ಡಾ.ಪುನೀತ್ ರಾಜ್‌ಕುಮಾರ್ ಅವರ 3ನೇ ಪುಣ್ಯ ಸ್ಮರಣೆ ಅಂಗವಾಗಿ ಕಲಬುರಗಿಯ ಭಾಗ್ಯಜೋತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಲಬುರಗಿ ನಗರದ ವೃದ್ಧಾಶ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಸಂಘ ಮತ್ತು ಭೀಮ ಯುವ ಸೇನೆ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
“ಡಾ.ಪುನೀತ್ ರಾಜ್‌ಕುಮಾರ್ ಅವರು ಸಾಮಾಜಿಕ ಕಳಕಳಿ ಮತ್ತು ಅವರ ವಿಚಾರಗಳು ಸಮಾಜಕ್ಕೆ ಕೊಡುಗೆಯಾಗಿದೆ. ಅವರ ಮಕ್ಕಳಿಗೆ, ಮಹಿಳೆಯರಿಗೆ ,ತಂದೆ ತಾಯಿಯರಿಗೆ ,ಗುರು ಹಿರಿಯರಿಗೆ, ಅನಾಥರಿಗೆ ,ನಿರ್ಗತಿಕರಿಗೆ, ಗೌರವ, ಕರುಣೆ ,ಪ್ರೀತಿಯ ಮನೋಭಾವದಿಂದ ಎಲ್ಲಾ ಜಾತಿ ಜನಾಂಗದವರನ್ನು ಗೌರವದಿಂದ ಕಾಣುವ ಮೂಲಕ, ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಇಂದಿನ ದಿನಗಳಲ್ಲಿ ಯುವಕರು ಇಂಥ ಆದರ್ಶ ವ್ಯಕ್ತಿಯ ವ್ಯಕ್ತಿತ್ವ ಮೈಗೂಡಿಸಿಕೊಳ್ಳಬೇಕು” ಎಂದು ಮೈಲಾರಿ ದೊಡ್ಡಮನಿ ಅವರು ಕಾರ್ಯಕ್ರಮದಲ್ಲಿ ತಿಳಿಸಿದರು.

“ಡಾ.ಪುನೀತ್ ರಾಜಕುಮಾರ್ ಅವರ 3 ನೇ ಪುಣ್ಯಸ್ಮರಣೆ ದಿನ, ಪ್ರತಿ ವರ್ಷದಂತೆ ಈ ವರ್ಷವೂ ವೃದ್ಧಾಶ್ರಮದಲಿರುವ ಅನಾಥ ಮತ್ತು ನಿರ್ಗತಿಕರಿಗೆ ಹಣ್ಣು, ಹಂಪಲು, ಬ್ರೆಡ್, ಬಿಸ್ಕೆಟ್ ನೀಡುವುದರ ಮೂಲಕ, ಅವರ ಜೀವನ ಶೈಲಿ ಹಾಗೂ ಸರಳತೆ, ನಡೆ, ನುಡಿ ಕಲಿಯಬೇಕು. ಅಪ್ಪು ಅವರನ್ನು ನೆನೆಯುತ್ತಾ ಈ ಸೇವೆ ಮಾಡುತ್ತಿದ್ದೆವೆ ಎಂದು ಡಾ.ಪುನೀತ ರಾಜಕುಮಾರ ಅಭಿಮಾನಿ ಸಂಘ ಮತ್ತು ಭೀಮ ಯುವ ಸೇನೆಯ ಅಧ್ಯಕ್ಷರಾದ ಸಂತೋಷ ಹಾವನೂರ ಹೇಳಿದರು.
ಈ ಸಂದರ್ಭದಲ್ಲಿ ಮಹಾಂತೇಶ ಸಿಂಗೆ, ರಜನಿಕಾಂತ ಸಿಂಗೆ, ಟ್ರಸ್ಟಿನ ಅಧ್ಯಕ್ಷರಾದ ಶ್ರೀಮತಿ ಗಂಗಮ್ಮ, ರೇವಣಸಿದ್ದ ಗೋರಗೋಳ, ಶ್ರೀಮತಿ ಕರುಣಾ ಕಲಬುರಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಮೈಲಾರಿ ದೊಡ್ಡಮನಿ, ಸಿಟಿಜನ್ ಜರ್ನಲಿಸ್ಟ್
