ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಕಲಬುರಗಿ ಜಿಲ್ಲೆಯ ಸಿಂಧನಮಡು ಗ್ರಾಮದಲ್ಲಿ ನಡೆಯುತ್ತಿರುವ ಕಾಮಾಗರಿಯು ಸಂಪೂರ್ಣವಾಗಿ ಕಳಪೆಮಟ್ಟದ್ದಾಗಿರುವುದರಿಂದ ಕೂಡಲೇ ಅದನ್ನು ತಡೆಯಬೇಕು ಎಂದು ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರು ಆಗ್ರಹಿಸಿದರು.
ಜಿಲ್ಲೆಯ ಸೇಡಂ ತಾಲೂಕಿನ ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗ ಇಲಾಖೆ ಸಹಾಯಕ ಕಾರ್ಯ ನಿರ್ವಾಹಾಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಬುಹುಜನ ಸಮಾಜ ಪಾರ್ಟಿ ಅಧ್ಯಕ್ಷ ರೇವಣಸಿದ್ದಪ್ಪ ಎಸ್ ಸಿಂಧೆ ಮಾತನಾಡಿ, “ಸೇಡಂ ತಾಲೂಕಿನ ಸಿಂಧನಮಡು ಗ್ರಾಮದಲ್ಲಿ ಜಲ ಜೀವನ ಯೋಜನೆಯಡಿಯಲ್ಲಿ ಕಾಮಾಗಾರಿಯು ನಡೆಯುತ್ತಿದ್ದು, ಸಂಪೂರ್ಣ ಕಳಪೆಯಿಂದ ಕೂಡಿದೆ. ಎಸ್ಟಿಮೇಟ್ ಪ್ರಕಾರ ಕಾಮಾಗಾರಿ ನಡೆಯುತ್ತಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಾ.9 ರಂದು ‘ಬಹುಜನರ ನಡಿಗೆ-ಪಾರ್ಲಿಮೆಂಟ್ ಕಡೆಗೆ’ ಸಮಾವೇಶ

“ಕಳಪೆ ಕಾಮಗಾರಿಯನ್ನು ಶೀಘ್ರವಾಗಿ ತಡೆಹಿಡಿಯಬೇಕು. ಒಂದು ವೇಳೆ ತಾವು ತಡೆಹಿಡಿಯದಿದ್ದಲ್ಲಿ ತೀವ್ರ ಹೊರಾಟ ಮಾಡುವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಸವಂತ ರೆಡ್ಡಿ, ರಾಜು, ಹಣಮಂತ ಜೆ ಬಿ ಇದ್ದರು.