ಕಲಬುರಗಿ ನಗರದಲ್ಲಿ ಜಿಲ್ಲಾ ಕೋಲಿ/ಕಬ್ಬಲಿಗ ಸಮಾಜದ ಮುಖಂಡರು ಸುದ್ದಿಗೋಷ್ಠಿ ನಡೆಸಿ, ಅವ್ವಣ್ಣ ಮ್ಯಾಕೇರಿ ಇವರು ಸಮಾಜದ ಪ್ರಭಾವಿ ಹಿಂದುಳಿದ ನಾಯಕ ಇವರನ್ನು ಬಿಜೆಪಿ ಕಲಬುರಗಿ ಜಿಲ್ಲೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಮ ಕೋಲಿ, ಅವ್ವಣ್ಣ ಮ್ಯಾಕೇರಿ, ಕೋಲಿ/ಕಬ್ಬಲಿಗ ಸಮಾಜದ ಪ್ರಭಾವಿ ಹಿಂದುಳಿದ ನಾಯಕ ಮತ್ತು ಬಿಜೆಪಿ ಪಕ್ಷದ ನಿಷ್ಠಾವಂತ ಮುಖಂಡ. ಒಂದೇ ಪಕ್ಷದಲ್ಲಿ 20 ವರ್ಷಗಳಿಂದ ದುಡಿಯುತ್ತಾ ಬಂದ ಹಿಂದುಳಿದ ನಾಯಕರಾಗಿದ್ದು, ಇವರನ್ನು ಬಿಜೆಪಿ ಕಲಬುರಗಿ ಜಿಲ್ಲೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಎಂದು ಜಿಲ್ಲೆಯ ಬಿಜೆಪಿ ಮುಖಂಡರಿಗೂ ಹಾಗೂ ರಾಜ್ಯಧ್ಯಕ್ಷರಿಗೂ ಮನವಿ ಮಾಡಿದರು.
ಕಲಬುರಗಿ ಜಿಲ್ಲೆಯಲ್ಲಿ 5-6 ಲಕ್ಷ ಜನಸಂಖ್ಯೆ ಹೊಂದಿರುವ ಕೋಲಿ ಸಮಾಜವನ್ನು ಬಿಜೆಪಿ ಪಕ್ಷ ಕೇವಲ ಮತದಾನಕ್ಕೆ ಮಾತ್ರ ಸೀಮೀತ ಅಧಿಕಾರಕ್ಕಲ್ಲ ಎಂಬಂತೆ ಕೋಲಿ ಸಮಾಜದವರನ್ನು ನಡೆಸಿಕೊಳ್ಳುತ್ತಿದೆ. ಯಾಕೆಂದರೆ ನಮ್ಮ ಸಮಾಜದವರನ್ನು ಯಾವುದೇ ಹುದ್ದೆ ನೀಡದೆ ಕಡೆಗಣಿಸುತ್ತಿದ್ದಾರೆ.
ಈಗಾಗಲೇ ಈ ಹಿಂದೆ ಇದ್ದ, ಅಧ್ಯಕ್ಷರನ್ನ ನೇಮಕ ಮಾಡಲಾಗಿದ್ದು, ಅವರನ್ನೇ ನೇಮಕ ಮಾಡುವ ಉದ್ದೇಶ ಪಕ್ಷಕ್ಕೆ ಇದ್ದರೆ, ಜಿಲ್ಲಾಧ್ಯಕ್ಷ ಸ್ಥಾನ ಖಾಲಿ ತೋರಿಸುವ ಬದಲಾಗಿ ಅವರನ್ನೇ ಮುಂದುವರಿಸಿ ಆದೇಶ ಹೊರಡಿಸಲಾಗಿದೆ ಎಂದು ಹೇಳಬಹುದಿತ್ತು. ಅದೆಲ್ಲ ಬಿಟ್ಟು ಜಿಲ್ಲಾಧ್ಯಕ್ಷರ ಹುದ್ದೆಗೆ ಆಕಾಂಕ್ಷಿಗಳ ಪಟ್ಟಿ ಸಂಗ್ರಹ ಮಾಡಿ ಅವರ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡುವಂತೆ ನಾಟಕವಾಡಿ ಕೋಲಿ ಸಮಾಜಕ್ಕೆ ಅವಮಾನ ಮಾಡುವ ರೀತಿಯಲ್ಲಿ ಹಿಂದೆ ಇದ್ದ, ಅಧ್ಯಕ್ಷರನ್ನ ನೇಮಕ ಮಾಡುವ ಮೂಲಕ ಕೋಲಿ ಸಮಾಜವನ್ನು ಈ ಪಕ್ಷ ಕಡೆಗಣಿಸಿದೆ ಎಂದು ಆರೋಪಿಸಿದರು.
