ಸೇಡಂ ತಾಲೂಕಿನ ಕಲಕಂಭ ಗ್ರಾಮದ ಬಳಿ ಇದ್ದ ಸೋಲಾರ್ ಕಂಪನಿಯ ಸುಮಾರು 1.20 ಲಕ್ಷ ಮೌಲ್ಯದ 152 ಎಂಸಿ ಕನೆಕ್ಟರ್ ವೈರ್ ಸೇರಿದಂತೆ ವಿವಿಧ ವಿದ್ಯುತ್ ಸಾಮಗ್ರಿಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಲಬುರಗಿ ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ತೆಲಂಗಾಣ ರಾಜ್ಯದ ವನಪರ್ತಿ ಜಿಲ್ಲೆಯ ಆತ್ಮಕುರಿನ ಚಾಲಕ ಯರಕಲ್ ರಮೇಶ್ (31) ಹಾಗೂ ಕುಲಿಕಾರ ಪೋಲಾ ನಾಗೇಶ್ (35) ಎಂದು ಗುರುತಿಸಲಾಗಿದೆ.
ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಕೇಬಲ್ ವೈರ್ ಕಳ್ಳತನ ಮಾಡಿ ಮಾರಾಟ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಒಟ್ಟು 80,000 ರೂ ನಗದು, 120 ಪಿಟ್ ಕೇಬಲ್ ವೈರ್ ಹಾಗೂ ಕ್ರತ್ಯಕ್ಕೆ ಉಪಯೋಗಿಸಿದ ಕಟಿಂಗ್ ಪ್ಲೇಯರ್, ಒಂದು ಕಬ್ಬಿಣದ ಸುತ್ತಿಗೆಯನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಕಲಬುರಗಿ | ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಕೊಲೆ
ಆರೋಪಿತರು ತೆಲಂಗಾಣದ ಆತ್ಮಕುರಿ ಗ್ರಾಮದಲ್ಲಿರುವ ಕುರಿತು ಬಂದ ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಪತ್ತೆಗೆ ಹೊರಟ ಪೊಲೀಸರು ಗುರುವಾರ ಬೆಳಗ್ಗೆ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.