ಮೂಲಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಭೀಮ್ ಆರ್ಮಿ ಕಲಬುರಗಿ ಜಿಲ್ಲಾ ಸಮಿತಿಯಿಂದ ಜೇವರ್ಗಿ ಪುರಸಭೆ ಕಾರ್ಯಾಲಯ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಸಂಚಾಲಕ ಅಬ್ದುಲ್ ಗನಿ ರಾವಣ್ ಮಾತನಾಡಿ, “ಜೇವರ್ಗಿ ಪಟ್ಟಣದ ಬುಗ್ಗಿ ಏರಿಯಾದ ಮಠದ ಭಾವಿಯ ಹತ್ತಿರ ಬಡಾವಣೆಯಲ್ಲಿ ಸಿ ಸಿ ರಸ್ತೆ, ಚರಂಡಿ, ಮಹಿಳೆಯರಿಗೆ ಶೌಚಾಲಯ, ಕುಡಿಯುವ ನೀರಿನ ಪೈಪಲೈನ್, ಬೀದಿ ದೀಪಗಳು ಸೇರಿದಂತೆ ಇತರ ಮೂಲಸೌಲಭ್ಯಗಳು ಇಲ್ಲದಿರುವುದರಿಂದ ಬಡಾವಣೆಯ ನಿವಾಸಿಗಳಿಗೆ ವಾಸಿಸಲು ತುಂಬಾ ತೊಂದರೆಯಾಗುತ್ತಿದೆ.
ಈ ಕುರಿತು ಈಗಾಗಲೇ ಪುರಸಭೆ ಇಲಾಖೆಗೆ ಹಲವಾರು ಬಾರಿ ಮನವಿ ಸಲ್ಲಿಸಿ ಮೌಖಿಕವಾಗಿ ಹೇಳಿದರೂ ಕೂಡ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಆರು ಸಾವಿರ ಪಡಿತರ ಚೀಟಿ ರದ್ದು; ಗೊಂದಲ ಸರಿಪಡಿಸಲು ಕುಂದಾಪುರ ಸಿಪಿಎಂ ಆಗ್ರಹ
“ತಾವಾದರೂ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸದರಿ ಬಡಾವಣೆಗೆ ಮೂಲ ಸೌಲಭ್ಯಗಳನ್ನು ಒದಗಿಸಿ ಬಡಾವಣೆಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯಮನೇಶ ಅಂಕಲಗಿ, ವಿಶ್ವಾರಾಧ್ಯ ಗೋಪಾಲಕರ, ರವಿಕುಮಾರ ಬಿ ಡ್ಯಾನ್ಸರ್, ಮೌಲಾಲಿ, ಮಹ್ಮದ್ ರಫೀಕ್, ಭಾಗೇಶ ಪೂಜಾರಿ, ಕುಶಾಲ ಕೊಂಬಿನ ಇದ್ದರು.