ಅಂಬೇಡ್ಕರ್ ಜಯಂತಿಗೆ ಧನಸಹಾಯ ಮಾಡಲು ಹಿಂದೇಟು ಹಾಕಿದ ಕಂದಗೂಳ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ ಯುವಕ ಸಂಘ ಹುಳಗೇರಾ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕು ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಅಧ್ಯಕ್ಷ ಅರುಣ ನಂದಿ ಮಾತಾನಾಡಿ, “ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿಗೆ ಧನ ಸಾಹಯ ನೀಡುವಂತೆ ದಲಿತ ಸಮುದಾಯದವರು ಕಂದಗೂಳ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದು, ಸುಮಾರು ತಿಂಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಈವರಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಸಹಾಯ ಧನವನ್ನೂ ನೀಡಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ ಜಿಲ್ಲೆಯ ಪ್ಯಾಕೇಜ್ ಟೆಂಡರ್ ರದ್ದತಿಗೆ ಸಿವಿಲ್ ಗುತ್ತಿಗೆದಾರರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ
ಸತೀಶ್ ಜೀವಣಗಿ, ಚಂದ್ರಕಾಂತ ನಿಣ್ಣಿ, ಶಿವಪ್ಪ ಮುಕರಂಬಾ, ರಮೇಶ ನಂದಿ, ಸಂತೋಷ ಸಿಂಗಿ, ಕಾಶಿನಾಥ ಸತ್ತಗಿ, ಶಿವರಾಯ ಜೀವಣಗಿ, ದಶರಥ ಮಹಾಗಾಂವ್, ವಿಠಲ್ ಮಂಗಾ, ಪ್ರಭಾವತಿ ಜೀವಣಗಿ, ನಿಂಗಮ್ಮ ನಂದಿ, ತಾರಾಬಾಯಿ, ಅನ್ನಪೂರ್ಣ ಸಿಂಗಿ, ಪುಷ್ಪಾವತಿ, ವಿಮಲಬಾಯಿ, ಅರುಣಕುಮಾರ್, ಸುರೇಶ್ ಸೇರಿದಂತೆ ಇತರರು ಇದ್ದರು.