68ನೇ ಧಮ್ಮ ಚಕ್ರ ಪರಿವರ್ತನಾ ದಿನದ ಅಂಗವಾಗಿ ಕಲಬುರಗಿಯಲ್ಲಿ ಭಾರತೀಯ ಬೌದ್ಧ ಮಹಾಸಭಾವು ಧಮ್ಮ ದೀಕ್ಷಾ ಸಮಾರಂಭವನ್ನು ಅಕ್ಟೋಬರ್ 14ರಂದು ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೌದ್ಧ ಉಪಸಕ/ಕಿಯರು ಭಾಗಿಯಾಗಬೇಕು ಎಂದು ಮಹಾಸಭಾದ ತಾಲೂಕು ಅಧ್ಯಕ್ಷ ಮಲ್ಲಣ್ಣ ಕೊಡಚಿ ಆಹ್ವಾನಿಸಿದ್ದಾರೆ.
ಜೇವರ್ಗಿಯಲ್ಲಿ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು. ಅ.14ರ ಸಂಜೆ 4:30ಕ್ಕೆ ಕಲಬುರಗಿಯ ದೀಕ್ಷಾಭೂಮಿ (ಎಂಎಸ್‌ಕೆ ಮಿಲ್) ಮೈದಾನದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಿಳಿಸಿದರು.
“ಅಸಮಾನತೆಯಿಂದ ತುಂಬಿದ ಹಿಂದೂ ಧರ್ಮವನ್ನು ಬಿಟ್ಟು ಈ ದೇಶದ ಮೂಲ ಧರ್ಮವಾದ ಬೌದ್ಧ ಧರ್ಮದ ದೀಕ್ಷೆ ಪಡೆದು ಪ್ರಬುದ್ಧರಾಗೋಣ. ಸಮಾರಂಭಕ್ಕೆ ತಾಲೂಕಿನ ಸಮಸ್ತ ಬೌದ್ದ ಉಪಾಸಕರು, ಉಪಾಸಕಿಯರು ತಮ್ಮ ಕುಟುಂಬದೊಡನೆ ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಿಜಲಿಂಗ ದೊಡ್ಡಮನಿ, ರಾಜಶೇಖರ್ ಶಿಲ್ಪಿ, ಶರಣು ಎಮ್ ಬಡಿಗೇರ್, ಖಜಾಂಚಿ ಸಿದ್ದು ಮೈಂದರಗಿ, ಶ್ರೀಮಂತ ಕೀಲೆಧಾರ, ರಾಹುಲ್ ಪಂಚಶೀಲ, ಶ್ರೀಮಂತ ಹರನೂರ ಉಪಸ್ಥಿತರಿದ್ದರು.