ಧರ್ಮಸ್ಥಳದಲ್ಲಿ ನಡೆದಿದ್ದ 16 ವರ್ಷದ ಸೌಜನ್ಯಾಳ ಬರ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಮರ್ಪಕ ತನಿಖೆಗೆ ಒಳಪಡಿಸಬೇಕು ಎಂಬುದು ಇತ್ತೀಚೆಗೆ ದೇವಸ್ಥಾನದ ಮಾಜಿ ಸ್ವಚ್ಛತಾ ಕಾರ್ಮಿಕರೊಬ್ಬರು ಭಯಾನಕ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಕೆಲವು ದಶಕಗಳಿಂದ ಧರ್ಮಸ್ಥಳದ ಸುತ್ತಮುತ್ತ ನೂರಾರು ಕೊಲೆಗಳು ಮತ್ತು ಹಲವು ಬಲಿಪಶುಗಳ ಹೆಣಗಳನ್ನು ಇವರೇ ಹೂತಾಕಿರುವ ಬಗ್ಗೆ ಮಾಹಿತಿ ನೀಡಲು ಸಿದ್ಧ ಎಂದಿದ್ದಾರೆ. ಇವೆಲ್ಲ ಘಟನೆಗಳನ್ನು ಇಟ್ಟುಕೊಂಡು ಎಸ್ಐಟಿ ತಂಡ ನಿಷ್ಪಕ್ಷಪಾತ ತನಿಖೆ ನಡೆಸಿ, ಅಪರಾಧಿಗಗಳಿಗೆ ಕಾನೂನಿನ ಶಿಕ್ಷೆ ನೀಡಬೇಕೆಂದು ಕರ್ನಾಟಕ ಜನಶಕ್ತಿಯ ರಾಜ್ಯ ಸಮಿತಿ ಒತ್ತಾ
ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಈ ಎಲ್ಲದರ ತನಿಖೆಗಾಗಿ ಎಸ್.ಐ.ಟಿ ರಚಿಸುವಂತೆ ಕೋರಿತ್ತು. ಮಾಜಿ ಉದ್ಯೋಗಿಯ ದೂರು ಮತ್ತು ಮಹಿಳಾ ಆಯೋಗದ ಪತ್ರವನ್ನು ಆಧಾರವಾಗಿಟ್ಟುಕೊಂಡು ಸರ್ಕಾರ ಈಗ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸುವ ಮೂಲಕ ಪ್ರಕರಣದ ಗಂಭೀರತೆಯನ್ನು ಲೆಕ್ಕಹಾಕಿದೆʼ ಎಂದು ಕರ್ನಾಟಕ ಜನಶಕ್ತಿಯ ರಾಜ್ಯ ಸಮಿತಿಯ ಸದಸ್ಯ ಲಕ್ಷ್ಮಣ ಮಂಡಲಗೇರಾ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2012ರಲ್ಲಿ ಧರ್ಮಸ್ಥಳದಲ್ಲಿ 16 ವರ್ಷದ ಬಾಲಕಿ ಸೌಜನ್ಯಳ ಬರ್ಬರವಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತು. ಈ ದುರಂತವು ಕೇವಲ ಒಬ್ಬ ಬಾಲಕಿಯ ಕುಟುಂಬಕ್ಕೆ ಸೀಮಿತವಾಗಿರಲಿಲ್ಲ; ಇದು ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರದಲ್ಲಿ ಭದ್ರತೆ ಮತ್ತು ನಂಬಿಕೆಯ ಪ್ರಶ್ನೆಯನ್ನು ಹುಟ್ಟುಹಾಕಿತು. ಆದರೆ, ಎಷ್ಟೆಲ್ಲ ಹೋರಾಟ, ಬಡಿದಾಟಗಳ ಹೊರತಾಗಿಯೂ ಈ ಪ್ರಕರಣದ ತನಿಖೆಯು ಸಮರ್ಪಕವಾಗಿ ನಡೆಯದಿರುವುದು, ಸತ್ಯವನ್ನು ಮುಚ್ಚಿಹಾಕುವ ಯತ್ನಗಳು, ಮತ್ತು ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗದಿರುವುದು ನಾಡಿನ ಎಚ್ಚೆತ್ತ ನಾಗರೀಕರಿಗೆ ಅಪಾರವಾದ ಆತಂಕ ಮತ್ತು ಅಸಮಾಧಾನವನ್ನು ಉಂಟುಮಾಡಿತ್ತುʼ ಎಂದು ಹೇಳಿದರು.