ಅವ್ವಣ್ಣ ಮ್ಯಾಕೇರಿ ಅವರನ್ನು ಕಲಬುರಗಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಮರು ನೇಮಕ ಮಾಡಲೇ ಬೇಕು ಎಂದು ಆಗ್ರಹಿಸಿದ ಅವರು, ಜನವರಿ 23ರ ಒಳಗಾಗಿ ಮರು ನೇಮಕ ಮಾಡಿ ಆದೇಶ ಹೊರಡಿಸಿ ಕೋಲಿ ಸಮಾಜದ ಪ್ರೀತಿಗೆ ಪಾತ್ರರಾಗಿ, ಪಕ್ಷ ಬಲಗೊಳ್ಳಲು ಸಹಕಾರ ಮಾಡಬೇಕು ಒತ್ತಾಯಿಸಿದರು.
ಜನವರಿ 23ರ ಒಳಗಾಗಿ ಮರು ನೇಮಕ ಮಾಡಿ ಆದೇಶ ಹೊರಡಿಸದೇ ಇದ್ದ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಮತ್ತು ಜಿಲ್ಲೆಯ ಎಲ್ಲಾ ಹಳ್ಳಿ-ಹಳ್ಳಿಗಳಿಗೂ ತಿರುಗಾಡಿ ಹಳ್ಳಿಯಲ್ಲಿರುವ ಸಮಾಜದ ಸಂಘಟನೆಯ ಮೂಲಕ ʼಬಿಜೆಪಿ ಹಠಾವೋ, ಕೋಲಿ ಸಮಾಜ ಬಚಾವೋʼ ಎಂಬ ಅಭಿಯಾನ ಪ್ರಾರಂಭ ಮಾಡಬೇಕಾದ ಅನಿವಾರ್ಯ ಇರುತ್ತದೆ ಎಂದು ಸುದ್ದಿಗೋಷ್ಠಿ ಮೂಲಕ ಜಿಲ್ಲೆಯ ಬಿಜೆಪಿ ಎಲ್ಲಾ ಮುಖಂಡರಿಗೂ ಹಾಗೂ ರಾಜ್ಯದ್ಯಕ್ಷರಿಗೂ ಈ ಮೂಲಕ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರವಿ ಡೊಂಗರಗಾಂವ್, ಶಿವಕುಮಾರ್ ಕಲಗರ್ತಿ, ಪರಮಾನಂದ ಬಾಗೋಡಿ, ಪರಮೇಶ್ವರ್ ಜಮಾದಾರ್, ಬೆಳ್ಳಪ್ಪ ಇಂಗಲಕಲ್, ಸಂತೋಷ ಜಮಾದಾರ್, ಬಾಪುಗೌಡ, ಸಂತೋಷ ಕಲ್ಲೂರ್, ಪ್ರವೀಣ್ ಜಮಾದಾರ್, ವಿಜಯಕುಮಾರ್ ಜಮಾದಾರ್ ಇನ್ನಿತರರು ಉಪಸ್ಥಿತರಿದ್ದರು.