ್ನಾಟಕ ಅಕ್ಷರ ದಾಸೋಹ ನೌಕರ ಸಂಘ ಹಾಗೂ ದಲಿತ ಸಂಘರ್ಷ ಸಮಿತಿಯು ಇದೆ ತಿಂಗಳು ಸೆಪ್ಟೆಂಬರ್ 20ರಂದು ಕಲಬುರಗಿ ನಗರದ ಜಗತ್ ವೃತ್ತದಿಂದ ವಿಧಾನಸೌಧ ಮಾರ್ಗವಾಗಿ ಡಿ.ಡಿ.ಪಿ.ಐ. ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗುವುದು. ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು, ಮುಖಂಡರು ಹಾಗೂ ಬಿಸಿಯೂಟ ನೌಕರರುದಾರರು, ಪ್ರಗತಿಪರ ವಿಚಾರವಂತರು ಈ ಪ್ರತಿಭಟನೆ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಸಹಕಾರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮರೆಪ್ಪ ಮೈತ್ರಿ, ಉದಯಕುಮಾರ ಸಾಗರ್, ಮಹಾದೇವಿ ನಿಂಬಾಳ, ಸುನೀತಾ ಎಮ್, ಕುಂಬಾರ್, ಮುಕ್ತಾ ಸಿ. ಚಂದಾ, ಕಲ್ಪನಾ ಎ, ಜ್ಯೋತಿ, ಸುವರ್ಣ, ಅಂಬುಜಾ ಡೋಣಗಾಂವ್ ಇನ್ನಿತರರು ಉಪಸ್ಥಿತರಿದ್ದರು.
