ಒಳ ಮೀಸಲಾತಿ ವರ್ಗೀಕರಣ ಸಮೀಕ್ಷೆಯ ಒಂದು ಪ್ರತಿಯನ್ನು ಎಲ್ಲ ಕುಟುಂಬಗಳಿಗೆ ನೀಡಬೇಕೆಂದು ದಲಿತ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ವತಿಯಿಂದ ತಹಸೀಲ್ದಾರರು ಜೇವರ್ಗಿ ರವರ ಮುಖಾಂತರ ಕಲಬುರಗಿ ಜಿಲ್ಲಾಧಿಕಾರಿ ಇವರಿಗೆ ಮನವಿ ಸಲ್ಲಿಸಿದರು
‘ಪರಿಶಿಷ್ಟ ಜಾತಿಗಳೆಂದು ಗುರುತಿಸಿರುವ 101ಜಾತಿಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅವರವರ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟರಲ್ಲಿಯೇ ಒಳ ಮೀಸಲಾತಿ ಸಮೀಕ್ಷೆ ನಡೆಸಿ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಲು ರಾಜ್ಯ ಸರ್ಕಾರದ ನಿರ್ಧಾರಕ್ಕೆ ದಸಂಸ ಸ್ವಾಗತಿಸುತ್ತದೆ ಎಂದರು.
‘ಈ ಸಮೀಕ್ಷೆಯಲ್ಲಿ ಪಾರದರ್ಶಕವಾಗಿ ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿಗಳ ಕುಟುಂಬಕ್ಕೆ ಗಣತಿ ನೋಂದಣಿಯ ಒಂದು ಪ್ರತಿ ಆ ಕುಟುಂಬಕ್ಕೆ ನೀಡಬೇಕು. ಯಾಕೆಂದರೆ ಕೆಲ ಗಣತಿದಾರರು ತಮ್ಮ ಮೊಬೈಲ್‌ನಲ್ಲಿ ಟೈಪ್ ಮಾಡಿಕೊಳ್ಳುವಾಗ ಆ ಕುಟುಂಬದ ಜಾತಿ – ಹೇಳಿದ್ದು ಬಿಟ್ಟು, ಇನ್ನೊಂದು ಜಾತಿಯ ಹೆಸರು ಸರ್ಪಡೆ ಮಾಡಿಕೊಳ್ಳುವ ಅನುಮಾನ ಇರುತ್ತದೆ’ ಎಂದರು.
‘ಈ ವಿಷಯವನ್ನು ಅತಿಸೂಕ್ಷ್ಮ ಎಂದು ಪರಿಗಣಿಸಿ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು’ ಆಗ್ರಹಿಸಿದರು.
‘ಜೇವರ್ಗಿ ಹಾಗೂ ಯಡಾಮಿ ತಾಲೂಕಿನ ಕೆಲ ಪರಿಶಿಷ್ಟ ಜಾತಿ ಕುಟುಂಬಗಳ ರೇಶನ್ ಕಾರ್ಡ್ ಮಾಡುವ ಸಂದರ್ಭದಲ್ಲಿ ಜೋಡಣೆ ಮಾಡುವಾಗ ಪರಿಶಿಷ್ಟ ಪಂಗಡ (ಎಸ್.ಟಿ) ಎಂದು ತೋರಿಸುತ್ತಿರುವದರಿಂದ ಪರಿಶಿಷ್ಟ ಜಾತಿಯ ಕುಟುಂಬಗಳು ಈ ಒಳ ಮೀಸಲಾತಿ ಸಮೀಕ್ಷೆಯಿಂದ ದೂರ ಉಳಿಯುವಂತಾಗುತ್ತದೆ. ಈ ಲೋಪ ಸರಿಪಡಿಸಬೇಕು’ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ ಜೇವರ್ಗಿ ತಾಲೂಕು ಸಂಚಾಲಕ ಸಿದ್ರಾಮ ಕಟ್ಟಿ, ಸಂಚಾಲಕರಾದ ಶಿವಕುಮಾರ ಹೆಗಡೆ, ಸಂಗಣ್ಣ ಹೊಸಮನಿ, ಮಹೇಶ ಕ್ಷತ್ರಿ, ಶ್ರೀಹರಿ ಕರಕಳ್ಳಿ, ಸಿದ್ದು ಕೆರೂರ, ಶರಣಬಸಪ್ಪ ಲಖಣಾಪೂರ, ಸಂ.ಸಂಚಾಲಕ ಜೈಭೀಮ ನರಿಬೋಳ, ರೇವಣಸಿದ್ದ ಬಿರಾಳ ಮತ್ತಿತರರು ಇದ್ದರು.