ಕಲಬುರಗಿ | ʼಪಾಶʼ ಕಿರುಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿಗಳ ಗರಿ

Date:

Advertisements

ಗಧಾಗ್ರಜ ಫಿಲಂಸ್‌ ಅಡಿಯಲ್ಲಿ ನಿರ್ಮಾಣಗೊಂಡಿದ್ದ ʼಪಾಶʼ ಕಿರುಚಿತ್ರ 8  ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕಲಬುರಗಿಯವರೇ ಆದ ನಿರ್ದೇಶಕ ಲಕ್ಷ್ಮೀಕಾಂತ ಜೋಶಿ ಅವರು ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುತ್ತಾ  ಚೊಚ್ಚಲ ಚಿತ್ರ ನಿರ್ದೇಶನಕ್ಕೆ ಪ್ರಯತ್ನಸಿದ್ದಾರೆ.

ಇಡೀ ತಂಡ ಕಲಬುರಗಿ ಭಾಗದವರೇ ಆಗಿದ್ದು, ಜಿಲ್ಲೆಗೆ ಇರುವ ಹಿಂದುಳಿದ ಭಾಗ ಎನ್ನುವ ಹಣೆಪಟ್ಟಿಯನ್ನು ಕಿತ್ತೊಗೆಯಲು ಶ್ರಮಿಸಿದ್ದೇವು ಹಾಗೂ ಅದರಂತೆ ಜಯಸಿದ್ದೇವೆ ಎನ್ನುತ್ತದೆ ಚಿತ್ರತಂಡ.

ಈ ಕಿರುಚಿತ್ರಕ್ಕೆ ಹಿರಿಯ ಸಾಹಿತಿ ಹಾಗೂ ನಿರ್ದೇಶಕ ʼಜೋಗಿʼ ( ಗಿರೀಶರಾವ ಹತ್ವಾರ) ಅವರ ʼಲೈಫ್ ಈಸ್ ಬ್ಯೂಟಿಫುಲ್ʼ ಕೃತಿಯಲ್ಲಿಯ ಮೊದಲ ಕತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರ ನಿರ್ದೇಶಕ ಲಕ್ಷ್ಮಿಕಾಂತ ಜೋಶಿ ಅವರು ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisements

ʼಪಾಶʼ ಬೆಂಗಳೂರಿನ ʼವಿಡಿಯೋಟೇಪ್ ಫಿಲ್ಮ್ ಫೆಸ್ಟಿವಲ್ʼ ನಲ್ಲಿ ‘ಉತ್ತಮ ಸಾಮಾಜಿಕ ಸಂದೇಶ’ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಅದೇ ರೀತಿ ಕೊಲ್ಕತ್ತಾದ ಪ್ರತಿಷ್ಠಿತ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ʼಉತ್ತಮ ಕನ್ನಡ ಕಿರುಚಿತ್ರʼ ಹಾಗೂ ಮುಂಬೈನ ಜಾಶ್ನೆ ಚಲನಚಿತ್ರೋತ್ಸವʼ ದಲ್ಲಿಯೂ ಉತ್ತಮ ಕನ್ನಡ ಕಿರುಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

ಮಹಾರಾಷ್ಟ್ರದ ರೀಲ್ಸ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ʼಉತ್ತಮ ಕಿರುಚಿತ್ರʼ ವಿಭಾಗದಲ್ಲಿ ತನ್ನ ಛಾಪು ಮೂಡಿಸಿದೆ ಮತ್ತು ಆನ್ ಲೈನ್ ಫೆಸ್ಟಿವಲ್‌ಗಳಾದ ಡೈಮಂಡ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ʼಉತ್ತಮ ಕತೆʼ ಹಾಗೂ ಐಕಾನಿಕ್ ಶಾರ್ಟ್ ಸಿನಿ ಅವಾರ್ಡ್ಸ್ ನಲ್ಲಿಯೂ ʼಉತ್ತಮ ಕತೆʼ, ʼಉತ್ತಮ ಪ್ರಾಯೋಗಿಕ ಕಿರುಚಿತ್ರʼ, ʼಉತ್ತಮ ಕನ್ನಡ ಕಿರುಚಿತ್ರʼ ವಿಭಾಗದಲ್ಲಿ ಜಯಭೇರಿ ಭಾರಿಸಿದೆ.

