ರಾಜ್ಯದ ಬೆಳೆ ಸಮಿಕ್ಷೆದಾರರಿಗೆ ಸೇವಾ ಭದ್ರತೆ ಹಾಗೂ ಜೀವ ಮೀಮೆ ಒದಗಿಸಿ ಖಾಯಂಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಬೆಳೆ ಸಮಿಕ್ಷೆದಾರರ ಸೇಡಂ ತಾಲ್ಲೂಕು ಘಟಕದ ಪದಾಧಿಕಾರಿಗಳು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಸಂಸ್ಥಾಪಕ ಪಿ.ರಾಜು ಡಿಪರೇಂಟ್ ಮಾತನಾಡಿ, ʼಸುಮಾರು 9-10 ವರ್ಷಗಳಿಂದ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಬೆಳೆ ಸಮಿಕ್ಷೆ ನಡೆಸುತ್ತಿದ್ದಾರೆ. ಆದರೆ ಗಣತಿದಾರರಿಗೆ ಸೇವೆ ಸಲ್ಲಿಸುವ ವೇಳೆ ಹಾವು, ಚೇಳು ಸೇರಿ ಕಾಡು ಪ್ರಾಣಿಗಳ ಭಯ ಕಾಡುತ್ತದೆ. ಹೀಗಾಗಿ ಬೆಳೆ ಸಮೀಕ್ಷೆದಾರರಿಗೆ ಜೀವ ಭದ್ರತೆ ಒದಗಿಸಬೇಕುʼ ಎಂದು ಆಗ್ರಹಿಸಿದರು.
ʼರಾಜ್ಯದಲ್ಲಿ ಸುಮಾರು 25 ರಿಂದ 30 ಸಾವಿರ ಬೆಳೆ ಸಮೀಕ್ಷೆದಾರರು ಇದ್ದಾರೆ. ಈಗಾಗಲೇ ಹೈಕೋರ್ಟ್ ಆದೇಶದಂತೆ 10 ವರ್ಷ ಪೂರೈಸಿದ ದಿನಗೂಲಿ ಕೆಲಸಗಾರರಿಗೆ ಕಾಯಂ ಮಾಡಬೇಕು ಎಂದು ಅನುಮತಿ ನೀಡಿದೆ. ನಮ್ಮ ಸಂಘದ ಪರವಾಗಿ ಸದನದಲ್ಲಿ ಧ್ವನಿ ಎತ್ತಿ ನಮಗೆ ನ್ಯಾಯ ಒದಸಿಬೇಕುʼ ಎಂದು ಮನವಿ ಮಾಡಿದರು.
ʼಬೆಳೆ ಸಮೀಕ್ಷೆದಾರರಿಗೆ ಪ್ರತಿದಿನ ಕೆಲಸ ನೀಡಬೇಕು, ಜೀವ ವಿಮೆ, ಸೇವಾ ಭದ್ರತೆ ಒದಗಿಸಬೇಕು, ಮಳೆಗಾಲದಲ್ಲಿ ರಕ್ಷಣೆಗೆ ರೇನ್ ಕೋಟ್ ನೀಡಬೇಕು ಹಾಗೂ ಗುರುತಿನ ಚೀಟಿ, ಶೂ ಸೇರಿದಂತೆ ಇತರೆ ಸೌಲಭ್ಯ ಒದಗಿಸಬೇಕುʼ ಎಂದು ಒತ್ತಾಯಿಸಿದರು.
ಈ ಹಿಂದೆ ರಾಜ್ಯದ ಎಲ್ಲಾ ಕೃಷಿ ಮತ್ತು ಕಂದಾಯ ಅಧಿಕಾರಿಗಳಿಗೆ ಬೇಡಿಕೆಗಳಿಗೆ ಆಗ್ರಹಿಸಿಲಾಗಿತ್ತು. ಆದರೆ ಯಾವುದೇ ರೀತಿಯ ಸೌಲಭ್ಯ ದೊರಕಿಲ್ಲ. ಈಗಲಾದರೂ ಬೇಡಿಕೆ ಈಡೇರಿಸಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ
ಈ ಸಂದರ್ಭದಲ್ಲಿ ಬೆಳೆ ಸಮೀಕ್ಷೆದಾರ ಸಂಘದ ಪದಾಧಿಕಾರಿಗಳು ಇದ್ದರು.