ಕರ್ನಾಟಕ ಸರ್ಕಾರವು ವಿಶೇಷ ತನಿಖಾ ದಳ ರಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಇದೇ ಸಂದರ್ಭದಲ್ಲಿ ಈ ತನಿಖಾ ದಳದಿಂದ ಈ ಕೆಳಗಿನ ಸಂಗತಿಗಳು ಸಮರ್ಪಕವಾಗಿ ನಿರ್ವಹಿಸಲ್ಪಡುತ್ತವೆ ಎಂಬ ಬಗ್ಗೆ ಭರವಸೆ ಇಟ್ಟುಕೊಂಡಿದ್ದೇವೆ. ಅದರ ಮೇರೆಗೆ ಇದೀಗ ರಚನೆಯಾದ ವಿಶೇಷ ತನಿಖಾ ದಳದಿಂದ ನ್ಯಾಯದ ನಿರೀಕ್ಷೆ ಹೆಚ್ಚಾಗಿದೆʼ ಎಂದರು.
ʼಸೌಜನ್ಯ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಸ್ಪಷ್ಟವಾಗಿ ತೀರ್ಪಿನಲ್ಲಿ ಸೂಚಿಸಿದಂತೆ, ಇಡೀ ಪ್ರಕರಣವನ್ನು ದಿಕ್ಕುತಪ್ಪಿಸಿ ಲೋಪವೆಸಗಿದ ತನಿಖೆಯ ಉಸ್ತುವಾರಿ ಹೊತ್ತಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಸೌಜನ್ಯ ಪ್ರಕರಣವನ್ನೂ ಸಮಗ್ರ ಮರುತನಿಖೆಗೆ ಒಳಪಡಿಸಬೇಕು. ಧರ್ಮಸ್ಥಳದ ದೇವಾಲಯವನ್ನು ಖಾಸಗಿ ಒಡೆತನದಿಂದ ಬಿಡಿಸಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರುವ ಮೂಲಕ, ಬಲಾಢ್ಯರು ತಮ್ಮಿಷ್ಟ ಬಂದಂತೆ ಅಮಾಯಕರ ಮೇಲೆ ಅತ್ಯಾಚಾರ, ಅನಾಚಾರ ನಡೆಸುವ ಸಾಧ್ಯತೆಗಳನ್ನು ಇಲ್ಲವಾಗಿಸಬೇಕುʼ ಎಂದು ಒತ್ತಾಯಿಸಿದರು.
ʼಮಹಿಳೆಯರ ಮೇಲಿನ ಯಾವುದೇ ಬಗೆಯ ದೌರ್ಜನ್ಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಈ ವಿಚಾರದಲ್ಲಿ ಕಾಣುತ್ತಿರುವ ನಿರ್ಲಿಪ್ತತೆ ಸರಿಯಾದುದದಲ್ಲ. ಮಹಿಳೆಯರನ್ನು ಕೇವಲ ತಮ್ಮ ಯೋಜನೆಗಳ ಫಲಾನುಭವಿಗಳಂತೆ ಅಥವಾ ಮತದ ಬ್ಯಾಂಕುಗಳಂತೆ ನೋಡುವ ದೃಷ್ಟಿಕೋನ ಬದಲಿಸಿಕೊಂಡು, ಮಹಿಳೆಯರ ಸುರಕ್ಷತೆ, ಘನತೆ ಮತ್ತು ಹಕ್ಕುಗಳ ರಕ್ಷಣೆಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ನ್ಯಾಯಕ್ಕಾಗಿ ದನಿಯೆತ್ತೋಣ! ನಾವೆಲ್ಲರೂ ಒಗ್ಗಟ್ಟಾಗಿ ಈ ಆರೋಪಗಳ ಸತ್ಯಾಸತ್ಯತೆ ನ್ಯಾಯಬದ್ಧವಾಗಿ ಹೊರಬರಬೇಕೆಂದು ಒತ್ತಾಯಿಸುತ್ತಾ ದೇವರು ಮತ್ತು ಧರ್ಮದ ಹೆಸರ ಲ್ಲಿ ಜನರನ್ನು ದೌರ್ಜನ್ಯಕ್ಕೆ ಗುರಿಪಡಿಸುವ ಅಥವಾ ಮಂಕುಬೂದಿಯೆರಚುವ ಪ್ರವೃತ್ತಿ ನಿಲ್ಲಬೇಕುʼ ಎಂದು ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ರಾಜೇಂದ್ರ ರಾಜವಾಳ ಮತ್ತಿತರರು ಒತ್ತಾಯಿಸಿದರು.
