ಅಣ್ಣನ ಪ್ರೀತಿಯ ವಿಚಾರಕ್ಕೆ ತಮ್ಮನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ನಗರದ ನಾಗನಹಳ್ಳಿ ಗ್ರಾಮದಲ್ಲಿ ಈ ಕೊಲೆ ನಡೆದಿದ್ದು, ಕೊಲೆಗೀಡಾದ ಯುವಕನನ್ನು ಸುಮಿತ್ ಮಲ್ಲಾಬಾದ್ (18) ಎಂದು ಗುರುತಿಸಲಾಗಿದೆ. ಕೊಲೆಯಾದವ ವಿದ್ಯಾರ್ಥಿಯಾಗಿದ್ದು, ಮುಂಬೈನಲ್ಲಿ ಅಂತಿಮ ವರ್ಷದ ಎಂ.ಕಾಮ್ ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಕಳೆದ ನಾಲೈದು ದಿನಗಳ ಹಿಂದಷ್ಟೇ ತನ್ನ ತಾಯಿಯೊಂದಿಗೆ ಕಲಬುರಗಿಗೆ ಆಗಮಿಸಿ ನಗರದ ನಾಗನಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿದ್ದನು. ಸುಮಿತ್, ತನ್ನ ಸಹೋದರ ಸಚಿನ್ ಎಂಂಬಾತ ನಾಗನಹಳ್ಳಿ ಗ್ರಾಮದ ಯುವತಿಯ ಜೊತೆ ಸ್ನೇಹ ಹೊಂದಿದ್ದ. ಸುಮಿತ್ ಸಹೋದರನ ಮೇಲಿನ ಕೋಪಕ್ಕೆ ಯುವತಿಯ ಕುಟುಂಬಸ್ಥರು ಹಾಗೂ ಸುಮಿತ್ ನಡುವೆ ಗಲಾಟೆಯಾಗಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ವಿವಾದದ ಬೆನ್ನಲ್ಲೇ ಹೈಕೋರ್ಟ್ ಕಲಾಪದ ಪ್ರಸಾರಕ್ಕೆ ತಡೆ: ನೈಜ ಹೋರಾಟಗಾರರ ವೇದಿಕೆ ವಿರೋಧ
ಇಬ್ಬರ ನಡುವಿನ ಗಲಾಟೆಯಲ್ಲಿ ಸುಮಿತ್ ತಾಯಿಯ ಮೇಲೆ ನಾಲೈದು ಜನರ ಗುಂಪು ಹಲ್ಲೆ ಮಾಡಿದ್ದಾರೆ. ತಾಯಿಯನ್ನು ದೂರ ಇರುವಂತೆ ಹೇಳಿದ ತಕ್ಷಣ ಸುಮಿತ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
