ಕಲಬುರಗಿಯಲ್ಲಿ ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್ ಹಾಗೂ ಪ್ರವೀಣ್ ಎಮ್ ಕೆ.ಲಾ ಅಸೋಸಿಯೇಷನ್ ಒಗ್ಗೂಡಿ ಕನಕದಾಸ ಜಯಂತಿ ಕಾರ್ಯಕ್ರಮ ಆಚರಿಸಿವೆ.
ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲ ಪ್ರವೀಣ್ ಎಂ ಕಲ್ಕರೆ, “ಕನಕದಾಸರು ಶೂದ್ರ ಸಮುದಾಯದ ಶ್ರಮ ಸಂಕೇತವಾದ ಕಪ್ಪು ಕಂಬಳಿಯನ್ನು ಹೊದ್ದು, ತಂಬೂರಿ ಚಿಟಕೆ ಹಿಡಿದು ಬರಿಗಾಲಲ್ಲಿ ಊರೂರು ತಿರುಗಿ ಜಾತಿಮೇಲುಕೀಳಿನ ವಿರುದ್ಧ ಹೋರಾಡಿದರು. ಮೌಢ್ಯದ ವಿರುದ್ಧ ಹಾಡುತ್ತಾ, ಮಾತಾಡುತ್ತಾ, ಬರೆಯುತ್ತಾ ಸಮಾಜ ಪರಿವರ್ತನೆ ಮಾಡಿದರು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ಏಕಲೋರೆ, ರಾಜಕುಮಾರ್ ಪೂಜಾರಿ, ಹನುಮಂತ ಹುಣಸಗಿ, ಅನಿಲ್ ಟೆಂಗಳೆ, ಪಂಡಿತ್ ಕಟ್ಟಿಮನಿ, ಸಿದ್ದಾರ್ಥ್ ಬಂದು, ಗಿರೀಶ್ ಇತರರು ಭಾಗವಹಿಸಿದ್ದರು.
ವರದಿ: ಸಿಟಿಜನ್ ಜರ್ನಲಿಸ್ಟ್, ಮಿಲಿಂದ ಸಾಗರ