ಕಬ್ಬು ಬೆಳೆಗಾರರ ಬಾಕಿಹಣ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಕಲಬುರಗಿ ಜಿಲ್ಲೆಯ ಅಫಜಲಪುರದ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಳಿಕ ರೈತರ ನಿಯೋಗ ಸ್ಥಳೀಯ ಅಧಿಕಾರಿ ಮೂಲಕ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಚರ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
“ಅಫಜಲಪುರ ತಾಲೂಕಿನ ಭೀಮಾನದಿಯ ನೀರಾವರಿ ಅಫಜಲಪುರ ತಾಲೂಕು ಗಳ್ಳುರು ಮತ್ತು ಮೊನಟಗಾ ಬ್ರಿಜ್ ಕಂ ಬ್ಯಾರೆಜ್ ಕಾಮಗಾರಿ ಮುಗಿದಿದೆ. ಆದರೆ ಗೇಟ್ ಅಳವಡಿಸಿಲ್ಲ. ಮುಳುಗಡೆ ಪ್ರದೇಶದ ರೈತರಿಗೆ ಪರಿಹಾರ ನೀಡಿ ಬ್ರಿಜ್ ಕಂ ಬ್ಯಾರೇಜ್‌ಗೆ ಗೇಟ್ ಅಳವಡಿಸಿ ನೀರು ಸಂಗ್ರಹವಾಗುವಂತೆ ಮಾಡಿ, ರೈತರಿಗೆ ನೀರಾವರಿ ಮಾಡಲು ಒತ್ತು ಕೊಡಬೇಕು” ಎಂದು ಒತ್ತಾಯಿಸಬೇಕು.
“ಕಬ್ಬು ಬೆಳೆಗಾರರ 2022 ಮತ್ತು 2023ರ ಸಾಲಿನ ಕಬ್ಬು ಕಟಾವು ಮಾಡಿದ ಕಬ್ಬಿನ ಬಾಕಿಹಣವನ್ನು ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ(ಎಫ್‌ಆರ್‌ಪಿ) ಪ್ರಕಾರ ಬಾಕಿಹಣ ಬಿಡುಗಡೆ ಮಾಡದೆ ರೈತರಿಗೆ ದ್ರೋಹ ಬಗೆದಿದೆ. ರೇಣುಕಾ ಶುಗರ್ಸ್ ಹಾವಳಗಾ ಸಕ್ಕರೆ ಕಾರ್ಖಾನೆ ಪ್ರತಿ ರೈತರಿಂದ ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ಪ್ರಕಾರ ₹112 ಬಾಕಿ ಉಳಿಸಿಕೊಂಡ ಕಾರ್ಖಾನೆ ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡಿದೆ” ಎಂದು ಆರೋಪಿಸಿದರು.
“ಅಫಜಲಪುರ ತಾಲೂಕಿನ ಚಿಮಣಗೆರಾ ಸಕ್ಕರೆ ಕಾರ್ಖಾನೆಯು 2022 ಮತ್ತು 2023ನೇ ಸಾಲಿನಲ್ಲಿ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ ₹162 ಬಾಕಿಹಣ ಉಳಿಸಿಕೊಂಡಿದ್ದು, ಕಬ್ಬು ಬೆಳೆಗಾರರ ಬೆನ್ನಿಗೆ ಚೂರಿ ಹಾಕಿದೆ” ಎಂದರು.
“ರೇಣುಕಾ ಶುಗರ್ಸ್ ಹಾವಳಗಾ ಒಟ್ಟು 23,000 ಮಂದಿ ರೈತರ 10 ಲಕ್ಷ ಟನ್ ಕಬ್ಬಿಗೆ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ ಪ್ರಕಾರ ಪ್ರತಿ ಟನ್ ಕಬ್ಬಿಗೆ ₹112ರಂತೆ ಒಟ್ಟು ₹11,20,00,000 ಕಬ್ಬಿನ ಬಾಕಿಹಣ ಕೊಡಬೇಕು. ಕೆಆರ್‌ಪಿ ಚಿಣಮಗೆರಾ ಸಕ್ಕರೆ ಕಾರ್ಖಾನೆಯಲ್ಲಿ ಎಫ್‌ಆರ್‌ಪಿ ಪ್ರಕಾರ ಪ್ರತಿ ಟನ್ ಕಬ್ಬಿಗೆ ₹162ರಂತೆ ಒಟ್ಟು 25,000 ಮಂದಿ ರೈತರ 11 ಲಕ್ಷ ಟನ್ ಕಬ್ಬಿನ ಬಾಕಿಹಣ ₹17,82,00,000 ಕೊಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಫರ್ ಝೋನ್ ವ್ಯಾಪ್ತಿಯಲ್ಲಿ ರೆಸಾರ್ಟ್; ನೈಜ ಹೋರಾಟಗಾರರ ವೇದಿಕೆಯಿಂದ ಜಿಲ್ಲಾಧಿಕಾರಿಗೆ ದೂರು
ಕಬ್ಬು ಬೆಳೆಗಾರರ ಬಾಕಿಹಣವನ್ನು ನೀಡುವಂತೆ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ
ಕೆಆರ್‌ಪಿ ಚಿಣಮಗೆರಾ ಸಕ್ಕರೆ ಕಾರ್ಖಾನೆ, ರೇಣುಕಾ ಶುಗರ್ಸ್ ಹಾವಳಗಾ ಕಾರ್ಖಾನೆಗಳ ಮಾಲೀಕರು ಮತ್ತು ರೈತರನ್ನು ಕರೆಯಿಸಿ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಸಿ ಮುಂಗಾರು ಅಧಿವೇಶನ ಕ್ಯಾಂಪ್ ಚರ್ಚಿಸಿ ರೈತರ ಬಾಕಿರುವ ಹಣ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.
ಶರಣಬಸಪ್ಪಾ ಮಮಶೆಟ್ಟಿ, ಸಿದ್ದರಾಮ ಎಸ್ ದಣ್ಣೂರ, ಅಶೋಕ ಹೂಗಾರ, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷರು, ಅಧ್ಯಕ್ಷರು, ಜಲ ಸಮಿತಿ ಒಕ್ಕೂಟ ಕಾರ್ಯದರ್ಶಿಗಳು ಸೇರಿದಂತೆ ಬಹುತೇಕರು ಇದ್ದರು.
