ಕರ್ನಾಟಕ ರಾಜ್ಯ ಬಲಗೈ ಹೊಲೆಯ ಸಂಬಂಧಿತ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿಯಿಂದ ಕಲಬುರಗಿಯ ಐವಾನ್ ಶಾಹಿ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಂಜೆ ಒಳಮೀಸಲಾತಿ ಕುರಿತು ಮಾಹಿತಿ ಒದುಗಿಸುವ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗೆ ಸೇರಿದ 101 ಉಪಜಾತಿಗಳ ಪೈಕಿ ಹೊಲೆಯ ಸಂಬಂಧಿಸಿದ ಉಪಜಾತಿಗೆ ಒಳಮೀಸಲಾತಿ ಕುರಿತು ನಾಯ್ಯಮೂರ್ತಿ ಡಾ.ಹೆಚ್.ಎನ್.ನಾಗಮೋಹನ್ ದಾಸ ಏಕ ಸದಸ್ಯ ವಿಚಾರಣೆ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಕುರಿತು ಜಾಗೃತಿ ಕಾರ್ಯಗಾರ ನಡೆಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ್ ಮಾತನಾಡಿ, ʼಮೇ5 ರಿಂದ ನಡೆಯುತ್ತಿರುವ ಸಮೀಕ್ಷೆಯಲ್ಲಿ ನಮ್ಮ ಮೂಲ ಬಲಗೈಗೆ ಸೇರಿದ ಸುಮಾರು 29 ಜಾತಿಗಳ ಪಟ್ಟಿ ಮಾಡಿದ್ದು, ಆಯಾ ಪ್ರದೇಶಗಳಿಗೆ ಅನುಗುಣವಾಗಿ ಕರೆಯಲ್ಪಡುವ ಮೂಲ ಜಾತಿ, ಉಪ ಜಾತಿ ಕಾಲಂನಲ್ಲಿ ʼಹೊಲೆಯʼ ಎಂದೇ ಗಣತಿಯಲ್ಲಿ ಬರಿಸಬೇಕುʼ ಎಂದು ತಿಳಿಸಿದರು.
ಗಣತಿ ಮೂರು ಹಂತಗಳಲ್ಲಿ ನಡೆಯುತ್ತದೆ.
ಮೊದಲೇ ಹಂತ: ಮೇ 5 ರಿಂದ ಮೇ 17ರ ವರೆಗೆ ಗಣತಿದಾರರ ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಾರೆ.
ಎರಡನೇ ಹಂತ: ಮೇ 19 ರಿಂದ ಮೇ 21ವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮಿಕ್ಷೆ ಕೈಗೊಳ್ಳುವುದು.
ಮೂರನೇ ಹಂತ: ಮೇ 19 ರಿಂದ ಮೇ 23ರವರೆಗೆ ಸ್ವಯಂ ಘೋಷಣೆ ಆನ್‌ಲೈನ್ ಮೂಲಕ ಜನಗಣತಿ ಮಾಡಿಸಬಹುದಾಗಿದೆ ಎಂದು ತಿಳಿಸಿದರು.
ಸಮೀಕ್ಷೆ ಬೇಕಾದ ದಾಖಲೆಗಳು :
ರೇಷನ್ ಕಾರ್ಡ್, ಆಧಾರ್ ಚೀಟಿ, ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ.
ಈ ಸಂದರ್ಭದಲ್ಲಿ ಹೆಚ್ ಶಂಕರ್, ಹಣಮಂತರಾಯ, ದೊಡ್ಡಮನಿ, ಸಿದ್ದಪ್ಪ ಪಿ. ಸುಳ್ಳದ್, ಸುರೇಶ್ ಹಾದಿಮನಿ, ಅಂಬಣ್ಣ ಜಿವಣಗಿ, ಬಿ.ಸಿ.ವಾಲಿ, ಮಹಾದೇವ ದನ್ನಿ, ಶಾಂತಪ್ಪ ಸಂಗಾವಿ ಇದ್ದರು.