ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪರಿಸರ ಮಹತ್ವದ ತಿಳಿಸುವುದರ ಜತೆಗೆ ಶಾಲಾ ಮಕ್ಕಳು, ಗ್ರಾಮಸ್ಥರಲ್ಲಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಅರಿವು ಮೂಡಿಸುವ ಸಲುವಾಗಿ ಕಾಡು ಬೆಳಸಿ ನಾಡು ಉಳಿಸಿ, ಹಸಿರೆ ನಮ್ಮ ಉಸಿರು, ಪರಿಸರವನ್ನು ನಾವು ರಕ್ಷಣೆ ಮಾಡಿದರೆ ಪರಿಸರ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂಬಿತ್ಯಾದಿ ಘೋಷಣೆ ಕೂಗುತ್ತಾ ಜನರಲ್ಲಿ ಜಾಗೃತಿ ಮೂಡಿಸಿದರು.
ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯ ಮಾತನಾಡಿ, “ಪರಿಸರ ದಿನೇ ದಿನೆ ನಾಶವಾಗುತ್ತಿರುವುದಕ್ಕೆ ಮಾನವನೇ ನೇರ ಕಾರಣ. ಆಧುನಿಕತೆ ಹೆಸರಿನಲ್ಲಿ ರಸ್ತೆ ಮಾಡಲು ಸಾವಿರಾರು ಮರಗಳ ಮಾರಣ ಹೋಮ ನಡೆಸಲಾಗುತ್ತಿದೆ. ಇದರಿಂದ ಸರಿಯಾದ ಸಮಯಕ್ಕೆ ಮಳೆ ಇಲ್ಲದೆ, ಬೆಳೆ ಇಲ್ಲದೆ ಜೀವ ಸಂಕುಲ ಪರಿತಪಿಸುವಂತಾಗಿದೆ. ಮನೆಯಲ್ಲಿ ಎರಡು ಕಸದ ಬುಟ್ಟಿ ಇಟ್ಟು ಒಣ ಕಸ-ಹಸಿ ಕಸ ಪ್ರತ್ಯೇಕವಾಗಿ ಹಾಕಬೇಕು ನಮ್ಮ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪ್ರತಿ ಮನೆಗಳಲ್ಲಿ ಸಸಿಗಳನ್ನು ನೆಡಬೇಕು. ನಾವು ಬದಲಾದರೆ ಜಗತ್ತು ಬದಲಾಗುತ್ತದೆ. ಬದಲಾವಣೆ ನಮ್ಮಿಂದಲೇ ಶುರುವಾಗಲಿ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ಕಲಬುರಗಿ | ಬಾಣಂತಿಯರ ಸರಣಿ ಸಾವು ಖಂಡಿಸಿ ಆರೋಗ್ಯ ಹಕ್ಕಿನ ಜಾಥಾ
ಜಾಥಾದಲ್ಲಿ ಸರಸ್ವತಿ ಸಿಂಗೆ, ರಾಮಪ್ಪ ನಡಗಟ್ಟಿ, ಶಾಂತಬಾಯಿ ಕಡಬಿನ್, ಜಯಶ್ರೀ ಭಂಗಿ, ಶಿಕ್ಷಣ ಪ್ರೇಮಿ ದೇವೇಂದ್ರ ನಡಗಟ್ಟಿ, ಭೂತಾಳಿ ನಡಗಟ್ಟಿ, ಶಾಲಾ ಮಕ್ಕಳು ಉಪಸ್ಥಿತರಿದ್ದರು.