ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಯುವ ಗುತ್ತಿಗೆದಾರ ಸಚಿನ್ ಪಾಂಚಾಳರವರ ಆತ್ಮಹತ್ಯೆ ಪ್ರಕರಣದಲ್ಲಿ ವಿನಾಕಾರಣ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ತಂದು ಅವರ ರಾಜಿನಾಮೆಗೆ ಒತ್ತಾಯಿಸಿ, ಮನೆಗೆ ಮುತ್ತಿಗೆ ಹಾಕಿರುವ ವಿಪಕ್ಷಗಳ ನಡೆ ಖಂಡಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಜೇವರ್ಗಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ʼಕಲ್ಯಾಣ ಕರ್ನಾಟಕದ ಸಮಗ್ರ ಏಳಿಗೆಯನ್ನು ಹಿಸಲಾರದೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಡವಿದ್ದು ಇದೇ ಬಿಜೆಪಿಗರು. ಅಲ್ಲದೆ ಗೃಹಮಂತ್ರಿ ಅಮಿತ್ ಶಾ, ರಾಜ್ಯ ಸಭೆಯ ಕಲಾಪದಲ್ಲಿ ಮಾತನಾಡುವಾಗ ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದನ್ನು ಖಂಡಿಸಿ ನಡೆಸಿದ ಜೇವರ್ಗಿ ಬಂದ್ ಕೂಡ ಯಶಸ್ವಿಯಾಗಿದೆ. ಬಿಜೆಪಿಗರು ಸಾಲು ಸಾಲು ಹಗರಣ ಮಾಡಿ ಕೈಯಲ್ಲಿ ಪ್ಲೇಟ್ ಹಿಡಿದುಕೊಂಡು ಪರಪ್ಪನ ಅಗ್ರಹಾರದಲ್ಲಿ ಹಾಕುವ ಅನ್ನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದೀರಿ. ಖರ್ಗೆ ಅವರದ್ದು ಏನಾದರೂ ಹಗರಣಗಳಿವೆಯೇ ತೋರಿಸಿ. ಯಾವ ಕಾರಣಕ್ಕಾಗಿ ರಾಜಿನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಜಿಲ್ಲಾ ಉಸ್ತವಾರಿ ಸಚಿವರ ಮನೆಗೆ ಮುತ್ತಿಗೆ ಹಾಕಿ ಅವರ ಘನತೆಗೆ ದಕ್ಕೆ ತರುವ ಹುನ್ನಾರ ನಡೆಸಲಾಗಿದೆ. ಆ ಪುಂಡರ ಗುಂಪಿನವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಇಲ್ಲವೆ ರಾಜ್ಯದ ದಲಿತ ಸಮುದಾಯದ ಬಹಿರಂಗ ಕ್ಷೇಮೆಯಾಚಿಸಬೇಕೆಂದು ರಾಜ್ಯ ಪಾಲರನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಚಂದ್ರಶೇಖರ್ ಹರನಾಳ್. ಶಾಂತಪ್ಪ ಕೂಡಲಗಿ. ಸುಭಾಷ್ ಚನ್ನೂರ್. ಅಯ್ಯಾಳಪ್ಪ ಗಂಗಾಕರ್. ಶಾಂತಪ್ಪ ಯಲಗೋಡ. ಬೆನ್ನಪ್ಪ ಕೊಂಬಿನ. ಚೆನ್ನಪ್ಪ ಮಂದೇವಾಲ. ಕರೆಪ್ಪ ಹಿಪ್ಪರಗಿ ಸೇರಿದಂತೆ ಇತರರು ಇದ್ದರು.
