ಹೊರಗುತ್ತಿಗೆ ನೌಕರರನ್ನು ಏಕಾಏಕಿ ಗೌಪ್ಯವಾಗಿ ಕೆಲಸದಿಂದ ಕೈ ಬಿಟ್ಟಿದ್ದು ಹಾಗೂ ಹೊರಗುತ್ತಿಗೆ ನೌಕಕರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು, ಮುಂಬಡ್ತಿ, ಸೇವಾ ಹಿರಿತನ & ವೇತನದಲ್ಲಿ ತಾರತಮ್ಯ ಮಾಡಿರುವುದನ್ನು ವಿರೋಧಿಸಿ ಮಾ.17ರಿಂದ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ದಸಂಸ ಕರೆ ನೀಡಿದೆ.
ಇದನ್ನೂ ಓದಿ: ಕಲಬುರಗಿ | ಮನರೇಗಾ ಕಾರ್ಮಿಕರಿಗೆ ಕೆಲಸ ನೀಡಲು ಆಗ್ರಹಿಸಿ ರೈತ ಸಂಘ ಧರಣಿ
ದಲಿತ ಸಂಘರ್ಷ ಸಮಿತಿ (ಗುರುಪ್ರಸಾರ್ ಕೆರಗೊಡ ಬಣ), ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ (ಮಾವಳ್ಳಿ ಶಂಕರ್ ಬಣ) ತಾಲೂಕು ಸಮಿತಿ ಜೇವರ್ಗಿ ವತಿಯಿಂದ ಜಂಟಿ ಸಂಘಟನೆಗಳು ಈ ಮೂಲಕ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿದ್ರಾಮ ಕಟ್ಟಿ, ಶಿವಕುಮಾರ್ ಹೆಗಡೆ, ಸಂಗಣ್ಣ ಹೊಸಮನಿ, ಮಹೇಶ್ ಕ್ಷತ್ರಿ, ಶ್ರೀಹರಿ ಕರಕಳ್ಳಿ, ಸಿದ್ದು ಕೆರೂರ್, ಶರಣಬಸಪ್ಪ ಲಖಣಾಪೂರ, ಜೈ ಭೀಮ ನರಬೋಳ ಇನ್ನಿತರರು ಉಪಸ್ಥಿತರಿದ್ದರು.
