ಬಾಬು ಜಗಜೀವನ್ ರಾಂ ಅವರು ರಾಷ್ಟ್ರೀಯ ನಾಯಕರಾಗಿದ್ದು, ಅವರಿಗೆ ಸಿಕ್ಕ ಎಲ್ಲ ಖಾತೆಗಳಲ್ಲಿ
ಅತ್ಯಂತ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರು ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರ ಶಾಸಕ ಬಸವರಾಜ ಮತ್ತಿಮೂಡ ಸ್ಮರಿಸಿದರು.
ಹಸಿರು ಕ್ರಾಂತಿಯ ಹರಿಕಾರ ದೀನ ದಲಿತೋದ್ಧಾರಕ ಮಾಜಿ ಉಪಪ್ರಧಾನಿ ಡಾ ಬಾಬು ಜಗಜೀವನ್ ರಾಂ ಅವರ 117ನೇ ಜಯಂತ್ಯೋತ್ಸವದ ಅಂಗವಾಗಿ ಕಲಬುರಗಿ ನಗರ ಪಾಲಿಕೆ ಬಳಿ ಡಾ ಬಾಬು ಜಗಜೀವನ್ ರಾಂ ಅವರ ಪುತ್ಥಳಿ ಹತ್ತಿರ ನಡೆದ ಬಾಬು ಜಗಜೀವನ್ ರಾಂ ಅವರ “ಜೀವನ ಚರಿತ್ರೆ” ಕವನ ಸಂಕಲನದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
“ಆಹಾರ ಉತ್ಪಾದನೆಯಲ್ಲಿ ಸಮಗ್ರ ಕ್ರಾಂತಿಯನ್ನು ಮಾಡಿ, ಹಸಿರು ಕ್ರಾಂತಿಯ ಹರಿಕಾರರಾಗಿ ಮತ್ತು ದೇಶದ ಉಪ ಪ್ರಧಾನಿಗಳಾಗಿ ಮಾಡಿದ ಕಾರ್ಯವು ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ ಕ್ಷೇತ್ರದ ಹಲವೆಡೆ ರಂಜಾನ್; ಸಾಮೂಹಿಕ ಪ್ರಾರ್ಥನೆಯಲ್ಲಿ ರಕ್ಷಾ ರಾಮಯ್ಯ ಭಾಗಿ
ಮಾದಿಗ ಸಮಾಜದ ಹಿರಿಯ ಮುಖಂಡ ಶಾಮ ನಾಟಕರ, ದಲಿತ ಮಾದಿಗ ಸಮನ್ವಯ
ಸಮಿತಿ ಸಂಸ್ಥಾಪಕ, ರಾಜ್ಯಾಧ್ಯಕ್ಷ ಲಿಂಗರಾಜ ತಾರಫೈಲ್ ಸೇರಿದಂತೆ ಬಹುತೇಕರು ಇದ್ದರು.
