ಕಲಬುರಗಿ ತಾಲೂಕಿನ ಜಂಬಗಾ (ಬಿ) ಗ್ರಾಮದಲ್ಲಿರುವ ಸ್ವಾತಂತ್ರ್ಯ ಯೋಧ ಸಂಗೋಳಿ ರಾಯಣ್ಣ ನಾಮಫಲಕ ಕಟ್ಟಿ ಸ್ಥಾಪಿಸಿದ ಸ್ಥಳದ ಬಗ್ಗೆ ಸರ್ವೆ ಮಾಡುವಂತೆ ಒತ್ತಾಯಿಸಿ ಭೀಮ್ ಆರ್ಮಿ–ಕರ್ನಾಟಕ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರದಲ್ಲಿ, ಜಂಬಗಾ (ಬಿ) ಗ್ರಾಮದಲ್ಲಿ ಒಂದು ತಿಂಗಳ ಹಿಂದೆ ಗ್ರಾಮ ಪಂಚಾಯತಿಯಲ್ಲಿ ಸ್ವಾಂತಂತ್ರ್ಯ ಹೋರಾಟಗಾರ ಸಂಗೋಳಿ ರಾಯಣ್ಣ ನಾಮಫಲಕ ಸ್ಥಾಪಿಸಿಲು ನಿರ್ಣಯಿಸಿದಂತೆ ತಿಂಗಳ ಹಿಂದೆ ಗ್ರಾಮದಲ್ಲಿ ನಾಮಫಲಕ ಸ್ಥಾಪಿಸಲಾಗಿದೆ. ಆದರೆ, ಅದೇ ಗ್ರಾಮದ ಕೆಲವು ಕಿಡಿಗೇಡಿಗಳು ಗ್ರಾಮದಲ್ಲಿ ಉದ್ದೇಶಪೂರ್ವಕವಾಗಿ ಮಾಲೀಕತ್ವದ ವಿವಾದ ಸೃಷ್ಠಿಗಾಗಿ, ಗ್ರಾಮದಲ್ಲಿ ಜಾತಿ ಜಾತಿಗಳ ಮಧ್ಯೆ ಜಗಳ ಸೃಷ್ಟಿಸಿದ್ದಾರೆ. ಹಾಗಾಗಿ ಗ್ರಾಮದಲ್ಲಿ ಪರಿಸ್ಥಿತಿ ಸರಿ ಇಲ್ಲ.
ಕಾರಣ ತಾವುಗಳು ಈ ಮನವಿಯನ್ನು ಪರಿಗಣಿಸಿ ಭೂಮಾಲೀಕತ್ವ ಸದರಿ ಸ್ಥಳವನ್ನು ಸರ್ವೇ ಮಾಡಿಸಿ ಜಮೀನಿನ ಮಾಲೀಕತ್ವದ ಬಗ್ಗೆ ವರದಿ ಸಲ್ಲಿಸಲು ಸೂಕ್ತ ಕ್ರಮಕೈಗೊಳ್ಳಲು ಭೀಮ ಆರ್ಮಿ ಸಂಘಟನೆಯು ಕೇಳಿಕೊಂಡಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಸೂರ್ಯಕಾಂತ ಜಿಡಗಾ, ಅಂಬಾರಾಯ ದಸ್ತಾಪೂರ, ಸೋಮಶೇಖರ ಬಂಗರಗಿ, ಅಂಬರೀಷ್ ಕೆ, ಗುಂಡಪ್ಪ ಮಾಳಗೆ ಸಂಘಟನಾ ಕಾರ್ಯದರ್ಶಿ, ರವಿ ಪೂಜಾರಿ ,ರವಿ ಆರ್.ಕೋರಿ ಉಪಸ್ಥಿತರಿದ್ದರು.