ಬೆಳಗಾವಿ | ಚರಿತ್ರೆ ಇಲ್ಲದವರ, ಚರಿತ್ರೆ ಕಟ್ಟಿಕೊಡುವಂತೆ ಕವಿತೆ ಇರಬೇಕು: ಯುವ ಕವಿ ದೇವರಾಜ್ ಹುಣಸಿಕಟ್ಟಿ

Date:

“ಕವಿತೆ ಚರಿತ್ರೆ ಇಲ್ಲದವರ ಚರಿತ್ರೆಯನ್ನು ಕಟ್ಟಿಕೊಡುವ, ಭರವಸೆ ತುಂಬುವ,  ಕೆಲಸವನ್ನು ಅನಾದಿ ಕಾಲದಿಂದಲೂ ಕವಿತೆ ಮಾಡುತ್ತಿದ್ದು, ಆ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಕಾಲದ ಸಂಕಟಕ್ಕೆ, ನೋವುಗಳಿಗೆ ಸ್ಪಂದಿಸದಿದ್ದರೆ,  ಪರಕೀಯರಾಗಿ ಉಳಿದುಕೊಳ್ಳುವ ಅಪಾಯ ನಮಗೆ ಇರುತ್ತದೆ. ಹಾಗಾಗಿ ಪರಕೀಯತೆಯನ್ನು ನಾವು ಯಾವತ್ತಿಗೂ ತಲುಪಬಾರದು. ನಮ್ಮೊಳಗೆ ಜೀವಂತಿಕೆ  ಸಂಕಟಕ್ಕೆ, ನೋವಿಗೆ ಸದಾ ತುಡಿತ ಇರಬೇಕು” ಎಂದು ಕವಿಗೋಷ್ಠಿ ಅಧ್ಯಕ್ಷತೆಯನ್ನು ಉದ್ದೇಶಿಸಿ ಯುವ ಕವಿ ದೇವರಾಜ್ ಹುಣಸಿಕಟ್ಟಿ ಹೇಳಿದರು.

- Advertisement -

ಬೆಳಗಾವಿ ಪಟ್ಟಣದ ಕನ್ನಡ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಭವನ ಸಹಯೋಗದಲ್ಲಿ ಯುವ ಕವಿಗೋಷ್ಠಿಯಲ್ಲಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

“ಮನುಜ ಕುಲ, ಮನುಜ ಜಾತಿ ತಾನೊಂದೆ ವಲಂ’ ಎಂದ ಪಂಪನ ಗ್ರಹಿಕೆ ಈ ನೆಲದ ಸಾಹಿತ್ಯದ ಗ್ರಹಿಕೆ ಅಷ್ಟೇ ಅಲ್ಲ, ಜೀವನ ಗ್ರಹಿಕೆ. ಅದಕ್ಕೆ ಈಡಾದಾಗಲೆಲ್ಲ ಕವಿ ಮಾತನಾಡಬೇಕಾಗುತ್ತದೆ. ಅನಾದಿ ಕಾಲದಿಂದಲ್ಲೂ ಆಯಾ ಕಾಲ ಘಟ್ಟದಲ್ಲಿ  ವಚನಕಾರರು, ಸಾಹಿತಿಗಳು, ಲೇಖಕರು ಪ್ರಗತಿಪರ ಚಿಂತಕರು ಮಾಡಿಕೊಂಡು ಬಂದಿರುವರು. ಮುಂದುವರೆದು ಆ ಮಹತ್ತರ ಜವಾಬ್ದಾರಿಯನ್ನು ಈ ಕಲಾಘಟ್ಟದ, ನನ್ನ ಕಾಲದ ಕವಿಗಳು ಕೂಡಾ ಅತ್ಯಂತ ಎಚ್ಚರದಿಂದ ಮಾಡುತ್ತಿರುವುದಕ್ಕೆ ಈ ಕವಿಗೋಷ್ಠಿ ಸಾಕ್ಷಿಯಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಮಂಗಳೂರು | ಸುರತ್ಕಲ್‌ ಎನ್‌ಐಟಿಕೆಯಲ್ಲಿ ಕೃಷ್ಣಾ ನದಿ ಜಲಾನಯನ ನಿರ್ವಹಣಾ ಅಧ್ಯಯನಗಳ ಕುರಿತು ಕಾರ್ಯಾಗಾರ

