ಕಲಬುರಗಿ | ವಾಸವದತ್ತಾ ಸಿಮೆಂಟ್ ಕಾರ್ಖಾನೆ ವಿರುದ್ಧ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ

Date:

Advertisements

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಂಜೇಪಲ್ಲಿ ಗ್ರಾಮಸ್ಥರಿಗೆ ಖಾಯಂ ಹುದ್ದೆ ನೀಡುತ್ತೇವೆಂದು ಭರವಸೆ ನೀಡಿ ಮೋಸ ಮಾಡಿದ ಸೇಡಂನ ವಾಸವದತ್ತಾ ಸಿಮೆಂಟ್ ಕಾರ್ಖಾನೆ ವಿರುದ್ಧ ಇಂಜೇಪಲ್ಲಿ ನಿರಾಶ್ರಿತರ ಸಂಘ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದೆ.

“ಕಳೆದ 18 ವರ್ಷಗಳಿಂದ ಇಂಜೇಪಲ್ಲಿ ಗ್ರಾಮಸ್ಥರಿಂದ ವಾಸವದತ್ತಾ ಸಿಮೆಂಟ್ ಕಾರ್ಖಾನೆ ಮನೆಗೊಂದು ಖಾಯಂ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. 2007ರ ಡಿಸೆಂಬರ್‌ನಲ್ಲಿ ಅಂದಿನ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಸುಮಾರು 51 ಕುಟುಂಬಸ್ಥರಿಂದ ಮನೆಗಳನ್ನು ಖರೀದಿ ಮಾಡಿ ನೊಂದಣಿ ಮಾಡಿಕೊಂಡ ನಂತರ ಇಲ್ಲಿಯವರೆಗೂ ಇಂದು ನಾಳೆ ಎಂದು ದಿನಗಳನ್ನು ಮುಂದೂಡುತ್ತಾ ಸದರಿ ಕಂಪನಿಯವರು ನಮಗೆ ಯಾರಿಗೂ ಉದ್ಯೋಗವನ್ನು ನೀಡಿರುವುದಿಲ್ಲವೆಂದು” ಸಂಘದ ಮುಖಂಡರು ಆರೋಪಿಸಿದರು.

2023ರ ಸೆಪ್ಟೆಂಬರ್ನಲ್ಲಿ ಸೇಡಂನ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಇಂಜೇನಲ್ಲಿ ಗ್ರಾಮದವರಿಗೆ ಪುನರ್ವಸತಿ ಕಲ್ಪಿಸುವ ಹಾಗೂ 51 ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವ ಕುರಿತು ಸಭೆ ಮಾಡಲಾಗಿತ್ತು.

Advertisements

ಸಭೆಯಲ್ಲಿ ವಾಸವದತ್ತಾ ಸಿಮೆಂಟ್ ಕಂಪನಿ ಆಡಳಿತದ ಅಧಿಕಾರಿಗಳಿಗೆ ಮನೆ ಕಳೆದುಕೊಂಡ 51 ಕುಟುಂಬಗಳಿಗೆ 60 ದಿನಗಳ ಒಳಗಾಗಿ ಉದ್ಯೋಗ ನೀಡಬೇಕು, ಇಲ್ಲವಾದರೆ ಕಂಪನಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು ಬ್ಲಾಸ್ಟಿಂಗ್ ಬಂದ್ ಮಾಡಿಸಿ ಕೆಲಸ ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

WhatsApp Image 2025 05 16 at 11.40.45 AM

ಆದರೆ, ಸಹಾಯಕ ಆಯುಕ್ತರು ಕೊಟ್ಟ 60 ದಿವಸಗಳ ಅವಧಿ ಮುಗಿಯಿತು. 3 ತಿಂಗಳ ಅವಧಿಯಾದರೂ ಕೂಡ ವಾಸವದತ್ತಾ ಸಿಮೆಂಟ್ ಕಂಪನಿ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: ಕಲಬುರಗಿ | ಸಿಡಿಲು ಬಡಿದು ಯುವಕ ಸಾವು

“ಉದ್ಯೋಗ ನೀಡುವವರೆಗೆ ಅನಿರ್ಧಿಷ್ಟಾವಧಿ ವರೆಗೆ ಉಪವಾಸ ಸತ್ಯಾಗ್ರಹ ಕೈಕೊಳ್ಳಲಾಗುವುದು. ಸತ್ಯಾಗ್ರಹದ ಸಮಯದಲ್ಲಿ ಏನಾದರು ಸಾವು ನೋವುಗಳಾದಲ್ಲಿ ಅದಕ್ಕೆ ನೇರ ಹೊಣೆಗಾರರು ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆ ಮತ್ತು ಸಂಬಂಧಿತ ಸರಕಾರಿ ಅಧಿಕಾರಿಗಳಾಗುತ್ತಾರೆ” ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಸತೀಶರೆಡ್ಡಿ ಪಾಟೀಲ್, ಅಧ್ಯಕ್ಷ ವಿಠಲ್ ಬಿ ಇಂಜಳ್ಳಿಕರ್, ಸಂತ್ರಸ್ತ ಕುಟುಂಬದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

Download Eedina App Android / iOS

X