ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಕಲಬುರಗಿ ಜಿಲ್ಲೆಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಇಂಜಿನಿಯರ್ ಬಾಲಕೃಷ್ಣ ಹಾಗೂ ಹಿಂದಿನ ಕಾರ್ಯನಿರ್ವಾಹಕ ಅಭಿಯಂತರರಾದ ಮೋನಪ್ಪಾ ಅವರನ್ನು ಅಮಾನತುಗೊಳಿಸಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆ ಆಗ್ರಹಿಸಿದೆ.
ಕಲಬುರಗಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಛೇರಿ ಎದುರುಗಡೆ ಪ್ರತಿಭಟನೆ ನಡೆಸುವುದರ ಮೂಲಕ ಇಂಜಿನಿಯರಿಂಗ್ ಅಧೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದರು.
ಹಿಂದಿನ ಕಾರ್ಯನಿರ್ವಾಹಕ ಅಭಿಯಂತರರಾದ ಮೋನಪ್ಪಾ ಅವರು ಮತ್ತು ಅಫ್ಜಲಪುರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಬಾಲಕೃಷ್ಣ ಅವರು ಮತ್ತು ಸಂಬಂಧಪಟ್ಟ ಕಿರಿಯ ಅಭಿಯಂತರರು ಸೇರಿಕೊಂಡು ತಮ್ಮ ಕರ್ತವ್ಯ ಮರೆತು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. 2022-23ನೇ ಸಾಲಿನಲ್ಲಿ 61 ಕಾಮಗಾರಿಗಳು ಮಾಡದೆ ಸರ್ಕಾರದ ರೂ.2,09,70,000-00(ಎರಡು ಕೋಟಿ ಒಂಬತ್ತು ಲಕ್ಷದ ಎಪ್ಪತ್ತು ಸಾವಿರ ) ರೂಪಾಯಿಗಳ ಮೊತ್ತದ ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ದುರ್ಬಳಕೆ ಮಾಡಿಕೊಂಡಿರುವ ಭ್ರಷ್ಟ ಅಧಿಕಾರಿಗಳಾದ ಮೋನಪ್ಪಾ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಬಾಲಕೃಷ್ಣ ಅವರನ್ನು ಅಮಾನತುಗೊಳಿಸಿ ಅವರ ವಿರುದ್ಧ ಕಾನುನಿನ ಸುಕ್ತವಾದ ಕ್ರಮ ಮಾಡಬೆಕೆಂದು ಒತ್ತಾಯಿಸಿ, ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಬಸವರಾಜ ಕೊರಳ್ಳಿ ಜಿಲ್ಲಾ ಉಪಾಧ್ಯಕ್ಷರಾದ, ವರದ ಸ್ವಾಮಿ ಹಿರೇಮಠ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಅರುಣ್ ಕುಮಾರ್ ನಾಮದರ, ಆಸಿಫ್ ರುದ್ರವಾಡಿ, ಜಿಲ್ಲಾ ಪದಾಧಿಕಾರಿ ಸಂದೀಪ ಭೀಮಳ್ಳಿ, ರಾಹುಲ ಸರ್, ನಾಗರಾಜ ಕೋಗನೂರ, ಅಫ್ಜಲಪುರ ತಾಲೂಕು ಅಧ್ಯಕ್ಷರಾದ ಸದಾನಂದ ಕ್ಷತ್ರಿ, ಜೇವರ್ಗಿ ತಾಲೂಕು ಅಧ್ಯಕ್ಷರಾದ ಸತೀಶ ಜಾಗಿರದಾರ, ವಿಕ್ರಮ ಚಿಂಚೋಳಿ ತಾಲೂಕು ಅಧ್ಯಕ್ಷರಾದ ರಮೇಶ, ಯಡ್ರಾಮೀ ತಾಲೂಕು ಅಧ್ಯಕ್ಷರಾದ ಜಗದೀಶ ಅಫ್ಜಲಪುರ, ತಾಲೂಕು ಉಪಾಧ್ಯಕ್ಷರಾದ ಮುತ್ತು ಕುರಿಮನಿ, ಶರಣು ದೇವನಾಜಿ, ಸಚಿನ, ಆಕಾಶ ಕೊತಲಿ, ಲಿಂಗರಾಜ ಸ್ವಾಮಿ ನೀಲಕಂಠ ಸೇರಿಕಾರ ಹಾಗೂ ಅನೇಕ ಜಯ ಕರ್ನಾಟಕ ಕಾರ್ಯಕರ್ತರು ಭಾಗವಹಿಸಿದ್ದರು.