ಈ ಗೆಲುವಿಗೆ ತಂಡದ ಎಲ್ಲಾ ಸದಸ್ಯರ ಸಹಕಾರ, ಪರಿಶ್ರಮವೇ ಕಾರಣ. ಈ ಗೆಲುವನ್ನು ಅವರೊಂದಿಗೆ ಹಂಚಿಕೊಳ್ಳುವುದಕ್ಕೆ ತುಂಬಾ ಸಂತಸ ಎನಿಸುತ್ತದೆ ಎನ್ನುತ್ತಾರೆ ನಿರ್ದೇಶಕರು.

ಮುಖ್ಯಪಾತ್ರದಲ್ಲಿ  ಕಿರುತೆರೆಯ (ಮುಕ್ತ ಮುಕ್ತ, ಮಹಾಸತಿ, ಗಂಗಾ ಧಾರಾವಾಹಿ ಖ್ಯಾತಿಯ) ಹಿರಿಯ ನಟ ವಿಜಯ ಕುಲಕರ್ಣಿ ನಟಿಸಿದ್ದರೆ, ಕಲರ್ಸ್ ಕನ್ನಡ ವಾಹಿನಿಯ, ಕಾಮಿಡಿ ಕಂಪನಿ ಖ್ಯಾತಿಯ ಸೋಮಶಂಕರ್ ಬಿರಾದಾರ ಅವರು ಪ್ರಮುಖ ಪಾತ್ರವೊಂದರಲ್ಲಿ ತೆರೆ ಹಂಚಿಕೊಂಡಿದ್ದಾರೆ.

ರಂಗಾಯಣ ಕಲಾವಿದರಾದ ಉಮೇಶ್ ಪಾಟೀಲ್, ಶ್ರೀನಿವಾಸ ದೋರನಳ್ಳಿ, ಕೌಶಿಕ್ ಕುಲಕರ್ಣಿ, ಪ್ರದೀಪ ಬೆಳಮಗಿ, ರಿಷಿಕೇಶ ಕುಲಕರ್ಣಿ, ನೀಲಾಂಬಿಕಾ, ಲಕ್ಷ್ಮೀ ಅಥಣಿ ತಾರಾಗಣದಲ್ಲಿದ್ದಾರೆ. ಕುಮಾರಿ ಸ್ಪೂರ್ತಿ ಅಥಣಿ , ಸ್ನೇಹ , ಕಾವ್ಯ , ವೈಷ್ಣವಿ ಬಾಲ ಕಲಾವಿದರಾಗಿ ಅಭಿನಯಿಸಿದ್ದಾರೆ.

ಚಿತ್ರಕ್ಕೆ ಸಹ ನಿರ್ದೇಶಕರಾಗಿ ಸೋಮಶಂಕರ್ ಬಿರಾದಾರ, ಸಹಾಯಕ ನಿರ್ದೇಶಕರಾಗಿ ಅಂಬರೀಶ್ ಮರಾಠಾ ಕಾರ್ಯ ನಿರ್ವಹಿಸಿದ್ದಾರೆ. ಛಾಯಾಗ್ರಾಹಕರಾಗಿ ರಾಘು ಮರೆನೂರ, ಸಂಕಲನ ಓಂಕಾರ ಮತ್ತು ಭಾಗ್ಯೇಶ್ ಪಾಟೀಲ್ ಜಂಟಿಯಾಗಿ ಕಾರ್ಯ ನಿರ್ವಹಿಸಿದ್ದಾರೆ ಹಾಗೂ ಸುಚೀನ್ ಶರ್ಮಾ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X