“ಇಲ್ಲಿಯ ಕವಿಗಳ ಕವಿತೆಗಳಲ್ಲಿ ವ್ಯವಸ್ಥೆಯಲ್ಲಿರುವ ಹುಳುಕಿಗೆ ಕನ್ನಡಿ ಹಿಡಿಯುವಂತಿವೆ. ಭಾಷೆ ಬಳಕೆಯ ಸೊಗಡು ಮತ್ತು ಕಟ್ಟುವಿಕೆಯ ಭಿನ್ನತೆಯಿಂದ ಎರಡು ಕವಿತೆಗಳು ನನ್ನ ಗಮನ ಸೆಳೆದಿವೆ.  ಸುಮಿತ್ ಮೇತ್ರಿ ಅವರ ‘ಹಲಸಂಗಿ’ ಮತ್ತು ಶಿವರಾಜ ಕಾಂಬಳೆ ಅವರ ಇನ್ನೂ ಆರದ ಬೆವರ ನೆತ್ತವು’ ಕವಿತೆಗಳು ಭಾಷೆಯ ಬಳಕೆಯಲ್ಲಿ ಅತ್ಯಂತ ಸಮರ್ಥ ಹಾಗೂ ಭಿನ್ನವಾಗಿವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕವಿಗೋಷ್ಠಿಯಲ್ಲಿ ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ, ವಿಜಯಪುರ, ಧಾರವಾಡದ ಯುವ ಕವಿಗಳು ಕವಿತೆಗಳನ್ನು ವಾಚಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಪೊತ್ನಾಳ ಗ್ರಂಥಾಲಯದಲ್ಲಿ ಮೂಲಸೌಕರ್ಯ ಕೊರತೆ: ಓದಲು ಬರುವ ವಿದ್ಯಾರ್ಥಿಗಳಿಗೆ ಪರದಾಟ

ಮಾನ್ವಿ ತಾಲ್ಲೂಕಿನ ಪೊತ್ನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಯ ಮೈದಾನದಲ್ಲಿರುವ...

ಕಲಬುರಗಿ | ಪ್ರೀತಿಸಿದ ಯುವತಿಯನ್ನೇ ಮದುವೆಯಾಗಲು ಪಟ್ಟು: ಟವರ್ ಏರಿದ ಯುವಕ!

ತಾನು ಪ್ರೀತಿಸಿದ ಯುವತಿಯನ್ನೇ ಮದುವೆಯಾಗಬೇಕು ಎಂದು ಪಟ್ಟು ಹಿಡಿದ ಯುವಕನೊಬ್ಬ, ಮದುವೆಗೆ...

ಬೆಳಗಾವಿ | ವಿಫಲತೆಯಿಂದ ಕುಗ್ಗದೆ ಯಶಸ್ಸಿನತ್ತ ಸಾಗಿರಿ: ರಾಜ್ಯಪಾಲ ಗೆಹ್ಲೋಟ್

ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದಾಗ ವಿನಯದಿಂದ ಇರಬೇಕು. ಕಷ್ಟಗಳು ಎದುರಾದಾಗ ತಾಳ್ಮೆ ಕಳೆದುಕೊಳ್ಳದೆ,...

ಅಳಿವಿನ ಅಂಚಿನಲ್ಲಿ ಅಕ್ಕಸಾಲಿಗರ ಕುಲಕಸುಬು: ಸರ್ಕಾರದ ನೆರವಿಗೆ ಚಿನ್ನ-ಬೆಳ್ಳಿ ಕೆಲಸಗಾರರ ಆಗ್ರಹ

ಒಮ್ಮೆ ರಾಜಾಶ್ರಯ ಪಡೆದಿದ್ದ ಪಾರಂಪರಿಕ ಕುಲಕಸುಬುಗಳಲ್ಲಿ ಒಂದಾಗಿದ್ದ ಚಿನ್ನ ಮತ್ತು ಬೆಳ್ಳಿ...