ಸೇಡಂ ಪಟ್ಟಣದ ವಾಸವದತ್ತಾ ಸಿಮೆಂಟ್ ಕಂಪನಿ ಬಳಿಯ ರೈಲ್ವೆ ಹಳಿಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಜಿಲ್ಲೆಯ ಜನಪ್ರತಿನಿಧಿಗಳು ರೈಲು ಹಳಿ ಸ್ಥಳಾಂತರಿಸಲು ಮುಂದಾಗಬೇಕು ನ್ಯಾಷನಲ್ ಹ್ಯೂಮನ್ ರೈಟ್ಸ್ ಸೋಶಿಯಲ್ ಕೌನ್ಸಿಲ್ ಸಂಘದ ರಾಜ್ಯ ಉಪಾಧ್ಯಕ್ಷ ಸಾಜೀದ್ ಅಹ್ಮದ್ ಖಾನ್ ಆಗ್ರಹಿಸಿದ್ದಾರೆ.
ʼರೈಲು ಹಳ್ಳಿ ಸಂಚಾರಿಸುವುದು ಕನಿಷ್ಠ 30 ನಿಮಿಷ ಹಿಡಿಯುತ್ತಿದ್ದು, ವೃದ್ಧರಿಗೆ, ಮಹಿಳೆಯರಿಗೆ ತುಂಬಾ ಸಂಕಷ್ಟವಾಗುತ್ತಿದೆ. ಇತ್ತೀಚೆಗೆ ಸೇಡಂ ನಿವಾಸಿ ಮುಕ್ತಾರ ಪಾಷಾ ಎಂಬುವವರು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ತುರ್ತು ಚಿಕಿತ್ಸೆಗಾಗಿ ಕಲಬುರ್ಗಿಗೆ ರವಾನಿಸುವಾಗ ವಾಸವದತ್ತಾ ಸಿಮೆಂಟ್ ಕಂಪನಿಯ ಬಳಿಯ ರೈಲು ಹಳಿಯಲ್ಲಿ ಗೂಡ್ಸ್ ರೈಲು ಸಂಚಾರಕ್ಕೆ ಅಡ್ಡಿಯಾದ ಕಾರಣಕ್ಕೆ ಮೃತಪಟ್ಟಿದ್ದಾರೆ. ಇಂತಹ ಅನೇಕ ಘಟನೆಗಳು ನಡೆಯುತ್ತಿವೆ ಎಂದರು.
ʼಪಟ್ಟಣದಲ್ಲಿ ವಾಸವದತ್ಯಾ ಸಿಮೆಂಟ್, ರಾಜಶ್ರೀ (ಅಲ್ಟ್ರಾಟೆಕ್ ಸಿಮೆಂಟ್) ಹಾಗೂ ಶ್ರೀ ಸಿಮೆಂಟ್ ಕಂಪನಿ ಸೇರಿದಂತೆ ತಾಲ್ಲೂಕಿನಲ್ಲಿ ಆರೇಳು ಸಿಮೆಂಟ್ ಕಂಪನಿಗಳಿಂದ ನಿತ್ಯ ವಿಷಪೂರಿತ ರಾಸಾಯನಿಕ ಧೂಳಿನಿಂದ ಸ್ಥಳೀಯರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕೂಡಲೇ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕುʼ ಎಂದು ಆಗ್ರಹಿಸಿದರು.
ವರದಿ: ಸುನೀಲ್ ರಾಣಿವಾಲ್