ಕಲಬುರಗಿ | ಪಿಎಸ್‌ಐ ಪರಶುರಾಮ ಪ್ರಕರಣ: ತಪ್ಪಿತಸ್ಥರನ್ನು ಬಂಧಿಸಿ, ಆಸ್ತಿ ಮುಟ್ಟುಗೋಲು ಹಾಕಲು ದಲಿತ ಸೇನೆ ಆಗ್ರಹ

Date:

Advertisements

ಯಾದಗಿರ ಜಿಲ್ಲೆಯ ಪಿ.ಎಸ್.ಐ ಪರಶುರಾಮ ಅವರ ಸಾವಿಗೆ ಕಾರಣರಾದವರನ್ನು ಬಂಧಿಸಿ ಆಸ್ತಿ ಮುಟ್ಟುಗೋಲು ಹಾಕುವಂತೆ ಆಗ್ರಹಿಸಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ದಲಿತ ಸೇನೆಯ ಮುಖಂಡರು ಪ್ರತಿಭಟನೆ ನಡೆಸಿದರು.

ಪಿ.ಎಸ್.ಐ ಪರಶುರಾಮ ರವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಹಾಗಯ ಆಳಂದ ತಾಲೂಕಿನಲ್ಲಿರುವ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಯನ್ನು ಅವಮಾನಿಸಿದ ಕುಲಪತಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಇದೇ ವೇಳೆ ಒತ್ತಾಯಿಸಿದ್ದಾರೆ.

ಬಳಿಕ ದಲಿತ ಸೇನೆಯ ಮುಖಂಡರು ತಹಶೀಲ್ದಾರ್ ಅವರ ಮುಖಾಂತರ ರಾಜ್ಯಪಾಲ‌ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

Advertisements

ಮನವಿ ಪತ್ರ ಸಲ್ಲಿಸಿದ ಬಳಿಕ ಅಧ್ಯಕ್ಷ ಧರ್ಮಾ ಜಿ. ಬಂಗರಗಿ ಮಾತನಾಡಿ, “ಕರ್ನಾಟಕದಲ್ಲಿ 1.4 ಕೋಟಿ ದಲಿತರು ಇದ್ದರೂ ಕೂಡಾ ದಲಿತರರಿಗೆ ರಕ್ಷಣೆ ಇಲ್ಲದಂತಾಗಿದೆ. ದಲಿತರನ್ನು ತಮಗೆ ಬೇಕಾದ ಹಾಗೆ ರಾಜಕಾರಣಿಗಳು ಬಳಸಿಕೊಳ್ಳುತ್ತಿದ್ದಾರೆ‌. ದಲಿತರ ಯೋಜನೆಗಳು ಹಾಗೂ ದಲಿತರ ಅನುದಾನ ದುರ್ಬಳಕೆ ಮಾಡಿಕೊಂಡು ದಲಿತರ ದಮನ ಮಾಡುವ ಕುತಂತ್ರ ನಡೆಯುತ್ತಿದೆ” ಎಂದು ದೂರಿದರು‌.

ಪಿ.ಎಸ್.ಐ ಪರಶುರಾಮ ಅವರನ್ನು ಮಾನಸಿಕ ಹಿಂಸೆ ನೀಡಿ ವರ್ಗಾವಣೆಗಾಗಿ ಅಲ್ಲಿನ ಶಾಸಕ ಮತ್ತು ಅವನ ಮಗನ ಹಿಂಸೆ ತಾಳಲಾರದೆ ಮಾನಸಿಕ ಒತ್ತಡಕ್ಕೆ ಸಿಲುಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದು ಅವರ ಸಾವಿಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಅವರ ಆಸ್ತಿ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದರು.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಕುಲಪತಿಯವರು ಬೀಳ್ಕೊಡುಗೆ ಸಮಾರಂಭದಲ್ಲಿ ದಲಿತ ವಿದ್ಯಾರ್ಥಿಯಾದ ನಂದಪ್ಪಾ ಅವರನ್ನು ದ್ವಾರದಲ್ಲಿಯೇ ತಡೆದು ಜಾತಿ ನಿಂದನೆ ಮಾಡಿರುವುದು ಖಂಡನೀಯ. ಕುಲಪತಿ, ಪ್ರೊಫೆಸರ್ ಮೇಲೆ ಕೇಸು ದಾಖಲಾಗಿದ್ದರೂ ಕೂಡ ಅವರನ್ನು ಬಂಧಿಸಿಲ್ಲ ಎಂದ ಅವರು, ವಿಶ್ವ ವಿದ್ಯಾಲಯದಲ್ಲಿ ಆಗುತ್ತಿರುವ ಅನಾಹುತಗಳನ್ನು ತಡೆಗಟ್ಟುವಂತೆ ಆಗ್ರಹಿಸಿದರು.

ಎಲ್ಲ ಬೇಡಿಕೆಗಳನ್ನು ಈಡೇರಿಸಲು ದಲಿತ ಸೇನೆ ರಾಮ ವಿಲಾಸ ಸಂಘಟನೆ ತಾಲೂಕು ಸಮಿತಿಯ ವತಿಯಿಂದ ನೂರಾರು ಕಾರ್ಯಕರ್ತರೊಂದಿಗೆ ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಭೀಮಾಶಂಕರ ತಳಕೇರಿ, ಶರಣು ಕವಲಗಾ, ದಿಲೀಪ್ ಮಂಟಗಿ, ರೇವಣಸಿದ್ಧ ಮಂಡ್ಲೆ, ಅಶೋಕ್ ಮೋಘಾ, ಮಲ್ಲಿನಾಥ್ ಚಿಂಚೋಳಿ, ಲಕ್ಷ್ಮಣ ನಿಂಬಾಳಕರ, ಮಂಜು ಸಿಂಗೆ, ಲಕ್ಷ್ಮಣ ಸಂಗೋಳಗಿ, ಸಂದೀಪ್ ಆಯಾ ಜಂಗಲ್, ಶಾಂತಪ್ಪಾ ಜಿಡಾಗ, ಶಶಿಕಾಂತ್ ಮುನ್ನೊಳ್ಳಿ, ಕಾರ್ತಿಕ್ ಕಟ್ಟಿಮನಿ, ಕೃಷ್ಣಪ್ಪ ರಂಜುಣಗಿ, ಬಾಬುರಾವ ಅರುಣೋದಯ, ಮಾದೇವ ಕಾಂಬಳೆ ಇನ್ನಿತರರು ಉಪಸ್ಥಿತರಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X