ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ, ಪ್ರಗತಿ ಸಾಧಿಸಲು ಹಾಗೂ ರಸಪ್ರಶ್ನೆ ಸ್ಪರ್ಧೆ ಸಾಧನೆಗೆ ಮುಖ್ಯವಾಗಿ ಸತತ ಅಧ್ಯಯನ ಹಾಗೂ ಕಲಿಕೆಯಲ್ಲಿ ಶ್ರದ್ಧೆಯು ಅಗತ್ಯವಾಗಿದೆ ಎಂದು ವಿ ಕೆ ಸಲಗರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಡಾ. ಅಜೀಜ್ ಹಿತ್ತಲ ಶಿರೂರು ಅಭಿಪ್ರಾಯವಟ್ಟರು.
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಸಂಬುದ್ಧ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಕಾಲೇಜಿನಲ್ಲಿ ತಾಲೂಕು ಮಟ್ಟದ ಪಿಯು ದ್ವಿತೀಯ ವರ್ಷದ ವಿದ್ಯಾರ್ಥಿಗಳ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಪಿಯು ಶಿಕ್ಷಣ ಹಂತವು ವಿದ್ಯಾರ್ಥಿಗಳ ಬದುಕಿನ ದಿಕ್ಸೂಚಿಯಾಗಿದೆ. ವಿಶೇಷವಾಗಿ ವೃತ್ತಿಪರ ಕೋರ್ಸ್‌ಗಳ ಅವಕಾಶ ಪಡೆಯಲು ಹಾಗೂ ಸರ್ಕಾರಿ ಹುದ್ದೆಗಳನ್ನು ಪಡೆದುಕೊಳ್ಳಲು ಕಠಿಣ ಪರಿಶ್ರಮ ಅವಶ್ಯಕವಾಗಿದೆ. ಮೊಬೈಲ್, ವಾಟ್ಸ್ಯಾಪ್, ಹರಟೆಯಲ್ಲಿ ಕಾಲ್ ಕಳೆಯುತ್ತ, ನಿರ್ಲಕ್ಷ್ಯ ತಾಳಿದರೆ ಮುಂದಿನ ಜೀವನ ಕಟ್ಟಿಕೊಳ್ಳಲು ಕಷ್ಟವಾಗಲಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ಪಿಯು ದ್ವಿತೀಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಫಲಿತಾಂಶ ಉತ್ತಮಗೊಳಿಸಲು ಈ ರಸಪ್ರಶ್ನೆ ಪೂರಕವಾಗಲಿದೆ. ವಿದ್ಯಾರ್ಥಿಗಳು ತಮ್ಮ ಹೊಣೆಗಾರಿಕೆ ಅರ್ಥ ಮಾಡಿಕೊಂಡಾಗ ಮಾತ್ರ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ” ಎಂದರು.
ಪ್ರಾಂಶುಪಾಲ ಸಂಜಯ ಪಾಟೀಲ ಅಧ್ಯಕ್ಷತೆ ವಹಿಸಿಕೊಂಡಿದರು. ಪಿಯು ಕಾಲೇಜಿನ ಪ್ರಾಚಾರ್ಯರಾದ ನಾಗಣ್ಣ ಸಲಗರೆ, ರಮೇಶ ಕುಲಕರ್ಣಿ, ಶಿವಕುಮಾರ ದಾನಾಯಿ, ಭೀಮಾಶಂಕರ ಉಮದಿ, ಶಿವಲಿಂಗಪ್ಪ ಸುತಾರ, ಉಪನ್ಯಾಸಕರಾದ ಸೈಫಾನ್ ತಾಂಬೋಳೆ, ಶರಣಮ್ಮ ಜಿ ಕವಿತಾ, ಶಿವರಾಜ ಚೌಲ, ಸಿದ್ಧರಾಮ ಸನಗುಂದಿ, ಸಂತೋಷ ವೇದವಾಠಕ, ರಾಜಶೇಖರ ಪಾಟೀಲ, ಆಕಾಶ ಕಾಂಬಳೆ, ಎಲ್ ಎಸ್ ಬೀದಿ, ಶರಣಬಸಪ್ಪ ಇಟಗಿ, ಲಕ್ಷ್ಮಣ ಕೋಳಿ, ಅಂಬಾರಾಯ ಶಿಲ್ಡ, ವಿಠಲ ಪೋದಾರ, ಸತೀಶ ಮುಲಗೆ, ಮೃತ್ಯುಂಜಯ ಪಾಟೀಲ, ಮಲ್ಲಿನಾಥ ಪಾಟೀಲ, ಪ್ರಮೋದ ಚಿಂಚನಸೂರು, ನಿಜಾಮೊದ್ದಿನ್ ಇದ್ದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ| ಬಾಬಾಸಾಹೇಬ್ ಅಂಬೇಡ್ಕರ್ ದಾರಿಯಲ್ಲಿ ನಾವೆಲ್ಲರೂ ನಡೆಯೊಣ: ರಮೇಶ ಮಾಡಿಯಾಳಕರ
ವಿಜ್ಞಾನ ವಿಭಾಗದಲ್ಲಿ ಆಳಂದ ವಿವೇಕ ವರ್ದನಿ ಪಿಯು ಕಾಲೇಜು(ಪ್ರಥಮ), ಆಳಂದ ಆರ್ ಎಂ ಎಲ್ ಪಿಯು ಕಾಲೇಜು(ದ್ವಿತೀಯ), ವಿವೇಕ ವರ್ದನಿ ಪಿಯು ಕಾಲೇಜು(ತೃತೀಯ) ಸ್ಥಾನ ಪಡೆದರು. ಕಲಾವಿಭಾಗದಲ್ಲಿ ಆಳಂದದ ಆರ್ ಎಂ ಎಲ್ ಕಾಲೇಜು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಹಾಗೂ ಸರ್ಕಾರಿ ಸರಸಂಬಾ ಪಿಯು ಕಾಲೇಜು ತೃತೀಯ ಸ್ಥಾನ ಪಡೆದರು.
ತಾಲೂಕಿನ ಕಮಲಾನಗರ, ಯಳಸಂಗಿ, ಮಾದನ ಹಿಪ್ಪರಗಿ, ಲಾಡ ಚಿಂಚೋಳಿ ಆಳಂದ ಪಟ್ಟಣದ ಒಟ್ಟು 33ಕಾಲೇಜು
ವಿದ್ಯಾರ್ಥಿಗಳ ತಂಡಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಹಾಗೂ ಬಹುಮಾನ ವಿತರಿಸಲಾಯಿತು.